ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಗುರುವಾರದಂದು ಬೆಂಗಳೂರು, ಬಳ್ಳಾರಿ, ಭದ್ರಾವತಿ, ದಾವಣಗೆರೆ, ಹಾಸನ, ಗದಗ, ನೆಲಮಂಗಲ, ವಿಜಯುಪುರ, ರಾಯಚೂರಿನಲ್ಲಿ 12 ಮಂದಿ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ, ನಗದು ವಶಕ್ಕೆ ಪಡೆದುಕೊಂಡಿದೆ.
ಅಧಿಕಾರಿಗಳು- ಆಸ್ತಿ ವಿವರ: ನೆಲಮಂಗಲ ವಾಜರಹಳ್ಳಿ ಗ್ರಾಪಂ ರಾಜ್ ಅಭಿವೃದ್ಧಿ ಅಧಿಕಾರಿ ರೇಖಾರ ನೆಲಮಂಗಲದಲ್ಲಿ ಮನೆ, 8 ನಿವೇಶನ, 1 ಕಾರು, 2 ಬೈಕ್, 34.4 ಲಕ್ಷ , 264 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ, 1.7 ಲಕ್ಷ ಬ್ಯಾಂಕ್ ಬ್ಯಾಲೆನ್ಸ್, 55 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.
ಕರ್ನಾಟಕ ನೀರಾವರಿ ನಿಗಮ ಭದ್ರಾವತಿ ಕಲ್ಲಿಹಾಳ ವಿಭಾಗದ ಸಹ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಎಸ್.ಬಾಲನ್‌ರ ಹೊನ್ನಾವರದಲ್ಲಿ 4 ಮನೆ, 1 ಮನೆ, ದಾವಣಗೆರೆಯಲ್ಲಿ 14.8 ಗುಂಟೆ ಜಮೀನು, 3 ಕಾರು,
2 ಬೈಕ್, 5 ಲಕ್ಷ ಮೌಲ್ಯದ ಆಭರಣ, ಅಂದಾಜು 4 ಲಕ್ಷ ಗೃಹ ಬಳಕೆ ವಸ್ತುಗಳು ಸಿಕ್ಕಿವೆ. ದಾವಣಗೆರೆ ಜಿಲ್ಲೆ ಹೊನ್ನಾಳಿ
ಬೆಸ್ಕಾಂ ಸಹ ಕಾರ್ಯನಿರ್ವಾಹಕ ಎಂಜಿನಿಯರ್ ಜೆ.ಸಿ.ಜಗದೀಶಪ್ಪ, ಬಳ್ಳಾರಿ ಉಪ-ಉಪವಿಭಾಗದ ಸಹ ಆಯುಕ್ತ ಬಿ.ಟಿ.ಕುಮಾರಸ್ವಾಮಿ, ಹಾಸನ ಜಿಲ್ಲೆ ಸಕಲೇಶಪುರದ ಲೋಕೋಪಯೋಗಿ ಇಲಾಖೆ ಸಹ ಎಂಜಿನಿಯರ್ ವೆಂಕಟೇಶ್, ಗದಗ ಜಿಲ್ಲೆ ನರಗುಂದ ತಾಪಂ ಇಒ ಅಶೋಕ ಗೌಡಪ್ಪ ಪಾಟೀಲ್, ರಾಯಚೂರು ಅಮರೇಶ್ ಬೆಂಚಮರಡಿ ಅಧಿಕಾರಿಗಳ ಮೇಲೆ ದಾಳಿ ನಡೆದಿದ್ದು ದಾಖಲೆ ಪರಿಶೀಲನೆ ಮುಂದುವರಿದಿದೆ.
ಬೆಂಗಳೂರಿನಲ್ಲೇ ಹೆಚ್ಚು ಆಸ್ತಿ ಬೆಂಗಳೂರಿನ ಕೆಪಿಟಿಸಿಎಲ್‌ನ ಅಧೀಕ್ಷಕ ಅಭಿಯಂತರ ಎನ್.ಆರ್. ಎಂ.ನಾಗರಾಜನ್‌ಗೆ ಸೇರಿದ ವಿವಿಧ ಸ್ಥಳಗಳಲ್ಲಿರುವ 2 ಮನೆ, ವಿವಿಧೆಡೆ 10 ಮನೆ, 798 ಗ್ರಾಂ ಚಿನ್ನ, 5,711 ಗ್ರಾಂ ಬೆಳ್ಳಿ ಹಾಗೂ 91 ಸಾವಿರ ನಗದು ಪತ್ತೆಯಾಗಿದೆ.ಬಿಬಿಎಂಪಿ ರಸ್ತೆ ಮತ್ತು ಮೂಲಭೂತ ಸೌಲಭ್ಯ ಹಾಗೂ ಪ್ರಭಾರ ಮುಖ್ಯ ಅಭಿಯಂತರ ಬಿ.ಎಸ್.ಪ್ರಹ್ಲಾದ್‌ರ 2 ಮನೆ, 3 ವಾಣಿಜ್ಯ ಕಟ್ಟಡ, ಜಮೀನು, 8 ನಿವೇಶನ, 2 ಕಾರು, 1 ಬೈಕ್, 731 ಗ್ರಾಂ ಚಿನ್ನ, 865 ಗ್ರಾಂ ಬೆಳ್ಳಿ, 94 ಸಾವಿರ ನಗದು ಸಿಕ್ಕಿದೆ. ಬಿಡಿಎ ಉಪನಿರ್ದೇಶಕ(ನಗರ ಯೋಜನೆ) ಆರ್ .ವಿ.ಕಾಂತರಾಜುಗೆ ಸೇರಿದ 5 ಮನೆ, 10 ಎಕರೆ ಕೃಷಿ ಜಮೀನು, 1,154 ಗ್ರಾಂ ಚಿನ್ನ, 4,560 ಗ್ರಾಂ ಬೆಳ್ಳಿ, 37 ಸಾವಿರ ನಗದು ಪತ್ತೆ. ಬಿಬಿಎಂಪಿ ಸಿವಿ ರಾಮನ್ ನಗರದ ಉಪವಿಭಾಗದ ತೆರಿಗೆ ಮೌಲ್ಯಮಾಪಕ ನರಸಿಂಗಲುಗೆ ಸೇರಿದ 3 ಮನೆ, 4 ನಿವೇಶನ, 1 ವಾಣಿಜ್ಯ ಕಟ್ಟಡ, ಚಿನ್ನ, ಬೆಳ್ಳಿ ಸಿಕ್ಕಿದೆ.