Advertisement

20 ಲಕ್ಷ ಕೋ.ರೂ. ಪ್ಯಾಕೇಜ್‌ : ಸಂಜೆ 4 ಗಂಟೆಗೆ ವಿತ್ತ ಸಚಿವರಿಂದ ಪ್ಯಾಕೇಜ್ ವಿವರ

11:22 AM May 13, 2020 | sudhir |

ಹೊಸದಿಲ್ಲಿ: ಕೋವಿಡ್ ಸಂಕಷ್ಟದಿಂದ ಕುಸಿದಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಮಂಗಳವಾರ ಪ್ರಧಾನಿ ಮೋದಿ ನವಭಾರತ ನಿರ್ಮಾಣಕ್ಕಾಗಿ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಿದ್ದು ಅದರ ವಿವರವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ 4 ಗಂಟೆಗೆ ನೀಡಲಿದ್ದಾರೆ.

Advertisement

ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ 21ನೇ ಶತಮಾನದಲ್ಲಿ ಭಾರತವನ್ನು ಸದೃಢ ರಾಷ್ಟ್ರವನ್ನಾಗಿಸಲು ಈ ಪ್ಯಾಕೇಜ್‌ ಸಹಾಯಕವಾಗಲಿದೆ ಎಂದಿದ್ದರು. ಜತೆಗೆ ದೇಶದ ಶ್ರಮಿಕ ವರ್ಗಕ್ಕೆ ಉತ್ತೇಜನ ನೀಡುವ ಸಲುವಾಗಿ ಗೃಹೋದ್ಯಮಗಳ ಅಭಿವೃದ್ಧಿಗಳಿಗಾಗಿ, ಚಿಕ್ಕ ಮತ್ತು ದೊಡ್ಡ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ, ರೈತರಿಗಾಗಿ, ನಿಯತ್ತಾಗಿ ತೆರಿಗೆ ಕಟ್ಟುವ ಮಧ್ಯಮ ವರ್ಗ ಸಹಿತ ದೇಶದ ಅಭಿವೃದ್ಧಿಗೆ ಆಧಾರ ಸ್ತಂಭವಾಗಿರುವ ಎಲ್ಲ ಕ್ಷೇತ್ರಗಳ ಪುನರುತ್ಥಾನಕ್ಕಾಗಿ ಈ ಪ್ಯಾಕೇಜನ್ನು ಘೋಷಿಸಲಾಗುತ್ತದೆ ಎಂದ ಪ್ರಧಾನಿ ಈ ಕುರಿತಂತೆ ವಿತ್ತ ಸಚಿವರು ಬುಧವಾರದಿಂದ ಹಂತ ಹಂತವಾಗಿ ಪ್ಯಾಕೇಜಿನ ವಿವರಗಳನ್ನು ನೀಡಲಿದ್ದಾರೆ ಎಂದಿದ್ದರು.

ಇಂದು ಸಂಜೆ ನಡೆಯುವ ಸುದ್ದಿಗೋಷ್ಠಿಯಲ್ಲಿ ಆರ್ಥಿಕ ಪ್ಯಾಕೇಜಿನ ಹಂಚಿಕೆಯನ್ನು ಯಾವ ರೀತಿಯಲ್ಲಿ ಮಾಡಿದ್ದಾರೆ ಎಂದು ಕಾದುನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next