“ಮೂರು ಜನಕ್ಕೆ ಟೈಟಲ್ ಕೊಟ್ಟಿಲ್ಲ, ಹಾಗಾಗಿ ನಿಮಗೂ ಕೊಡೋದಿಲ್ಲ ಅಂತಾರೆ. ಇದೂ ಒಂದು ಕಾರಣಾನಾ?’ ಈ ಹಿಂದೆ ಹೀಗೆ ನಗುತ್ತಲೇ ಹೇಳಿಕೊಂಡಿದ್ದರು ನಿರ್ಸ್ದೇಶಕ ಮೋಹನ್. ಅವರು ಹೊಸ ಚಿತ್ರ ಶುರುಮಾಡಿದ್ದು ಎಲ್ಲರಿಗೂ ಗೊತ್ತು. ಆ ಚಿತ್ರಕ್ಕೆ ಮೋಹನ್ ಅವರು “ಲೋಫರ್ಸ್’ ಎಂದು ನಾಮಕರಣ ಮಾಡಿದ್ದರು. ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒಪ್ಪಿರಲಿಲ್ಲ.
ಆದರೆ, ಈಗ ಕೊನೆಗೂ ಮಂಡಳಿಯಿಂದ “ಲೋಫರ್ಸ್’ ಶೀರ್ಷಿಕೆ ಪಕ್ಕಾ ಆಗಿದೆ. ಆ ಖುಷಿಯಲ್ಲೇ ಮೋಹನ್, ಮಂಡಳಿ ಪದಾಧಿಕಾರಿಗಳಿಗೆ ಅಭಿನಂದಿಸಿದ್ದಾರೆ. ಈ ಚಿತ್ರಕ್ಕೆ ಬಿ.ಎನ್.ಗಂಗಾಧರ್ಸ್ ನಿರ್ಮಾಪಕರು. ಅವರು 26 ನೇ ಚಿತ್ರವಿದು. ಈ ಚಿತ್ರದ ಕಥೆ ಏಳು ಅಲೆಮಾರಿಗಳ ಸುತ್ತ ಸುತ್ತುತ್ತದೆ. ಹಾಗಾಗಿ, ಮೋಹನ್ ಅವರು “ಲೋಫರ್ಸ್’ ಅಂತ ಹೆಸರಿಟ್ಟಿದ್ದರು. ಆದರೆ, ಮಂಡಳಿ ಮಾತ್ರ ಒಪ್ಪಿರಲಿಲ್ಲ.
ಕೊನೆಗೆ ಕಥೆಗೆ ಆ ಶೀರ್ಷಿಕೆ ಸೂಕ್ತ ಅಂತ ಮೋಹನ್ ವಿವರಣೆ ಕೊಟ್ಟ ಬಳಿಕ ಮಂಡಳಿಯಿಂದ ಆ ಶೀರ್ಷಿಕೆ ಪಕ್ಕಾ ಆಗಿದೆ. ಅಂದಹಾಗೆ, ಮೋಹನ್ ಅವರ “ಲೋಫರ್ಸ್’ ಒಂದು ಥ್ರಿಲ್ಲರ್ ಚಿತ್ರ. ಯೌವ್ವನದ ದಿನಗಳಲ್ಲಿ ಏನೇನು ಮಾಡಬಾರದು ಮತ್ತು ಎಲ್ಲದಕ್ಕೂ ಲಿಮಿಟ್ ಇರಬೇಕು ಅಂತ ಹೇಳುವುದಕ್ಕೆ ಹೊರಟಿದ್ದಾರಂತೆ. ಕುಡಿತ ಮತ್ತು ಡ್ರಗ್ಸ್‌ಗೆ ನೋ ಹೇಳಿ ಎಂಬ ಕಥೆ ಇರುವ ಈ ಚಿತ್ರ ಏಳು ಅಲೆಮಾರಿಗಳ ಸುತ್ತ ಸುತ್ತುತ್ತದೆ.
ಅದೇ ಕಾರಣಕ್ಕೆ ಚಿತ್ರಕ್ಕೆ “ಲೋಫರ್ಸ್’ ಅಂತ ಹೆಸರು ಸೂಕ್ತವಾಗಿತ್ತು. ಆಗ ಮಂಡಳಿಯಿಂದ ಈ ಹೆಸರಿಗೆ ಅನುಮತಿ ಸಿಕ್ಕಿರಲಿಲ್ಲ. ಈಗ ಸಿಕ್ಕಿದೆ. “ಲೋಫರ್ಸ್’ ಹೆಸರು ಸಿಕ್ಕೇ ಸಿಗುತ್ತೆ ಎಂಬ ನಂಬಿಕೆಯಲ್ಲಿದ್ದ ಮೋಹನ್, ಪ್ರೊಡಕ್ಷನ್ ನಂ.26 ಹೆಸರಲ್ಲೇ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರಕ್ಕೆ ಆಗ ಬೇರೆ ಹೆಸರನ್ನೂ ಯೋಚಿಸಿರಲಿಲ್ಲವಂತೆ. ಈಗ “ಲೋಫರ್ಸ್’ ಅವರ ಪಾಲಾಗಿರುವುದರಿಂದ ಸಹಜವಾಗಿಯೇ ಮೋಹನ್‌ಗೆ ಖುಷಿ ಇದೆ.
ಚಿತ್ರದಲ್ಲಿ ಏಳು ಪಾತ್ರಗಳು ಸಹ ನೆಗೆಟಿವ್ ಆಗಿವೆ. ಅವರ್ಯಾರಿಗೂ ಮನೆ ಇಲ್ಲ. ಹೇಳುವುದಕ್ಕೆ ಅವರ ಸ್ವಂತದವರೂ ಇರೋದಿಲ್ಲ. ಎಲ್ಲರೂ ಗೆಸ್ಟ್‌ಹೌಸ್‌ನಲ್ಲೇ ವಾಸ. ಆಮೇಲೆ ಏನೆಲ್ಲಾ ಆಗುತ್ತೆ ಎಂಬುದು ಕಥೆ. ಇಲ್ಲಿ ಚೇತನ್, ಅರ್ಸ್ಜುನ್ ಆರ್ಸ್ಯ, ಮನು, ಕೆಂಪೇಗೌಡ, ಶ್ರಾವ್ಯ, ಸುಷ್ಮಾ ಮತ್ತು ಸಾಕ್ಷಿ ನಟಿಸುತ್ತಿದ್ದಾರೆ.