Advertisement

ವಿರಾಟ್ ಕ್ಲೀನ್ ಸ್ವೀಪ್ ಕನಸು: ಅಂತಿಮ ಟಿ20 ಕದನದಲ್ಲಿ ಟಾಸ್ ಗೆದ್ದ ಭಾರತ

01:18 PM Dec 08, 2020 | keerthan |

ಸಿಡ್ನಿ: ಮೊದಲೆರಡು ಪಂದ್ಯಗಳನ್ನು ಗೆದ್ದು ಟಿ20 ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಇಂದು ಮೂರನೇ ಪಂದ್ಯಕ್ಕೆ ಸಜ್ಜಾಗಿದೆ. ಇಂದಿನ ಪಂದ್ಯವನ್ನೂ ಗೆದ್ದು ಸರಣಿಯನ್ನು ವೈಟ್ ವಾಶ್ ಮಾಡಲು ವಿರಾಟ್ ಪಡೆ ಕಾರ್ಯತಂತ್ರ ಹಣೆದಿದ್ದು, ಈ ಪಂದ್ಯವನ್ನಾದರು ಗೆದ್ದು ವೈಟ್ ವಾಶ್ ಅವಮಾನ ತಪ್ಪಿಸಲು ಆಸೀಸ್ ಪಡೆ ಮುಂದಾಗಿದೆ.

Advertisement

ಸಿಡ್ನಿಯಲ್ಲಿ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಕಳೆದ ಪಂದ್ಯದಂತೆ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಭಾರತ ತಂಡ ಇಂದು ಕಣಕ್ಕಿಳಿಸಿದೆ. ಕಳೆದ ಪಂದ್ಯದಲ್ಲಿ ಹೊರಗುಳಿದಿದ್ದ ಆಸೀಸ್ ನಾಯಕ ಆರೋನ್ ಫಿಂಚ್ ಇಂದು ತಂಡಕ್ಕೆ ಮರಳಿದ್ದು, ಸ್ಟೋಯಿನಸ್ ಜಾಗ ತೆರವು ಮಾಡಿದ್ದಾರೆ.

ಭಾರತ: ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ಸಂಜು ಸ್ಯಾಮ್ಸನ್‌, ಶ್ರೇಯಸ್‌ ಅಯ್ಯರ್‌, ಹಾರ್ದಿಕ್‌ ಪಾಂಡ್ಯ, ಶಾರ್ದೂಲ್‌ ಠಾಕೂರ್‌, ವಾಷಿಂಗ್ಟನ್‌ ಸುಂದರ್‌, ದೀಪಕ್‌ ಚಹರ್‌, ಟಿ. ನಟರಾಜನ್‌, ಯಜುವೇಂದ್ರ ಚಹಲ್‌.

ಆಸ್ಟ್ರೇಲಿಯ: ಆರನ್‌ ಫಿಂಚ್‌ (ನಾಯಕ), ಡಿ’ಆರ್ಸಿ ಶಾರ್ಟ್‌, ಮ್ಯಾಥ್ಯೂ ವೇಡ್‌, ಸ್ಟೀವನ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮೊಸಸ್‌ ಹೆನ್ರಿಕ್ಸ್‌‌, ಸೀನ್‌ ಅಬೋಟ್‌, ಡೇನಿಯಲ್‌ ಸ್ಯಾಮ್ಸ್‌, ಮಿಚೆಲ್‌ ಸ್ವೆಪ್ಸನ್‌, ಆ್ಯಡಂ ಝಂಪ, ಆ್ಯಂಡ್ರ್ಯು ಟೈ.

Advertisement

Udayavani is now on Telegram. Click here to join our channel and stay updated with the latest news.

Next