Advertisement

ಕೈಚಳಕದ ಕಲೆ ಸ್ಪೀಡ್‌ ಪೈಂಟಿಂಗ್‌

09:15 AM Mar 05, 2020 | mahesh |

ಚಿತ್ರಕಲೆ ಪುರಾತನವಾದ ಒಂದು ಕಲಾಪ್ರಕಾರ. ರಾಜಾ ರವಿ ವರ್ಮನಂತಹ ಪ್ರಸಿದ್ಧ ಚಿತ್ರಗಾರರ ಪೈಂಟಿಂಗ್‌ಗಳು ಇಂದಿಗೂ ಜೀವಂತವಾಗಿವೆಯೆಂದರೆ ಅದಕ್ಕೆ ಆ ಚಿತ್ರದ ಕಲಾತ್ಮಕತೆಯೇ ಸಾಕ್ಷಿ. ಅನಂತರದ ಕಾಲಘಟ್ಟದಲ್ಲಿ ಅದೂ ಮತ್ತಷ್ಟು ಬೆಳೆಯಿತು. ಈಗ ಸ್ಪೀಡ್‌ ಫೈಂಟಿಂಗ್‌ನ ಕಾಲ. ಇದು ಪೈಂಟಿಂಗ್‌ನ ಒಂದು ವಿಧ. ಎಲ್ಲವನ್ನೂ ನಿಮಿಷಗಳಲ್ಲಿ ಚಿತ್ರಿಸುವ ಈ ಕಲೆಯಲ್ಲಿ ಕಲೆಗಾರನ ಕೈಚಳಕ ಅತೀ ಮುಖ್ಯ. ಅದಕ್ಕಿಂತಲೂ ಹೆಚ್ಚಾಗಿ ತನ್ನ ಮುಂದಿರುವ ವಸ್ತುವನ್ನು ಅದರಂತೆಯೇ ಗ್ರಹಿಸಿ ಅದಕ್ಕೆ ನಿಮಿಷಗಳಲ್ಲಿ ರೂಪಕೊಡಲು ಅವನ ಗ್ರಹಣ ಶಕ್ತಿಯೂ ತುಂಬಾ ಮುಖ್ಯ.

Advertisement

ಚಿತ್ರ ಕಲೆಯಲ್ಲಿ ಆಸಕ್ತಿ ಮುಖ್ಯ
ಮೊದಲಾಗಿ ಚಿತ್ರಕಲೆ ಅಥವಾ ಸ್ಪೀಡ್‌ ಪೈಂಟಿಂಗ್‌ ಯಾವುದೇ ಇರಲಿ ಅದು ತಾನಾಗಿಯೇ ಒಲಿದಿರಬೇಕು. ಸ್ಪೀಡ್‌ ಪೈಂಟಿಂಗ್‌ನ್ನು ಪಾರ್ಟ್‌ ಅಥವಾ ಫ‌ುಲ್‌ ಟೈಂ ಜಾಬ್‌ ಆಗಿ ಸ್ವೀಕರಿಸಬಹುದು. ಚಿತ್ರಕಲೆಯೇ ನಿಮ್ಮ ಪ್ರೊಫೆಶನ್‌ ಆಗಿದ್ದರೆ ಅದನ್ನೇ ವೃತ್ತಿಯಾಗಿ ಮುಂದುವರಿಸಬಹುದು. ಆದರೆ ನಿಮ್ಮ ವೃತ್ತಿ ಬೇರೆ ಇದ್ದು ಪ್ರವೃತ್ತಿ ಚಿತ್ರಕಲೆಯಾಗಿದ್ದರೆ ಪಾರ್ಟ್‌ ಟೈಂ ಕೆಲಸ ಆಗಿ ಸ್ಪೀಡ್‌ ಪೈಟಿಂಗ್‌ನ್ನು ಆಯ್ದುಕೊಳ್ಳಬಹುದು.ಮೊದಲೇ ಹೇಳಿದಂತೆ ಇದು ಕರಗತ ಕಲೆ ಇದಕ್ಕೆ ವಿದ್ಯಾಭ್ಯಾಸದ ಅಗತ್ಯವಿಲ್ಲ.

ಇದೊಂದು ಹೊಸ ಫೀಲ್ಡ್‌ ಆದ್ದರಿಂದ ದೇಶಾದ್ಯಂತ ಸ್ಪೀಡ್‌ ಪೈಂಟಿಂಗ್‌ಗೆ ಪ್ರಸ್ತುತ ಯಾವುದೇ ಕೋರ್ಸ್‌ಗಳು ಇಲ್ಲ. ಅದಕ್ಕಿಂತಲೂ ಮುಖ್ಯವಾಗಿ ಹೇಳಿಕೊಟ್ಟು ಕಲಿಯುವ ವೃತ್ತಿ ಅಲ್ಲ. ಇದು ವ್ಯಕ್ತಿಯ ಕಲಿಯುವಿಕೆಯ ಮೇಲೆ ಅವಲಂಬಿಸಿರುತ್ತದೆ. ಇತರರನ್ನು ಕೇಳಿ ಅಥವಾ ವೀಡಿಯೋ ನೋಡಿ ತಮ್ಮ ಪೈಟಿಂಗ್‌ಗಳನ್ನು ಬರೆದು, ಅಳಿಸಿ ಮತ್ತಷ್ಟು ವೇಗ ಹೆಚ್ಚಿಸುತ್ತಾ ಹೋದಂತೆ ಅದರಲ್ಲಿ ನಿಖರತೆ ಅಧಿಕವಾಗುತ್ತಾ ಹೋಗುತ್ತದೆ.

ಉತ್ತಮ ಚಿತ್ರಗಾರನಾಗುವುದರ ಜತೆಗೆ ತನ್ನ ಕಲೆಯನ್ನು ಇತರರ ಮುಂದೆ ಪ್ರದರ್ಶಿಸುವುದೂ ತಿಳಿದಿರಬೇಕು. ಇದರ ಸ್ಟೇಜ್‌ ಕಾರ್ಯಕ್ರಮಗಳಂತೆ ಇದಕ್ಕೂ ನೋಡುಗರನ್ನು ಒಂದೇ ಕಡೆ ಹಿಡಿದಿಡುವ ತಂತ್ರ ಅತಿ ಮುಖ್ಯ. ಅದು ತಿಳಿದಿದ್ದರೆ ಒಬ್ಬ ಯಶಸ್ವೀ ಸ್ಪೀಡ್‌ ಪೈಂಟರಾಗಲು ಸಾಧ್ಯ.

ಶ್ರಮ ಯಶಸ್ಸಿನ ಸೂತ್ರ: ವಿಲಾಸ್‌ ನಾಯಕ್‌
ಸ್ಪೀಡ್‌ ಪೈಂಟಿಂಗ್‌ನಲ್ಲಿ ದಾಖಲೆ ನಿರ್ಮಿಸಿ ವಿಶ್ವಮಟ್ಟದಲ್ಲಿ ಖ್ಯಾತರಾಗಿರುವ ವಿಲಾಸ್‌ ನಾಯಕ್‌ ಹೇಳುವಂತೆ ಸ್ಪೀಡ್‌ ಪೈಂಟಿಂಗ್‌ನ್ನು ಒಂದು ಪ್ರೊಫೆಶನ್‌ ಆಗಿ ತೆಗೆದುಕೊಳ್ಳಬಹುದು. ಆದರೆ ಇತರ ಎಲ್ಲ ಪ್ರೊಫೆಶನ್‌ಗಳಂತೆ ಇದಕ್ಕೂ ಕಠಿನ ಪರಿಶ್ರಮ ಹೆಚ್ಚು ಬೇಕು. ಇವತ್ತಿಗಿಂತ ನಾಳೆ ಹೇಗೆ ಉತ್ತಮವಾಗಿ ಚಿತ್ರಿಸಬಹುದು ಎಂದು ಆಲೋಚಿಸಿದರೆ ಮಾತ್ರ ಯಶಸ್ಸು ಸಾಧ್ಯ. ಇದು ವ್ಯಕ್ತಿಗಳನ್ನು ಅವಲಂಬಿಸಿರುತ್ತದೆ. ಇದನ್ನೇ ಫ‌ುಲ್‌ಟೈಂ ಉದ್ಯೋಗವಾಗಿ ಸ್ವೀಕರಿಸುವರು ಮೊದಲೇ ಯೋಜನೆಯನ್ನು ಹಾಕಿಕೊಂಡಿರಬೇಕಾಗುತ್ತದೆ. ಮೊದಲು ಪಾರ್ಟ್‌ಟೈಂ ಆಗಿ ಸ್ಪೀಡ್‌ ಪೈಂಟಿಂಗ್‌ನ್ನು ತೆಗೆದುಕೊಂಡು ಅನಂತರ ಉದ್ಯಮವನ್ನಾಗಿ ಮಾಡಬಹುದು. ಕಠಿನ ಪರಿಶ್ರಮವೇ ನನ್ನ ಯಶಸ್ಸಿಗೆ ಕಾರಣ.

Advertisement

- ಸುಶ್ಮಿತಾ ಶೆಟ್ಟಿ , ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next