Advertisement
ಹಲವು ಬ್ಯಾಂಕುಗಳು ಗೃಹ ಸಾಲ ಹೊರತುಪಡಿಸಿ ಇತರೆ ಕೆಲವು (ರಿಟೇಲ್) ಸಾಲಗಳ ಮೇಲಿನ ವೆಚ್ಚ ಆಧಾರಿ ಬಡ್ಡಿ ದರ(ಎಂಸಿಎಲ್‌ಆರ್)ವನ್ನು ಸದ್ದಿಲ್ಲದೇ ಏರಿಕೆ ಮಾಡಿವೆ.ಬ್ಯಾಂಕುಗಳು ತಮ್ಮ ಗೃಹ ಸಾಲಗಳನ್ನು ರೆಪೋ ದರಕ್ಕೆ ಲಿಂಕ್ ಮಾಡಿರುತ್ತವೆ. ಆದರೆ, ಇತರೆ ಸಾಲಗಳು ರೆಪೋ ದರಕ್ಕೆ ಲಿಂಕ್ ಆಗಿರುವುದಿಲ್ಲ. ಅದರಂತೆ, ಚಿಲ್ಲರೆ ಸಾಲಗಳ ಮೇಲಿನ ಬಡ್ಡಿ ದರವನ್ನು ಬ್ಯಾಂಕುಗಳು ಪರಿಷ್ಕರಿಸಲಾರಂಭಿಸಿವೆ.
ಕಳೆದ ವರ್ಷದ ಡಿಸೆಂಬರ್‌ವರೆಗೆ ಎಸ್‌ಬಿಐ ವಾಹನ ಸಾಲದ ಬಡ್ಡಿ ದರ ಶೇ.8.65ರಿಂದ ಆರಂಭವಾಗುತ್ತಿತ್ತು. ಈಗ ಅದನ್ನು ಶೇ.8.85ಕ್ಕೆ(ಅಧಿಕ ಕ್ರೆಡಿಟ್ ಸ್ಕೋರ್ ಇರುವ ಗ್ರಾಹಕರಿಗೆ) ಏರಿಸಲಾಗಿದೆ. ಅದೇ ರೀತಿ, ಬ್ಯಾಂಕ್ ಆಫ್ ಬರೋಡಾದ ವಾಹನ ಸಾಲದ ಆರಂಭಿಕ ಬಡ್ಡಿ ದರ ಡಿಸೆಂಬರ್‌ನಲ್ಲಿ ಶೇ.8.7 ಇದ್ದಿದ್ದು, ಈಗ ಶೇ.8.8 ಆಗಿದೆ. ಜತೆಗೆ, ಪ್ರೊಸೆಸಿಂಗ್ ಶುಲ್ಕವನ್ನೂ ಮರು ಜಾರಿ ಮಾಡಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕಾರು ಸಾಲದ ಮೇಲಿನ ಬಡ್ಡಿ ದರ ಶೇ.8.75ರಿಂದ ಆರಂಭವಾಗುತ್ತಿದ್ದದ್ದು, ಈಗ ಶೇ.9.15ಕ್ಕೇರಿದೆ. ಕರ್ನಾಟಕ ಬ್ಯಾಂಕ್‌ನ ವೈಯಕ್ತಿಕ ಸಾಲದ ಬಡ್ಡಿ ದರ ಶೇ.14.21ರಿಂದ ಶೇ.14.28ಕ್ಕೇರಿಸಲಾಗಿದೆ. ಐಡಿಎಫ್ಸಿ ಫಸ್ಟ್ ಬ್ಯಾಂಕ್‌ನ ಪರ್ಸನಲ್ ಲೋನ್‌ನ ಬಡ್ಡಿ ದರ ನವೆಂಬರ್‌ನಲ್ಲಿ ಶೇ.10.49 ಇದ್ದಿದ್ದು, ಈಗ ಶೇ.10.75ಕ್ಕೇರಿಸಲಾಗಿದೆ. ಹಬ್ಬಗಳ ಋತು ಮುಗಿಯುತ್ತಿದ್ದಂತೆ ಬಡ್ಡಿ ದರ ಏರಿಕೆ ಮಾಡಲು ಬ್ಯಾಂಕುಗಳು ಕಾಯುತ್ತಿದ್ದವು. ಅದರಂತೆ, ಈಗ ಪರಿಷ್ಕರಣೆ ಮಾಡಲಾಗಿದೆ ಎಂದು ಬ್ಯಾಂಕಿನ ಮೂಲಗಳು ತಿಳಿಸಿವೆ.
Related Articles
ಎಸ್‌ಬಿಐ 8.65 8.85
ಬ್ಯಾಂಕ್ ಆಫ್ ಬರೋಡ 8.7 8.8
ಯೂನಿಯ್ ಬ್ಯಾಂಕ್ 8.75 9.15
ಐಡಿಎಫ್ಸಿ ಫಸ್ಟ್ ಬ್ಯಾಂಕ್ 10.45 10.75
Advertisement