Advertisement

ಅಂತಿಮ ಪದವಿಗೆ ಪರೀಕ್ಷೆ ಕಡ್ಡಾಯ : ಅ.1ರಿಂದ ಶೈಕ್ಷಣಿಕ ವರ್ಷ ಆರಂಭಿಸಲು ಸೂಚನೆ

11:51 PM Jul 17, 2021 | Team Udayavani |

ಹೊಸದಿಲ್ಲಿ: ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯವಾಗಿದ್ದು, ಆ. 31ರ ಒಳಗೆ ಮುಗಿಸುವಂತೆ ಎಲ್ಲ ವಿಶ್ವವಿದ್ಯಾನಿಲಯಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸೂಚನೆ ನೀಡಿದೆ.
ಈ ಸಂಬಂಧ ಅದು ಶನಿವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅ. 1ರಿಂದ ಹೊಸ ಶೈಕ್ಷಣಿಕ ವರ್ಷವನ್ನು ಆರಂಭಿಸುವಂತೆ ಈ ಮಾರ್ಗ ಸೂಚಿಯಲ್ಲಿ ಹೇಳಲಾಗಿದೆ.

Advertisement

ಮೊದಲ ಮತ್ತು 2ನೇ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯವಲ್ಲ. ಇವರಿಗೆ ಪ್ರಸಕ್ತ ವರ್ಷದ ಆಂತರಿಕ ಮೌಲ್ಯಮಾಪನದ ಮೇರೆಗೆ ಶೇ. 50 ಮತ್ತು ಹಿಂದಿನ ವರ್ಷದ ಸೆಮಿಸ್ಟರ್‌ ಸಾಧನೆ ಮೇರೆಗೆ ಉಳಿದ ಶೇ. 50 ಅಂಕ ನೀಡಬೇಕು.

ಅಂತಿಮ ವರ್ಷದ ಪರೀಕ್ಷೆಯನ್ನು ಆಫ್ ಲೈನ್‌/ ಆನ್‌ ಲೈನ್‌ ಮೂಲಕ ಮಾಡಬೇಕು. ಆ. 31ಕ್ಕೆ ಮುನ್ನ ಮುಗಿಸಬೇಕು. ಪರೀಕ್ಷೆ ವೇಳೆ ಕೊರೊನಾ ನಿಯಮ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಮಾರ್ಗಸೂಚಿಯ ಮುಖ್ಯಾಂಶಗಳು:
1 . ಜು. 31ರ ಒಳಗೆ 12ನೇ ತರಗತಿ ಅಥವಾ ದ್ವಿತೀಯ ಪಿಯು ಫ‌ಲಿತಾಂಶ ಪ್ರಕಟಿಸಬೇಕು .
2.  ಸೆ. 30ರ ಒಳಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶ ಮುಗಿಸಬೇಕು.
3. ಅ. 1ರಿಂದ ಅಥವಾ ಅ. 18ರಿಂದ ಆನ್‌ ಲೈನ್‌ ಅಥವಾ ಆಫ್ ಲೈನ್‌ ತರಗತಿ.
4. ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ತರಗತಿ.

ಜು. 31ರ ಒಳಗೆ ಫ‌ಲಿತಾಂಶ ನೀಡಿ
ಅ. 1ರಿಂದ ಶೈಕ್ಷಣಿಕ ವರ್ಷ ಆರಂಭಿಸುವಂತೆ ಸೂಚನೆ ನೀಡಿರುವ ಯುಜಿಸಿಯು ವಿವಿಧ ಪರೀಕ್ಷಾ ಮಂಡಳಿಗಳು ಜು. 31ರ ಒಳಗೆ 12ನೇ ತರಗತಿ ಫ‌ಲಿತಾಂಶ ನೀಡಬೇಕು ಎಂದಿದೆ. ಫ‌ಲಿತಾಂಶ ತಡವಾದಷ್ಟು ಪದವಿ ಪ್ರವೇಶ ವಿಳಂಬವಾಗುತ್ತದೆ. ಹೀಗಾಗಿ 12ನೇ ತರಗತಿ ಫ‌ಲಿತಾಂಶವನ್ನು ಬೇಗನೆ ನೀಡಬೇಕು. ಜು. 31ರ ಒಳಗೆ ಫ‌ಲಿತಾಂಶ ಬಾರದೆ ಪದವಿ ಪ್ರವೇಶ ವಿಳಂಬಿಸಿದರೆ, ಅ. 18ರಿಂದ ಶೈಕ್ಷಣಿಕ ವರ್ಷ ಆರಂಭಿಸಬಹುದು ಎಂದಿದೆ.

Advertisement

ಸೆ. 31ರೊಳಗೆ ಪ್ರವೇಶ ಪೂರ್ಣ
ಸೆ. 31ರ ಒಳಗೆ ಪದವಿ ಕಾಲೇಜುಗಳು ಪ್ರವೇಶ ಪ್ರಕ್ರಿಯೆ ಮುಗಿಸಬೇಕು. ಸೀಟುಗಳು ಭರ್ತಿಯಾಗದಿದ್ದರೆ ಅ. 31ರ ಒಳಗೆ ಅವುಗಳನ್ನೂ ಭರ್ತಿ ಮಾಡಿಕೊಳ್ಳಬೇಕು ಎಂದು ಯುಜಿಸಿ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next