Advertisement
ತಾಲೂಕಿನಲ್ಲಿ ಕರ್ಫ್ಯೂ ಹಿನ್ನೆಲೆ ಜನರು ಕೆಲಸಲ್ಲದೆಮನೆಯಲ್ಲೇ ಉಳಿದಿದ್ದು, ಇರುವ ಅಷ್ಟೋ ಇಷ್ಟೋಹಣದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ನಡುವೆ,ಖಾಸಗಿ ಫೈನಾನ್ಸ್‌ನವರು ಹಣ ಕಟ್ಟಿ ಎಂದು ಒತ್ತಡ ಹಾಕುತ್ತಿದ್ದಾರೆ.
Related Articles
Advertisement
ಬೀದಿ ಬದಿ ವ್ಯಾಪಾರಿಗಳ ಮೇಲೆ ಒತ್ತಡ: ಕೆಲಖಾಸಗಿ ಫೈನಾನ್ಸ್ ಕಂಪನಿಗಳು ಪಟ್ಟಣ ವ್ಯಾಪ್ತಿಯಬೀದಿ ಬದಿ ವ್ಯಾಪಾರಿಗಳಿಗೆ ದಿನ ಅಥವಾ ವಾರಕ್ಕೆಕಟ್ಟುವ ರೀತಿಯಲ್ಲಿ ಸಾಲ ನೀಡಿವೆ. ಕರ್ಫ್ಯೂ ಹಿನ್ನೆಲೆಇವರಿಗೆ ವ್ಯಾಪಾರ ನಡೆಸಲು ಅವಕಾಶವಿಲ್ಲವಾಗಿದ್ದು,ಫೈನಾನ್ಸ್ ಕಂಪನಿಗಳಿಗೆ ಹಣ ಕಟ್ಟಲಾಗದ ಪರಿಸ್ಥಿತಿನಿರ್ಮಾಣವಾಗಿದೆ. ಆದರೂ ಹಣ ಕಟ್ಟಲೇ ಬೇಕುಎಂದು ಸಂಸ್ಥೆಗಳ ಸಿಬ್ಬಂದಿ ಒತ್ತಡ ಹಾಕುತ್ತಿದ್ದಾರೆ.
ಕಾಲಾವಕಾಶ ನೀಡಿ: ಕೊರೊನಾ ಹಾಗೂ ಕರ್ಫ್ಯೂಹಿನ್ನೆಲೆ ಪ್ರಸ್ತುತ ಹಣ ಕಟ್ಟಲು ಸಾಧ್ಯವಾಗುತ್ತಿಲ್ಲ.ಸ್ಥಳೀಯ ಶಾಸಕರು ಸೇರಿದಂತೆ ಜನಪ್ರತಿನಿಧಿಗಳುಹಾಗೂ ಅಧಿಕಾರಿಗಳು ಮಧ್ಯಪ್ರವೇಶಿಸಿ ಖಾಸಗಿಫೈನಾನ್ಸ್ ಕಂಪನಿಗಳ ಜೊತೆ ಮಾತುಕತೆ ನಡೆಸಿಹಣ ಕಟ್ಟಲು ಕಾಲಾವಕಾಶ ನೀಡಬೇಕು ಎಂದುಮಹಿಳಾ ಸಂಘಗಳು ಹಾಗೂ ಬೀದಿ ಬದಿವ್ಯಾಪಾರಿಗಳು ಆಗ್ರಹಿಸಿದ್ದಾರೆ.ಹಣ ಕಟ್ಟಿಸಿಕೊಳ್ಳಲುಕಂಪನಿಗಳ ಸೂಚನೆ ಕರ್ಫ್ಯೂ ವೇಳೆ ಜನರು ಕೂಲಿ ಇಲ್ಲದೆ ಜೀವನನಡೆಸಲು ಕಷ್ಟಪಡುತ್ತಿರುವುದರು ನಮಗೂತಿಳಿದಿದೆ.
ಆದರೆ, ಕಂಪನಿಗಳ ಆದೇಶದಮೇರೆಗೆ ವಿಧಿ ಇಲ್ಲದೆ ಜನರ ಹತ್ತಿರ ಹೋಗಿಹಣ ಕಟ್ಟಿ ಎಂದು ಬಲವಂತ ಮಾಡುವಪರಿಸ್ಥಿತಿ ಇದೆ. ಇದರಲ್ಲಿ ನಮ್ಮ ಪಾತ್ರವೇನುಇಲ್ಲ ಎಂದು ಹೆಸರೇಳಲಿಚ್ಛಿಸದ ಖಾಸಗಿಮೈಕ್ರೋ ಫೈನಾನ್ಸ್ ಸಿಬ್ಬಂದಿಯೊಬ್ಬರುತಿಳಿಸಿದರು.ತಾಲೂಕಿನಲ್ಲಿ ಖಾಸಗಿ ಫೈನಾನ್ಸ್‌ಹಾವಳಿಗೆ ಸಂಬಂಧಿಸಿದಂತೆಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ನಂತರ ಅವರ ಮಾರ್ಗದರ್ಶನದಂತೆ ಕ್ರಮ ವಹಿಸಲಾಗುವುದು.
- ರವಿಶಂಕರ್,ತಹಶೀಲ್ದಾರ್ ಗುಂಡ್ಲುಪೇಟೆ