Advertisement

ಆಳ್ವಾಸ್‌ ವಿರಾಸತ್‌-2017 ಸ್ಮರಣೀಯ ಸಮಾಪನ

04:25 PM Jan 16, 2017 | Team Udayavani |

ಮೂಡಬಿದಿರೆ: ಮೂರು ದಿನಗಳ ಪರ್ಯಂತ ವಿದ್ಯಾಗಿರಿ ಬಳಿಯ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ನಡೆದ 23ನೇ ವರ್ಷದ “ಆಳ್ವಾಸ್‌ ವಿರಾಸತ್‌-2017′ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಮತ್ತೂಮ್ಮೆ ಹೊಸ ಸಾಧ್ಯತೆಗಳನ್ನು ಶೋಧಿಸಿ, ಅಭಿವ್ಯಕ್ತಿಧಿಗೊಳಿಸುವಲ್ಲಿ ಯಶಸ್ವಿಯಾಯಿತು.

Advertisement

ಹೃದಯವೈಶಾಲ್ಯ ಮೆರೆಯುವ ಮೂಲಕ ವಿಶ್ವ ಮಾನವಧಿರಾಗೋಣ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟನಾ ಕ್ಷಣಗಳಲ್ಲಿ ನೀಡಿದ ಕರೆ ರಾಷ್ಟ್ರೀಯ ನೆಲೆಯಿಂದ ಅಂತಾರಾಷ್ಟ್ರೀಯ ಮಟ್ಟದ ವರೆಗೆ ಸಾರ್ಥಕವಾಗಿ ಪ್ರತಿಧ್ವನಿಸಿದೆ.

ಕೊಳಲು-ಬಾನ್ಸುರಿ ಜುಗಲ್‌ಬಂದಿಯಿಂದ ಮೊದಧಿಲ್ಗೊಂಡು ಸಿತಾರ್‌, ಮ್ಯಾಂಡೋಲಿನ್‌, ಡ್ರಮ್ಸ್‌, ಕೀಬೋರ್ಡ್‌, ಬೇಸ್‌ ಗಿಟಾರ್‌, ತಬ್ಲಾ ಮೂಲಕ ಪ್ರಸ್ತುತಪಡಿಸಧಿಲಾದ ಟ್ರಿನಿಟಿ-ನಾದಮಾಧುರ್ಯ, ಭುವನೇಶ್ವರ ತಂಡದ ಒಡಿಸ್ಸಿ-ಗೋಟಿಪುವಾ, ರವಿವಾರ ನೆರೆದ ಅರ್ಧ ಲಕ್ಷಕ್ಕೂ ಅಧಿಕ ಪ್ರೇಕ್ಷಕರನ್ನು ಆನಂದಮಯವಾಗಿ ತೇಲಾಡಿಸಿದ ಹಿಂದೀ ಚಿತ್ರರಂಗದ ಪ್ರಸಿದ್ಧ ಗಾಯಕರಾದ ಶಾನ್‌ ಮತ್ತು ಪಾಯಲ್‌ ಅವರ ಸಂಗೀತ ರಸಸಂಜೆ, ಉಡುಪಿಯ ಲತಾಂಗಿ ಸ್ಕೂಲ್‌ ಆಫ್‌ ಆರ್ಟ್ಸ್ನ ಗಾರ್ಗಿ, ಅರ್ಚನಾ, ಸಮನ್ವಿ ಅವರ ಗಾನಾರ್ಚನ ಜನಮನವನ್ನು ಸೆಳೆದಿಟ್ಟುಕೊಂಡವು.

ಒಡಿಶಾದ ಗೋಟಿಪುವಾ ನೃತ್ಯನಿರ್ದೇಶನಕ್ಕೆ ಭುವನೇಶ್ವರದ ಚಿತ್ರಸೇನ್‌ ಸ್ಪೈನ್‌, ಗುಜರಾತ್‌ನ ಹುಡೋರಾಸ್‌ ನೃತ್ಯಕ್ಕೆ ಪೃಥ್ವೀ ಶಾಹ, ಕಥಕ್‌ಗೆ ಆಶಿಂ ಬಂಧು ಭಟ್ಟಾಚಾರ್ಯ, ಬೆಂಗಳೂರಿನ ಹರಿ ಮತ್ತು ಚೇತನಾ, ಮಣಿಪುರದ ಧೋಲ್‌ಚಲೋಮ್‌ಗೆ ಸೂಪರ್‌ ಸಿಂಗ್‌, ಶ್ರೀಲಂಕನ್‌ ನೃತ್ಯಗಳಿಗೆ ಕೊಲಂಬೋದ ಜಯಂಪತಿ ಭಂಡಾರ, ಭರತನಾಟ್ಯಕ್ಕೆ ಚೆನ್ನೈಯ ಶೀಲಾ ಉಣ್ಣಿಕೃಷ್ಣನ್‌, ಮಣಿಪುರದ ಸ್ಟಿಕ್‌ ಡ್ಯಾನ್ಸ್‌ಗೆ ಪ್ರೀತಂ ಸಿಂಗ್‌ ಇವರೆಲ್ಲ ಒದಗಿ ಬಂದಿರುವ ಪರಿಣಾಮವಾಗಿ ವಿದ್ಯಾರ್ಥಿಗಳಿಂದ ಇಷ್ಟನ್ನೆಲ್ಲ ಮಾಡಿಸಬಹುದೇ-ಅದೂ 40ರಿಂದ 50 ಸಾವಿರ ಮಂದಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಲ್ಲಂತೆ-160 ಅಡಿ ಉದ್ದ, 60 ಅಡಿ ಅಗಲದ ವೇದಿಕೆಯಲ್ಲಿ? ಎಂಬ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿದೆ. ಉಜ್ಜಯಿನಿಯ ಯೋಗೇಶ್‌ ಮಾಳವೀಯ, ಬಸವರಾಜ್‌ ಬಂಡಿವಾಡ್‌ರಂಥವರು ಕಲಿಸಿದ ಮಲ್ಲಕಂಬ ಮತ್ತು ರೋಪ್‌ ಆಟಗಳನ್ನು ಕರ್ನಾಟಕದಲ್ಲೇ ಆಳ್ವಾಸ್‌ನಂತೆ ಆಡಿ, ಮಾಡಿ ತೋರುವುದು ಸಂಶಯ ಎಂಬ ಭಾವ ಮೂಡಿಸಿವೆ. ಮಂಟಪ ಪ್ರಭಾಕರ ಉಪಾಧ್ಯರು ಮಧುಮಾಸದ ರೂಪಕದ ಮೂಲಕ ಯಕ್ಷಗಾನದಲ್ಲಿ ಸಮೂಹ ಸಾಧ್ಯತೆಗಳನ್ನು ಸ್ಪುಟವಾಗಿ ತೋರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next