Advertisement
ಕಾರನ್ನು ಚಲಾಯಿಸುತ್ತಿದ್ದ ಯುವಕ ಉಳ್ಳಾಲದ ಮಹಮದ್ ಮುಝಾಫಿರ್ (21) ಎಂದು ಗುರುತಿಸಲಾಗಿದೆ. ಮಹಮದ್ ಮುಝಾಫಿರ್ ಉಳ್ಳಾಲ ಕಾಲೇಜೊಂದರಲ್ಲಿ ತೃತೀಯ ವರ್ಷದ ಬಿಎಸ್‌ಸಿ ಓದುತ್ತಿದ್ದಾನೆ ಎಂದು ಮಂಗಳೂರು ನಗರ ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಉದಯವಾಣಿಗೆ ತಿಳಿಸಿದ್ದಾರೆ.
Related Articles
ವಿದ್ಯಾರ್ಥಿ ಸ್ನೇಹಿತರಾದ ಮಹಮದ್ ಮುಝಾಫಿರ್, ಖಲೀಲ್, ಇಬ್ಬರು ಯುವತಿಯರು ಮತ್ತು ಓರ್ವ ಬಾಲಕ ಸಹಿತ 5 ಮಂದಿ ಫೆ. 8ರಂದು ಮಧ್ಯಾಹ್ನ ಪಿಲಿಕುಳಕ್ಕೆ ತಿರುಗಾಡಲು ಜಾಲಿ ರೈಡ್ ಹೋಗಿದ್ದರು. ಪಿಲಿಕುಳ ಹಾಗೂ ಮಾಲ್‌ನಲ್ಲಿ ತಿರುಗಾಡಿದ ಬಳಿಕ ತೊಕ್ಕೊಟ್ಟಿಗೆ ವಾಪಸಾಗಿದ್ದರು. ಹಾಗೆ ತೊಕ್ಕೊಟ್ಟು ತನಕ ಹೋಗಿದ್ದ ಅವರು ಜಾಲಿ ರೈಡ್‌ನ ಮೂಡ್‌ನಲ್ಲಿ ಪುನಃ ಮಂಗಳೂರಿಗೆ ಬಂದು ಕೆಲವು ತಾಣಗಳಲ್ಲಿ ಸುತ್ತಾಡಿ ವಾಪಸ್ ತೊಕ್ಕೊಟ್ಟು ಕಡೆಗೆ ಹೊರಟಿದ್ದರು. ಈ ಸಂದರ್ಭ ಪಂಪ್‌ವೆಲ್ ಫ್ಲೈಓವರ್ ಮೇಲೆ ಕಾರನ್ನು ಅತಿ ವೇಗವಾಗಿ ಚಲಾಯಿಸಿದ್ದರು. ಆಗ ಕಾರು ಇಂಡಿಯಾನಾ ಆಸ್ಪತ್ರೆ ಎದುರು ತಲಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಲಗಡೆ ಇದ್ದ ಡಿವೈಡರ್ ದಾಟಿ ವಿರುದ್ಧ ದಿಕ್ಕಿನ ರಸ್ತೆಯಲ್ಲಿ ಉಜೊjಡಿಯಿಂದ ನಂತೂರು ಕಡೆ ಸಂಚರಿಸುತ್ತಿದ್ದ ಡಸ್ಟರ್ ಕಾರಿಗೆ ಢಿಕ್ಕಿ ಹೊಡೆದು ಬಳಿಕ ಸರ್ವಿಸ್ ರಸ್ತೆಗೆ ಪಲ್ಟಿಯಾಗಿತ್ತು. ಈ ಸಂದರ್ಭ ಡಸ್ಟರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರವೀಣ್ ಫೆರ್ನಾಂಡಿಸ್ ಸಾವನ್ನಪ್ಪಿದ್ದರು.
Advertisement
ಮೃತ ಪ್ರವೀಣ್ ಫೆರ್ನಾಂಡಿಸ್ ಮಂಗಳೂರಿನ ಪ್ರಮುಖ ಕಾರು ಮೆಕ್ಯಾನಿಕ್‌ಗಳ ಪೈಕಿ ಓರ್ವರಾಗಿದ್ದರು. ನಂತೂರಿನ ಸ್ವಾಗತ್ ಗ್ಯಾರೇಜಿನ ಮಾಲಕರಾಗಿದ್ದ ಅವರು ನಗರದ ರಮೇಶ್ ಮೆಂಡನ್ ಅವರ ಡಸ್ಟರ್ ಕಾರನ್ನು ಆಗ ತಾನೇ ರಿಪೇರಿ ಮಾಡಿ ಟೆಸ್ಟ್ ಡ್ರೈವ್‌ಗಾಗಿ ನಂತೂರಿನಿಂದ ಉಜ್ಜೋಡಿ ತನಕ ಸಂಚರಿಸಿ ಅಲ್ಲಿಂದ ವಾಪಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಪ್ರವೀಣ್ ಅವರು ರಿಪೇರಿ ಮಾಡಿ ಕೊಟ್ಟ ಕಾರನ್ನು ಸ್ವತಃ ರಮೇಶ್ ಮೆಂಡನ್ ಚಲಾಯಿಸಿದ್ದು, ಪ್ರವೀಣ್ ಅವರು ಕಾರಿನ ಮುಂಬದಿಯ ಎಡ ಭಾಗದ ಸೀಟಿನಲ್ಲಿ ಕುಳಿತು ಕಾರಿನ ಚಲನೆಯನ್ನು ಗಮನಿಸುತ್ತಿದ್ದರು. ಈ ಸಂದರ್ಭ ಪಕ್ಕದ ರಸ್ತೆಯಲ್ಲಿ ವಿರುದ್ಧ ದಿಕ್ಕಿಗೆ ಚಲಿಸುತ್ತಿದ್ದ ಆಲ್ಟೋ ಕಾರು ಡಿವೈಡರ್ ದಾಟಿ ಬಂದು ಡಸ್ಟರ್ ಕಾರಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಪ್ರವೀಣ್ ಫೆರ್ನಾಂಡಿಸ್ ಅವರು ತೀವ್ರ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಐವರಲ್ಲಿ ಇಬ್ಬರು ಯುವತಿಯರು!ಅಪಘಾತಕ್ಕೆ ಕಾರಣವಾದ ಈ ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಯುವತಿಯರು ಇದ್ದರು ಹಾಗೂ ಓರ್ವ ಬಾಲಕ ಕೂಡ ಇದ್ದ ಎಂಬ ಸಂಗತಿಯನ್ನು ಪೊಲೀಸರು ಬಹಿರಂಗ ಪಡಿಸಿದ್ದಾರೆ. ಅವಘಡ ಸಂಭವಿಸಿದಾಗ ಅದರಲ್ಲಿದ್ದ ಖಲೀಲ್ ಮತ್ತು ಓರ್ವ ಯುವತಿ ಗಾಯಗೊಂಡಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಇನ್ನುಳಿದಂತೆ ಚಾಲಕ ಮಹಮದ್ ಮುಝಾಫಿರ್, ಇನ್ನೋರ್ವ ಯುವತಿ, ಬಾಲಕ ಸಣ್ಣ ಪುಟ್ಟ ಗಾಯಗೊಂಡ ಕಾರಣ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದರು.