Advertisement

ಆರ್ಥಿಕ ಬಿಕ್ಕಟ್ಟು: ಪಾಕಿಸ್ತಾನ ಹಣದುಬ್ಬರ ಶೇ.47 ಹೆಚ್ಚಳ

09:56 PM Mar 26, 2023 | Team Udayavani |

ಇಸ್ಲಾಮಾಬಾದ್‌: ನೆರೆಯ ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದು, ತೀವ್ರ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರು ತತ್ತರಿಸುವಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.47ರಷ್ಟು ಹಣದುಬ್ಬರ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಈರುಳ್ಳಿ ಬೆಲೆ ಶೇ.228.8ರಷ್ಟು ಹೆಚ್ಚಳವಾಗಿದ್ದರೆ, ಸಿಗರೇಟ್‌ ಶೇ.165.88, ಗೋಧಿ ಹಿಟ್ಟು ಶೇ.120.66, ಅಡುಗೆ ಅನಿಲ ಶೇ.108.38, ಬಾಳೆಹಣ್ಣಿನ ಬೆಲೆ ಶೇ.89.84 ಹಾಗೂ ಮೊಟ್ಟೆಗಳ ಬೆಲೆ ಶೇ.79.56ರಷ್ಟು ಹೆಚ್ಚಳವಾಗಿದೆ. ಇನ್ನು ಪೆಟ್ರೋಲ್‌, ಡೀಸೆಲ್‌ನ ಬೆಲೆ ಕ್ರಮವಾಗಿ ಶೇ.81.17 ಹಾಗೂ 102.84ರಷ್ಟು ಹೆಚ್ಚಳವಾಗಿದೆ.

ಮೊದಲೇ ಸಂಕಷ್ಟದಿಂದ ಬಳಲುತ್ತಿರುವ ಜನರಿಗೆ ಬೆಲೆ ಏರಿಕೆ ಬರೆ ಎಳೆದಂತಾಗಿದ್ದು, ಸರ್ಕಾರ ನೀಡುತ್ತಿರುವ ಉಚಿತ ಪಡಿತರ ಪಡೆಯಲು ಮುಂದಾಗಿ ಕಾಲು¤ಳಿತಕ್ಕೆ ಸಿಕ್ಕಿ ಜನರು ಸಾಯುತ್ತಿರುವ ಘಟನೆಗಳು ವರದಿಯಾಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next