Advertisement

Prathima KS: ಪಂಚಭೂತಗಳಲ್ಲಿ ಲೀನವಾದ ಗಣಿ ಅಧಿಕಾರಿ ಪ್ರತಿಮಾ

01:30 PM Nov 06, 2023 | Kavyashree |

ತೀರ್ಥಹಳ್ಳಿ : ಗಣಿ ಅಧಿಕಾರಿ ಪ್ರತಿಮಾ ಬೆಂಗಳೂರಿನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದು, ನ.6ರ ಸೋಮವಾರ ತೀರ್ಥಹಳ್ಳಿಯಲ್ಲಿ ಪ್ರತಿಮಾ ಅವರ ಅಂತ್ಯ ಸಂಸ್ಕಾರ ನಡೆದಿದೆ.

Advertisement

ಪಟ್ಟಣದ ಸಮೀಪದ ತುಡುಕಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನಡೆಸಿ ನಂತರ ಕುರುವಳ್ಳಿಯ ಹಿಂದೂ ರುದ್ರ ಭೂಮಿಯಲ್ಲಿ ಪ್ರತಿಮಾ ಪುತ್ರ ಪಾರ್ಥನಿಂದ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಿಸಲಾಯಿತು.

ಈ ವೇಳೆ ಕುಟುಂಬಸ್ಥರು ಮಾತನಾಡಿ, ಪ್ರತಿಮಾ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ನೀಡಬೇಕು. ದಕ್ಷ ಅಧಿಕಾರಿ ಹಾಗೂ ಪ್ರತಿಭಾವಂತ ಹೆಣ್ಣು ಮಗುವನ್ನು ಕಳೆದುಕೊಂಡಿದ್ದೇವೆ. ಸರ್ಕಾರ ಮಹಿಳಾ ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡಬೇಕು. ಸುಳ್ಳು ಸುದ್ಧಿಗಳಿಗೆ ಜನರು ಕಿವಿಕೊಡಬೇಡಿ. ಅವರ ಕುಟುಂಬ ಅನ್ಯೋನ್ಯವಾಗಿತ್ತು. ದಂಪತಿಗಳು ತುಂಬಾ ಚೆನ್ನಾಗಿದ್ದರು. ಇಂತಹ ದಕ್ಷ ಅಧಿಕಾರಿಗಳನ್ನು ನಾವು ಕಳೆದುಕೊಂಡ ಬಡವರಾಗಿದ್ದೇವೆ. ಎಲ್ಲರಿಗೂ ಪ್ರತಿಮಾ ಮಾದರಿಯಾಗಿದ್ದರು ಎಂದರು

ಪ್ರತಿಮಾ ಅಂತ್ಯಸಂಸ್ಕಾರದಲ್ಲಿ ಬಂಧು- ಬಳಗದವರು, ಗ್ರಾಮಸ್ಥರು ಸೇರಿ ನೂರಾರು ಜನ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next