Advertisement

ವಿಡಿಯೋ: ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಪತನದ ಕೊನೆಯ ಕ್ಷಣದ ದೃಶ್ಯ

11:40 AM Dec 09, 2021 | Team Udayavani |

ಚೆನ್ನೈ: ದೇಶದ ಮೊದಲ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಇತರ 13 ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನಲ್ಲಿ ಅಪಘಾತಕ್ಕೀಡಾಗಿದೆ. ಇದರಲ್ಲಿ ಜ.ರಾವತ್ ಸೇರಿ 13 ಮಂದಿ ನಿಧನರಾಗಿದ್ದಾರೆ. ಇದೀಗ ಅಪಘಾತಕ್ಕೆ ಕೆಲವೇ ಕ್ಷಣಗಳ ಮೊದಲು ಹೆಲಿಕಾಪ್ಟರ್ ಹಾರಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.

Advertisement

ಎಎನ್ ಐ ಸುದ್ದಿಸಂಸ್ಥೆಯು ಈ ವಿಡಿಯೋವನ್ನು ಹಂಚಿಕೊಂಡಿದೆ. “ಸಿಡಿಎಸ್ ಬಿಪಿನ್ ರಾವತ್ ಮತ್ತು ಇತರ 13 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಎಂಐ-17 ಹೆಲಿಕಾಪ್ಟರ್ ನಿನ್ನೆ ತಮಿಳುನಾಡಿನ ಕುನೂರ್ ಬಳಿ ಪತನಗೊಳ್ಳುವ ಮುನ್ನ ಕೊನೆಯ ಕ್ಷಣಗಳು” ಎಂದು ಬರೆದುಕೊಂಡಿದೆ.

ಇದನ್ನೂ ಓದಿ:ಶುಕ್ರವಾರ ನಡೆಯಲಿದೆ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಪತ್ನಿಯ ಅಂತ್ಯಕ್ರಿಯೆ

ಈ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ಏರ್ ಫೋರ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹಲವು ಯುವಕ ಯುವತಿಯರು ಈ ವಿಡಿಯೋದಲ್ಲಿ ಕಾಣಿಸಿದ್ದು, ವಿಡಿಯೋದಲ್ಲಿ ಚಾಪರ್ ಬೆಟ್ಟಗಳ ಮೇಲೆ ಹಾರುತ್ತಿರುವುದನ್ನು ಕಾಣಬಹುದು. ನಂತರ ಎಲ್ಲರೂ ಆ ದಿಕ್ಕಿನಲ್ಲಿ ನೋಡಿದಾಗ ಚಾಪರ್ ಕಾಣಿಸುವುದಿಲ್ಲ. “ಏನಾಯಿತು? ಅದು ಬಿದ್ದಿದೆಯೇ ಅಥವಾ ಕ್ರ್ಯಾಶ್ ಆಗಿದೆಯೇ?” ಎಂದು ಒಬ್ಬ ವ್ಯಕ್ತಿಯು ಕೇಳುವುದು ವಿಡಿಯೋದಲ್ಲಿ ಕೇಳಿಸುತ್ತದೆ, ಇದಕ್ಕೆ ಹೌದು ಎಂಬಂತೆ ಮತ್ತೊಂದು ಧ್ವನಿಯು ಉತ್ತರಿಸುತ್ತದೆ.

Advertisement

ಬುಧವಾರ ತಮಿಳುನಾಡಿನ ವೆಲ್ಲಿಂಗ್ಟನ್‌ ಬಳಿಯ ಕೂನೂರಿನಲ್ಲಿ ವಾಯುಸೇನೆಯ ಎಂ- 17ವಿ5 ಹೆಲಿಕಾಪ್ಟರ್‌ ಅಪಘಾತಕ್ಕೀಡಾಗಿದೆ. ದೇಶದ ಮೊಟ್ಟ ಮೊದಲ ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್‌, ಅವರ ಪತ್ನಿ ಮಧುಲಿಕಾ ರಾವತ್‌ ಸೇರಿದಂತೆ 14 ಮಂದಿ ಅದರಲ್ಲಿ ಪ್ರಯಾಣಿಸುತ್ತಿದ್ದರು. ಈ 14 ಮಂದಿಯಲ್ಲಿ ಕೇವಲ ಒಬ್ಬರು ಮಾತ್ರ ಬದುಕುಳಿದರು. ಜ.ರಾವತ್ ಸೇರಿದಂತೆ ಉಳಿದವರೆಲ್ಲರೂ ಸಾವನ್ನಪ್ಪಿದ್ದಾರೆ. ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಎಸ್‌ಸಿ ಅವರು ಮಾತ್ರ ಬದುುಕುಳಿದಿದ್ದು, ವೆಲ್ಲಿಂಗ್ಟನ್‌ನಲ್ಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next