Advertisement

ನಂದಿನಿಯಿಂದ ರೈತರಿಗೆ ಆರ್ಥಿಕ ಸ್ವಾವಲಂಬನೆ

03:30 PM Jun 23, 2017 | Team Udayavani |

ಕಲಬುರಗಿ: ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಜಿಲ್ಲೆಯ ಹಾಲು ಉತ್ಪಾದಕ ರೈತರಿಂದ ಸಂಗ್ರಹಿಸಿದ ಹಾಲನ್ನು ಸಂಸ್ಕರಿಸಿ ಗ್ರಾಹಕರಿಗೆ ವಿತರಿಸುವ ವ್ಯವಸ್ಥೆಯನ್ನು ಹಾಲುಒಕ್ಕೂಟ ಮಾಡುತ್ತಿದೆ.

Advertisement

ನಂದಿನಿ ರೈತರ ಸಹಕಾರಿ ಸಂಸ್ಥೆಯಾಗಿದ್ದು, ಇದರ ಮುಖ್ಯ ಉದ್ದೇಶ ರೈತರಿಗೆ ಪರ್ಯಾಯ ಆರ್ಥಿಕ ಸ್ವಾವಲಂಬನೆ ಒದಗಿಸುವ ಜೊತೆಗೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಪೂರೈಸುವುದಾಗಿದೆ ಎಂದು ಕಲಬುರಗಿ, ಬೀದರ ಹಾಗೂ ಯಾದಗಿರಿ ಹಾಲು ಒಕ್ಕೂಟ ಹಾಗೂ ಕಹಾಮ ಮಾರಾಟ ಮಳಿಗೆ ಸಹಾಯಕ ವ್ಯವಸ್ಥಾಪಕ ಮುಹಮ್ಮದ ಝಿಯಾಉಲ್ಲಾ ತಿಳಿಸಿದರು. 

ನಗರದ ಸಂಗಮೇಶ್ವರ ಮಹಿಳಾ ಮಂಡಳದಲ್ಲಿ ಕಲಬುರಗಿ, ಬೀದರ ಹಾಗೂ ಯಾದಗಿರಿ ಹಾಲು ಒಕ್ಕೂಟ ಹಾಗೂ ಕಹಾಮ ಮಾರಾಟ ಮಳಿಗೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಂದಿನಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಾಲಿನ ಉದ್ಯಮದಲ್ಲಿ  ಬಹಳಷ್ಟು ಅವ್ಯವಹಾರ ನಡೆದಿರುವುದು ಮಾಧ್ಯಮಗಳ ಮೂಲಕ ತಿಳಿದುಬರುತ್ತದೆ. ಆದ್ದರಿಂದ ಗ್ರಾಹಕರು ಹಾಲನ್ನು ಖರೀದಿಸುವಾಗ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.  ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ| ಚಂದ್ರಶೇಖರ ಕಮಕೇರಿ ಮಾತನಾಡಿ, ಹಾಲು ಮನುಷ್ಯನ ದೇಹಕ್ಕೆ ಬೇಕಾಗಿರುವ ಎಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿರುವ ಸಂಪೂರ್ಣ ಆಹಾರವಾಗಿದೆ.

ಆರೋಗ್ಯವಂತ ಜೀವನಕ್ಕಾಗಿ, ಮೂಳೆ ಸವೆತವನ್ನು ತಡೆಯಲಿಕ್ಕಾಗಿ ಇದರ ಸೇವನೆ ಮಹತ್ವದ್ದಾಗಿದೆ ಎಂದರು. ಹಾಲಿನ ಕೊಬ್ಬಿನಲ್ಲಿರುವ ಕೊಲೆಸ್ಟಿರಾಲ್‌ ಹೃದ್ರೋಗಕ್ಕೆ ಕಾರಣವಲ್ಲವೆಂದು ಇತ್ತಿಚಿನ ಸಂಶೋಧನೆಗಳಿಂದ ದೃಢಪಟ್ಟಿದೆ.

Advertisement

ನಂದಿನ ಜಾಗತಿಕ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ಸಿದ್ಧಪಡಿಸಿ ಗ್ರಾಹಕರಿಗೆ ಒದಗಿಸುತ್ತಿದೆ ಎಂದು ನಂದಿನಿ ಬ್ರಾಂಡಿನ ತುಪ್ಪ, ಪೇಡಾ, ಪಾಯಸ, ರಸಗುಲ್ಲಾ, ಜಾಮೂನು, ಮೈಸೂರಪಾಕ್‌, ಸುವಾಸಿತ ಹಾಲು ಇತ್ಯಾದಿಗಳ  ಪರಿಚಯ ಮಾಡಿದರು. 

ಸಂಗಮೇಶ್ವರ ಮಹಿಳಾ ಮಂಡಳದ ಅಧ್ಯಕ್ಷೆ ಇಂದಿರಾ ಮಾನ್ವಿಕರ, ಮಧುಮತಿ, ಒಕ್ಕೂಟದ ಜಂಟಿ ನಿರ್ದೇಶಕರಾದ ತಥಾಗತ ವನಖೇಡ, ಉಪ  ವ್ಯವಸ್ಥಾಪಕರಾದ ವಿಜಯೀಂದ್ರ ದೇಶಪಾಂಡೆ, ಕಹಾಮ ಮಾರಾಟ ಮಳಿಗೆಯ ಮೇಲ್ವಿಚಾರಕರಾದ ರಾಜಶೇಖರ ಹಾಗೂ ಇತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next