Advertisement

ವಾಡಿಯಲ್ಲಿ ಮಾಸ್ಕ್ ಧರಿಸದ ವ್ಯಾಪಾರಿಗಳಿಗೆ ದಂಡ

07:31 AM Jun 20, 2020 | Suhan S |

ವಾಡಿ: ಲಾಕ್‌ಡೌನ್‌ ಸಡಿಲಿಕೆ ನಂತರ ಸಾರ್ವಜನಿಕ ಓಡಾಟಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು. ಈಗ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಖಾಕಿ ಪಡೆ ಮತ್ತೆ ಜಾಗೃತಗೊಂಡಿದ್ದು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಮೂಲಕ ಸಾಂಕ್ರಾಮಿಕ ರೋಗದ ಎಚ್ಚರಿಕೆ ನೀಡಲಾಗುತ್ತಿದೆ.

Advertisement

ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೆ ವ್ಯಾಪಾರ ನಡೆಸುತ್ತಿರುವವರನ್ನು ಗುರಿಯಾಗಿಟ್ಟುಕೊಂಡು ವಿಶೇಷ ಪೇದೆ ದತ್ತು ಜಾನೆ, ದೊಡ್ಡಪ್ಪ ಪೂಜಾರಿ ಅವರೊಂದಿಗೆ ಫೀಲ್ಡಿಗಿಳಿದಿರುವ ಪಿಎಸ್‌ಐ ವಿಜಯಕುಮಾರ ಭಾವಗಿ, ಕೋವಿಡ್‌-19 ಸಾಂಕ್ರಾಮಿಕ ರೋಗ ಕೋವಿಡ್ ನಿಯಂತ್ರಣದ ಕಾನೂನು ಉಲ್ಲಂಘಿಸಿದ ಠಾಣಾ ವ್ಯಾಪ್ತಿಯ ರಾವೂರ, ವಾಡಿ ಹಾಗೂ ನಾಲವಾರ ವಲಯದ 45 ಜನ ವರ್ತಕರಿಗೆ ತಲಾ ರೂ. 100ರಂತೆ ಒಟ್ಟು 4500 ರೂ. ದಂಡ ವಿಧಿಸುವ ಮೂಲಕ ಕೋವಿಡ್ ರೋಗದಿಂದ ಅಂತರ ಕಾಯ್ದುಕೊಳ್ಳದವರಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ.

ಮುಖಕ್ಕೆ ಮಾಸ್ಕ್ ಧರಿಸದೆ ಮನೆಯಿಂದ ಹೊರಗಡೆ ಬರಬೇಡಿ. ಯಾರನ್ನಾದರೂ ಮತ್ತು ಯಾವುದೇ ವಸ್ತುವನ್ನು ಮುಟ್ಟಿದಾಕ್ಷಣ ಕೈಗಳನ್ನು ಸ್ಯಾನಿಟೈಸರ್‌ನಿಂದ ತೊಳೆದುಕೊಳ್ಳಿ. ಹಣ್ಣು, ತರಕಾರಿ, ದಿನಸಿ ವ್ಯಾಪಾರಿಗಳು ಸೇರಿದಂತೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಆರಂಭಿಕವಾಗಿ ವರ್ತಕರಿಗೆ ದಂಡ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಾಸ್ಕ್ ಧರಿಸದ ಗ್ರಾಹಕರಿಗೆ ಮತ್ತು ರಸ್ತೆ ಮೇಲೆ ಸಂಚರಿಸುವ ಸಾರ್ವಜನಿಕರಿಗೂ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next