Advertisement

ಬೇಡರ ಹೊಸಳ್ಳಿಯಲ್ಲಿ ಆರು ವೀರ ಮಾಸ್ತಿ ಗುಡಿ ಪತ್ತೆ

05:01 PM Sep 15, 2018 | |

ಶಿವಮೊಗ್ಗ: ತಾಲೂಕಿನ ಕೆಳಗಿನ ಬೇಡರ ಹೊಸಹಳ್ಳಿಯಲ್ಲಿ ಈಚೆಗೆ ಆರುವೀರ ಮಾಸ್ತಿ ಗುಡಿಗಳು ಪತ್ತೆಯಾಗಿವೆ. ಮಾಸ್ತಿಗುಡಿ ಕ್ಷತ್ರಿಯ ಸಮಾಜದವರ ಶವ ಸುಡುವ ಜಾಗ ಎಂದು ಕರೆಯುವ ಈ ಜಾಗದಲ್ಲಿ ಈಚೆಗೆ ಪುರಾತತ್ವ ಸಂಗ್ರಾಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಹಾಗೂ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯಕಾಲೇಜು ಸಹಯೋಗದಲ್ಲಿ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳೊಂದಿಗೆ ಸ್ವತ್ಛತಾ ಕಾರ್ಯ ಕೈಗೊಂಡ ವೇಳೆ ಪತ್ತೆಯಾಗಿದೆ.

Advertisement

ಒಂದು ದೇವಾಲಯ ಸುಸ್ಥಿತಿಯಲ್ಲಿದ್ದು ಇನ್ನೂ ಐದು ಗುಡಿಗಳು ದುಸ್ಥಿತಿಯಲ್ಲಿದೆ. ಈ ಗುಡಿಗಳಿಲ್ಲಿರುವ ವೀರಮಾಸ್ತಿ ಶಿಲ್ಪಗಳು ಬಹಳ ಅಪರೂಪದವು ಎಂದು ಹೇಳಲಾಗುತ್ತಿದೆ. ಎಲ್ಲಾ ಕಡೆ ವೀರಗಲ್ಲು ಗುಡಿ ಅಥವಾ ಮಾಸ್ತಿಗಲ್ಲು ಗುಡಿ ನೊಡಬಹುದು. ಆದರೆ ಇಲ್ಲಿ ಒಂದೇ ಹತ್ತಿರ ಆರು ವೀರ ಮಾಸ್ತಿಗಲ್ಲು ಗುಡಿಗಳು ಕಂಡು ಬಂದಿದೆ. ಸ್ಥಳೀಯರ ಪ್ರಕಾರ ಇಲ್ಲಿ ಏಳು ಗುಡಿಗಳು ಇರುವುದಾಗಿ ತಿಳಿಸಿದ್ದಾರೆ. ಆದರೆ ಸ್ವತ್ಛತೆ ಮಾಡುವಾಗ ಆರು ಮಾತ್ರ ಪತ್ತೆಯಾಗಿವೆ.

 ವೀರಮಾಸ್ತಿಗಲ್ಲು ಗುಡಿಗಳ ವಿಶೇಷ: ವೀರರು ತಮ್ಮ ಊರಿನ ರಕ್ಷಣೆಗೋಸ್ಕರ ಕಳ್ಳರು ನುಗ್ಗಿದರೆ, ಗೋವುಗಳನ್ನು ಕದಿಯುತ್ತಿದ್ದರೆ, ಸ್ತ್ರೀಯರ ಅಪಹರಣ ಮಾಡುತ್ತಿದ್ದರೆ, ಯಾವುದಾದರೂ ಕಾಡು ಪ್ರಾಣಿಗಳು ಊರಿನ ಒಳಗೆ ನುಗ್ಗಿದರೆ ಆ ವೇಳೆ ಅವರನ್ನು ಸದೆ ಬಡಿದು ವೀರ ಮರಣ ಅಪ್ಪಿದಾಗ ಇಂತಹ ವೀರಗಲ್ಲು ನೆಡುತ್ತಿದ್ದರು. ಆದರೆ ಇಲ್ಲಿ ಈ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ.

ಒಂದು ಸೈನಿಕ ವ್ಯವಸ್ಥೆಯಲ್ಲಿ ಹೋರಾಡಿ ಮಡಿದವರ ವೀರಮಾಸ್ತಿಗಲ್ಲುಗಳೇ ಇರಬಹುದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಆರು ವೀರಮಾಸ್ತಿಗಲ್ಲು ಗುಡಿಯಲ್ಲಿ ನಮಗೆ ಕಂಡುಬಂದತೆ ನಾಲ್ಕು ಗುಡಿಯಲ್ಲಿ ವೀರಮಾಸಿಗಲ್ಲುಗಳು ಹಾಗೂ ಇನ್ನೊಂದರಲ್ಲಿ ಅಂದರೆ ಇದಕ್ಕೆ ಗುಡಿಯಿಲ್ಲದೆ ಬಯಲಲ್ಲಿ ಇದ್ದು ವೀರಯುದ್ಧಕ್ಕೆ ಕುದುರೆಯ ಮೇಲೆ ಕುಳಿತು ಹೊರಟಿರುವ ದೃಶ್ಯ ಕಂಡುಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next