Advertisement

ಮಾಣಿಬೆಟ್ಟು: ನೂತನ ಶಿಲಾಯುಗಕ್ಕೆ ಸಂಬಂಧಿಸಿದ ಅವಶೇಷಗಳು ಪತ್ತೆ

01:00 AM Feb 27, 2019 | Team Udayavani |

ಕಾಪು : ಶಿರ್ವ ಗ್ರಾಮದ ಮಾಣಿಬೆಟ್ಟು ಪರಿಸರದಲ್ಲಿ ಬ್ರಹ್ಮಾವರ ಕ್ರಾಸ್‌ಲ್ಯಾಂಡ್‌ ಕಾಲೇಜಿನ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರೀಯ ಉಪನ್ಯಾಸಕ ಶ್ರುತೇಶ್‌ ಆಚಾರ್ಯ ಮೂಡುಬೆಳ್ಳೆ ಮತ್ತು ಇತಿಹಾಸ ಮತ್ತು ಪುರಾತತ್ವ ಸಂಶೋಧಕ ಸುಭಾಸ್‌ ನಾಯಕ್‌ ಬಂಟಕಲ್ಲು ಅವರು ಕ್ಷೇತ್ರ ಕಾರ್ಯ ಶೋಧನೆ ಕೈಗೊಂಡ ಸಂದರ್ಭದಲ್ಲಿ ನೂತನ ಶಿಲಾಯುಗಕ್ಕೆ ಸಂಬಂಧಪಟ್ಟಂತಹ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ.

Advertisement

ಈ  ಮೊದಲು ಇಲ್ಲಿ ನೂತನ ಶಿಲಾಯುಗಕ್ಕೆ ಸಂಬಂಧಿಸಿದ ಕಲ್ಲಿನ ಕೊಡಲಿಯು ಪತ್ತೆಯಾಗಿದ್ದು, ಈಗ ಕಲ್ಲಿನ ಕೊಡಲಿ ಹಾಗೂ ಕೊಡಲಿಯ ಮೇಲ್ಭಾಗ ಮತ್ತು ಕಲ್ಲಿನ ಬಾಣದ ಮೊನೆಯು ಪತ್ತೆಯಾಗಿರುತ್ತದೆ. ಈ ಉಪಕರಣಗಳನ್ನು ಡಾಲರೈಟ್‌ ಶಿಲೆಯಿಂದ ಉಜ್ಜಿ ನಯಗೊಳಿಸಿ ಮಾಡಲಾಗಿದೆ.

ಬಾಣದ ಮೊನೆಯು 4 ಸೆಂ. ಮೀ ಉದ್ದವನ್ನು ಹೊಂದಿದ್ದು ಹರಿತವಾದ ಅಲಗನ್ನು ಹೊಂದಿದೆ. ಈ ಎಲ್ಲಾ ಉಪಕರಣಗಳನ್ನು ಡಾ| ಎಸ್‌.ಜಿ. ಸಾಮಕ್‌ ಅವರು ನೂತನ ಶಿಲಾಯುಗದ ಉಪಕರಣಗಳೆಂದು ಸ್ಪಷ್ಟ ಪಡಿಸಿದ್ದಾರೆ.

ಈ ಅವಶೇಷಗಳ ಆಧಾರದ ಮೇಲೆ ಮಾಣಿಬೆಟ್ಟು ಪ್ರದೇಶದ ಪ್ರಾಚೀನತೆಯನ್ನು ನೂತನ ಶಿಲಾಯುಗದ‌ ಕ್ರಿ. ಪೂ 3000 ವರ್ಷ ಕಾಲಮಾನಕ್ಕೆ ಕೊಂಡೊಯ್ಯಬಹುದು. ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆದಲ್ಲಿ ಹೆಚ್ಚಿನ ಅವಶೇಷಗಳು ದೊರೆಯುವ ಸಾಧ್ಯತೆಯಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next