Advertisement

ಕಕ್ಕಳಮೇಳಿಯಲ್ಲಿ ನಕಲಿ ವೈದ್ಯ ಪತ್ತೆ

01:25 PM Sep 25, 2018 | |

ಸಿಂದಗಿ: ತಾಲೂಕಿನಲ್ಲಿ ಬೇರೆ ರಾಜ್ಯಗಳಿಂದ ಆಗಮಿಸಿದ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಮಹಾರಾಷ್ಟ್ರದ ವಿವಿಧ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ವೈದ್ಯಕೀಯ ಸರ್ಟಿಫಿಕೇಟ್‌ ಪಡೆದು ನಾವು ಡಾಕ್ಟರ್‌ ಎಂದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವುದು ಸೋಮವಾರ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Advertisement

ತಾಲೂಕು ವೈದ್ಯಾಧಿಕಾರಿ ಡಾ| ಆರ್‌.ಎಸ್‌. ಇಂಗಳೆ ನೇತೃತ್ವದಲ್ಲಿ ಐಎಂಎ ತಾಲೂಕಾಧ್ಯಕ್ಷ ಡಾ| ಗಿರೀಶ ಕುಲಕರ್ಣಿ, ತಾಲೂಕು ವೃತ್ತಿಪರ ವೈದ್ಯರ ಸಂಘದ ಕಾರ್ಯದರ್ಶಿ ಡಾ| ಸಂಗಮೇಶ ಪಾಟೀಲ ಅವರ ನೇತೃತ್ವದಲ್ಲಿ ಸೋಮವಾರ ಖಚಿತ ಮಾಹಿತಿ ಮೇರೆಗೆ ತಾಲೂಕಿನ ಕಕ್ಕಳಮೇಳಿ ಗ್ರಾಮದಲ್ಲಿನ ಗ್ರಾಪಂ ಕಾರ್ಯಾಲಯದ ಪಕ್ಕದಲ್ಲಿರುವ ದವಾಖಾನೆ ಮೇಲೆ ನಡೆದ ದಾಳಿಯಲ್ಲಿ ಗ್ರಾಮದಲ್ಲಿ ನಕಲಿ ವೈದ್ಯನಿರುವುದು ಪತ್ತೆಯಾಗಿದೆ. 

ಸೊಲ್ಲಾಪುರ ಜಿಲ್ಲೆಯವನು ಎಂದು ಹೇಳಿಕೊಂಡಿರುವ ನಿಹಾರ ಬೈರಗಿ ಬಾತ್ರೊ ವೈದ್ಯಕೀಯ ಕೆಲಸ ಮಾಡುತ್ತಿದ್ದಾನೆ. ನಿಹಾರ ಬೈರಗಿ ಬಾತ್ರೊ ಇಂಡಿಯನ್‌ ಅಲóನೇಟಿವ್‌ ಮೇಡಿಸಿನ್‌ ಕೌನ್ಸಿಲ್‌ ಮುಂಬೈ ಈ ಸಂಸ್ಥೆ ಅಡಿಯಲ್ಲಿ ಬ್ಯಾಚುಲರ್‌ ಆಫ್‌ ಅಲóನೇಟಿವ್‌ ಸಿಸ್ಟಮ್‌ ಆಫ್‌ ಮೇಡಿಸಿನ್‌ ಸರ್ಟಿಫಿಕೇಟ್‌ ಪಡೆದಿದ್ದಾರೆ. ಈ ಸರ್ಟಿಫಿಕೇಟ್‌ನಲ್ಲಿ ಬಿಎಎಂಎಸ್‌ ಎಂದು ಮುದ್ರಣವಾಗಿದ್ದರಿಂದ ಗ್ರಾಮಸ್ಥರು ಸಹಜವಾಗಿ ವೈದ್ಯಕೀಯ ಸರ್ಟಿಫಿಕೇಟ್‌ ಪಡೆದ ವೈದ್ಯನೆಂದು ಅವನ ಹತ್ತಿರ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸರ್ಟಿಫಿಕೇಟ್‌ಗೆ ರಾಜ್ಯದಲ್ಲಿ ಮಾನ್ಯತೆಯಿಲ್ಲ.

ತಾಲೂಕಿನ ಕಕ್ಕಳಮೇಲಿ ಗ್ರಾಮದ ಗ್ರಾಪಂ ಕಾರ್ಯಾಲಯದ ಪಕ್ಕದಲ್ಲಿ ನಿಹಾರ ಬೈರಗಿ ಬಾತ್ರೊ ಅವರು ಒಂದು ಮನೆಯಲ್ಲಿ ದವಾಖಾನೆ ನಡೆಸುತ್ತಿದ್ದಾರೆ. ಇವರು ಅಲೋಪತಿಕ್‌ ಔಷಧಗಳನ್ನು ಬಳಸುತ್ತಿದ್ದರು. ಅಧಿಕಾರಿಗಳು ದವಾಖಾನೆ ಮೇಲೆ ದಾಳಿ ನಡೆಸಿದಾಗ ನಕಲಿ ವೈದ್ಯ ನಿಹಾರ ಬೈರಗಿ ಬಾತ್ರೊ ಅಲ್ಲಿ ಇರಲಿಲ್ಲ.

ದವಾಖಾನೆಯಲ್ಲಿರುವ ನಕಲಿ ಸರ್ಟಿಫಿಕೇಟ್‌ ಗಳು, ಅಲೋಪತಿಕ್‌ ಔಷಧ ಗಳು, ಚುಚ್ಚುಮದ್ದು, ಸ್ಟೇತಾಸ್ಕೋಪ್‌, ಬಿಪಿ ಅಪರೆràಸ್‌ ಮತ್ತು ನಿಹಾರ ಬೈರಗಿ ಬಾತ್ರೊ ಹೆಸರಿನಲ್ಲಿರುವ ನಕಲಿ ಸರ್ಟಿಫಿಕೇಟ್‌ ಗಳನ್ನು ವೈದ್ಯರ ತಂಡ ವಶಪಡಿಸಿಕೊಂಡರು. ನಂತರ ದವಾಖಾನೆಗೆ ಬೀಗ ಜಡಿದರು. ಈ ಕುರಿತು ಜಿಲ್ಲಾ ಆರೋಗ್ಯಾ ಧಿಕಾರಿ ಅವರಿಗೆ ಮಾಹಿತಿ ನೀಡಿದರು. 

Advertisement

ವೈದ್ಯರ ತಂಡ ದವಾಖಾನೆ ತಪಾಸಣೆ ಮಾಡುವ ಸಂದರ್ಭದಲ್ಲಿ ಅಲ್ಲಿದ್ದ ಮಹಿಳೆಯರು ವೈದ್ಯರೊಂದಿಗೆ ವಾಗ್ವಾದ ನಡೆಸಿದರು. ನಮ್ಮೂರಾಗ ಯಾರೂ ಡಾಕ್ಟರ್‌ ಇಲ್ಲ. ಆದರೆ ಸೊಲ್ಲಾಪುರ ಡಾಕ್ಟರ್‌ ನಮ್ಮೂರಿಗೆ ಬಂದು ಇಲ್ಲೆ ಅದಾರ. ರಾತ್ರಿ ಯಾರಿಗಾದರೂ ಆರಾಮ ತಪ್ಪಿದರ ಸೊಲ್ಲಾಪುರ ಡಾಕ್ಟರ್‌ ನೋಡ್ತಾರ. ಆದರೆ ಬಂದ್‌ ಮಾಡಿದರ ನಮ್ಮೂರಿಗೆ ಇನ್ನು 4-5 ಜನ ನಕಲಿ ವೈದ್ಯರು ಬರುತ್ತಾರ ಅವರಿಗೂ ಬಂದ್‌ ಮಾಡ್ರಿ ಎಂದು ವಾಗ್ವಾದ ನಡೆಸಿದ ಘಟನೆ ನಡೆಯಿತು.

ಕಕ್ಕಳಮೇಲಿ ಗ್ರಾಮ ದೊಡ್ಡದಾಗಿದ್ದು ಸುತ್ತಮುತ್ತಲಿನ ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ. ಗ್ರಾಮದಲ್ಲಿ ಸರಕಾರಿ ಆಸ್ಪತ್ರೆ ಪ್ರಾರಂಭಿಸಬೇಕು ಎಂದು ಗುಂಡಯ್ಯ ಕಾಯಕಮಠ, ಶಂಕಲಿಂಗ ಡಂಗಿ, ಸಂಗಮೇಶ ಮಾಲಿಪಾಟೀಲ, ಪ್ರಭಾಕರ ಹಳೆಪ್ಪಗೋಳ, ಶ್ರೀಧರ ಮಾಲಿಪಾಟೀಲ, ಪರಶುರಾಮ ಮಾಹೂರ ಅವರು ತಾಲೂಕು ವೈದ್ಯಾಧಿಕಾರಿ ಡಾ| ಆರ್‌.ಎಸ್‌. ಇಂಗಳೆ ಅವರಿಗೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next