Advertisement

ಮೆಕ್ಕೆಜೋಳ ಬೆಳೆದ ರೈತರಿಗೆ 5 ಸಾವಿರ ಆರ್ಥಿಕ ನೆರವು

05:07 PM Jun 17, 2020 | Suhan S |

ಬಾಗಲಕೋಟೆ: ಕಳೆದ 2019-20ನೇ ಸಾಲಿನಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ 5 ಸಾವಿರ ರೂ. ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆರ್ಥಿಕ ನೆರವು ಯೋಜನೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಳೆ ಸರ್ವೇಯಲ್ಲಿ ದಾಖಲಾಗಿರುವ ಮೆಕ್ಕಜೋಳ ಬೆಳೆದ ರೈತರ ಪಟ್ಟಿ ರೈತರ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು ತಹಶೀಲ್ದಾರ್‌ ಮತ್ತು ಸಹಾಯಕ ಕೃಷಿ ನಿರ್ದೇಶಕರುಗಳಿಗೆ ಅರ್ಹ ರೈತರ ಅನುಮೋದನೆಗಾಗಿ ಲಾಗಿನ್‌ ನೀಡಲಾಗಿದೆ. ಅನುಮೋದನೆ ಕಾರ್ಯ ಚುರುಕುಗೊಳಿಸುವಂತೆ ಸೂಚಿಸಿದರು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಆರ್ಥಿಕ ನೆರವು ಪಡೆಯಲು ಗೋವಿನ ಜೋಳ ಬೆಳೆದ ರೈತ ಫಲಾನುಭವಿಗಳು ಜಮೀನು ಅವರ ಹೆಸರಿನಲ್ಲಿ ಇರಬೇಕು. ಜಂಟಿ ಖಾತೆ ಇದ್ದಲ್ಲಿ ಇತರೆ ಖಾತೆದಾರ ಒಪ್ಪಿಗೆ ಪತ್ರ ಪಡೆದಿರಬೇಕು. ತಂದೆ-ತಾಯಿ ಹೆಸರಿನಲ್ಲಿ ಜಮೀನು ಇದ್ದು, ಅವರು ಮರಣ ಹೊಂದಿದ್ದಲ್ಲಿ ಮಾತ್ರ ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢೀಕರಿಸಿ, ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಬಹುದು ಎಂದರು.

ಜಿಪಂ ಸಿಇಒ ಗಂಗೂಬಾಯಿ ಮಾನಕರ, ಡಿಸಿಸಿ ಬ್ಯಾಂಕ್‌ ಎಂ.ಡಿ ಎಸ್‌.ಎಂ. ದೇಸಾಯಿ, ಜಿಲ್ಲಾ ಅಗ್ರಣೀಯ ಬ್ಯಾಂಕ್‌ ವ್ಯವಸ್ಥಾಪಕ ಪಿ. ಗೋಪಾಲರೆಡ್ಡಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಗಂಗಾಧರ ದಿವಟರ ಇತರರು ಇದ್ದರು.

ಮಹಿಳೆ ಹೆಸರಿನಲ್ಲಿ ಖಾತೆ ಹೊಂದಿದ್ದು, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಯಾವುದೇ ಕಾರಣಕ್ಕೂ ಮಾನ್ಯ ಮಾಡಲಾಗುವುದಿಲ್ಲ. ಮಹಿಳೆಯರ ಹೆಸರಿನಲ್ಲಿಯೇ ಬಂದ ಅರ್ಜಿ ಪರಿಗಣಿಸಲಾಗುತ್ತಿದೆ. ಮುಸುಕಿನ (ಗೋವಿನ) ಜೋಳ ಬೆಳೆದ ಪ್ರತಿ ರೈತರು ಒಂದು ಹಂಗಾಮಿಗೆ ಅನ್ವಯಾಗುವಂತೆ ಈ ಸೌಲಭ್ಯಕ್ಕೆ ಅರ್ಹರಿರುತ್ತಾರೆ. ಈ ಕುರಿತು ರೈತರು ರೈತ ಸಂಪರ್ಕ ಕೇಂದ್ರ ಮತ್ತು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಾಹಿತಿ ಪಡೆಯಬೇಕು. -ಚೇತನಾ ಪಾಟೀಲ,ಜಂಟಿ ಕೃಷಿ ನಿರ್ದೇಶಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next