Advertisement

ಋತುವಿನ ಮೊದಲ ಕಂಬಳ ಯಶಸ್ವಿ: ಇಲ್ಲಿದೆ ಹೊಕ್ಕಾಡಿಗೋಳಿ ಕಂಬಳದ ಫಲಿತಾಂಶ ಪಟ್ಟಿ

11:14 AM Jan 31, 2021 | Team Udayavani |

ಪುಂಜಾಲಕಟ್ಟೆ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಹೊಕ್ಕಾಡಿಗೋಳಿಯಲ್ಲಿ ನಡೆದ ಈ ಋತುವಿನ ಮೊದಲ ಕಂಬಳ ಕೂಟ ಯಶಸ್ವಿಯಾಗಿ ಸಂಪನ್ನವಾಗಿದೆ. ಶನಿವಾರ ಆರಂಭವಾದ ವೀರ- ವಿಕ್ರಮ ಜೋಡುಕರೆ ಕಂಬಳದಲ್ಲಿ ಒಟ್ಟು 167 ಜೊತೆ ಕೋಣಗಳು ಭಾಗವಹಿಸಿದ್ದವು.

Advertisement

ಕನೆಹಲಗೆ ವಿಭಾಗದಲ್ಲಿ ನಾಲ್ಕು ಜೊತೆ, ಹಗ್ಗ ಹಿರಿಯ ವಿಭಾದಲ್ಲಿ 15 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 18 ಜೊತೆ, ಅಡ್ಡ ಹಲಗೆ ವಿಭಾಗದಲ್ಲಿ ಏಳು ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 26 ಜೊತೆ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ ಒಟ್ಟು 97 ಜೊತೆ ಕೋಣಗಳು ಹೊಕ್ಕಾಡಿಗೋಳಿ ಕಂಬಳ ಕೂಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಇದನ್ನೂ ಓದಿ:ಕಂಬಳವನ್ನು ಅಂತಾರಾಷ್ಟ್ರೀಯ ಕ್ರೀಡೆಯಾಗಿ ರೂಪಿಸಬೇಕು: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಫಲಿತಾಂಶ ಪಟ್ಟಿ

ಕನಹಲಗೆ ವಿಭಾಗ:

Advertisement

ವಾಮಂಜೂರು ತಿರುವೈಲು ಗುತ್ತು ಅಭಯ್ ನವೀನ್ ಚಂದ್ರ ಆಳ್ವ

ಬೇಲಾಡಿ ಬಾವ ಅಶೋಕ್ ಶೆಟ್ಟಿ

(ಈ ಎರಡು ಜೊತೆ ಕೋಣಗಳು 6.50 ಕೋಲು ಎತ್ತರದ ನಿಶಾನೆಗೆ ನೀರು ಹಾಯಿಸಿದೆ)

ಅಡ್ಡ ಹಲಗೆ ವಿಭಾಗ

ಪ್ರಥಮ: ವೇಣೂರು ಗಣೇಶ್ ನಾರಾಯಣ ಪಂಡಿತ್

ದ್ವಿತೀಯ: ಆಲದಪದವು ಮೇಗಿನಮನೆ ಬಾಬು ರಾಜೇಂದ್ರ ಶೆಟ್ಟಿ

ಇದನ್ನೂ ಓದಿ: ಬಲಾ ಬೊಲ್ಲ.. ಬಲಾ ಕಾಟಿ… ಮತ್ತೆ ಮೊಳಗಲು ಸಿದ್ದವಾಗಿದೆ ಕಂಬಳದ ಕಹಳೆ

ಹಗ್ಗ ಹಿರಿಯ ವಿಭಾಗ

ಪ್ರಥಮ: ರಾಯಿ ಸೀತಲ ಅಗರಿ ರೂಪ ರಾಜೇಶ್ ಶೆಟ್ಟಿ

ದ್ವಿತೀಯ: ಕೂಳೂರು ಪೊಯ್ಯೋಲು ಪಿ.ಆರ್. ಶೆಟ್ಟಿ ‘ಬಿ’

ಹಗ್ಗ ಕಿರಿಯ ವಿಭಾಗ

ಪ್ರಥಮ: ಚೊಕ್ಕಾಡಿ ಕಟಪಾಡಿ ದೈವಿಕ್ ಸಂತೋಷ್ ಶೆಟ್ಟಿ

ದ್ವಿತೀಯ: ಸಿದ್ದಕಟ್ಟೆ ಹೊಂಗಾರಕಟ್ಟೆ ಮೋಕ್ಷಿತ್ ಕಾಂತಣ್ಣ ಶೆಟ್ಟಿ

ನೇಗಿಲು ಹಿರಿಯ ವಿಭಾಗ

ಪ್ರಥಮ: ಇರುವೈಲು ಪಾಣಿಲ ಬಾಡ ಪೂಜಾರಿ ‘ಬಿ’

ದ್ವಿತೀಯ: ಕೌಡೂರು ಬೀಡು ತುಷಾರ ಮಾರಪ್ಪ ಭಂಡಾರಿ ‘ಎ’

ನೇಗಿಲು ಕಿರಿಯ ವಿಭಾಗ

ಪ್ರಥಮ: ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿತ್ ಕುಮಾರ್

ದ್ವಿತೀಯ: ನಕ್ರೆ ಮಹೋದರ ನಿವಾಸ ಇಶಾನಿ ತುಕ್ರ ಭಂಡಾರಿ ‘ಎ’

Advertisement

Udayavani is now on Telegram. Click here to join our channel and stay updated with the latest news.

Next