Advertisement
ಕಾಲ ಕ್ರಮೇಣ ಗುಣಮಟ್ಟ ಹಾಗೂ ಕಥೆಯಲ್ಲಿ ಗಟ್ಟಿತನವಿರುವ ಸಿನಿಮಾಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವಂತಹ ಕಾಲ ಬಂತು. ಅಲ್ಲಿಂದ ಕೇವಲ ಟಿವಿ ರೈಟ್ಸ್ ಮತ್ತು ಡಬ್ಬಿಂಗ್ ರೈಟ್ಸ್ಗೆಂದೇ ತಯಾರಾಗುತ್ತಿದ್ದ ಸಿನಿಮಾಗಳ ಸಂಖ್ಯೆ ಕೂಡ ಇಳಿಮುಖವಾಯ್ತು. ಈಗ ಇವೆರೆಡನ್ನೂ ಹೊರತುಪಡಿಸಿರುವ ಹೊಸ ಟ್ರೆಂಡ್ ಶುರುವಾಗಿದೆ!
ಸಜ್ಜಾಗಿದ್ದ, ಚಿತ್ರೀಕರಣ ಪೂರೈಸಿ, ಇನ್ನೇನು ಚಿತ್ರಮಂದಿರಕ್ಕೆ ಅಪ್ಪಳಿಸಲು ರೆಡಿಯಾಗಿದ್ದ ಚಿತ್ರಗಳ ಪಾಡಂತೂ ಹೇಳತೀರದ್ದಾಗಿತ್ತು. ಎಲ್ಲಿಂದಲೋ ಹಣ ತಂದು ಸಿನಿಮಾಗೆ ಹಾಕಿದ್ದ ನಿರ್ಮಾಪಕರ ಪರಿಸ್ಥಿತಿಯಂತೂ ಹೀನಾಯವಾಗಿದ್ದು ಸುಳ್ಳಲ್ಲ. ಈಗಲೂ ಅದರಿಂದ ಆಚೆ ಬರಲಾಗದೆ ಒದ್ದಾಡುವಂತಹ ಪರಿಸ್ಥಿತಿಯೇ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ನಿರ್ಮಾಪಕರು ಆಯ್ಕೆ ಮಾಡಿಕೊಂಡ ದಾರಿ ಓಟಿಟಿ ಎಂಬ ವೇದಿಕೆ. ನಿಜ, ಓಟಿಟಿ ಫ್ಲಾಟ್‌ಫಾರಂನಲ್ಲಿ ತಮ್ಮ ಸಿನಿಮಾಗಳನ್ನು ಕೊಡುವ ಧೈರ್ಯ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರಮಂದಿರ ತೆರೆಯುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಸಾಧ್ಯ ಎಂಬುದನ್ನು
ಅರಿತಿರುವ ನಿರ್ಮಾಪಕರು, ಅರ್ಧಕ್ಕೆ ನಿಂತಿರುವ ಸಿನಿಮಾಗಳನ್ನು ಪೂರ್ಣಗೊಳಿಸಿ ಡಿಜಿಟಲ್ ವೇದಿಕೆಯಲ್ಲಿ ತಮ್ಮ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲವು ನಿರ್ದೇಶಕ, ನಿರ್ಮಾ ಪಕರು, ಓಟಿಟಿಗಾಗಿಯೇ ಕಥೆ ರೆಡಿಮಾಡಿಕೊಂಡು, ಸಿನಿಮಾ ನಿರ್ಮಿಸಿ, ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲು ತಯಾರಿ
ನಡೆಸಿದ್ದಾರೆ. ಕೆಲವರು ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ್ದಾರೆ. ಸಿನಿಮಾ ಮಂದಿ ಡಿಜಿಟಲ್ ವೇದಿಕೆಗೆ ಮೊರೆ ಹೋಗೋಕೆ ಕಾರಣ, ಕೊರೊನಾ ಸಮಸ್ಯೆಯಿಂದ ಚಿತ್ರಮಂದಿರ ಗಳು ಸದ್ಯಕ್ಕೆ ಓಪನ್ ಆಗುವುದಿಲ್ಲ ಎಂಬುದು ಒಂದಾದರೆ, ಸಾಲ ಮಾಡಿ ಸಿನಿಮಾ ಮಾಡಿದವರ ಸಮಸ್ಯೆಯೂ ಹೆಚ್ಚಾಗಿದ್ದರಿಂದ, ಅರ್ಧಕ್ಕೆ ನಿಂತಿರುವ, ಮುಗಿಯಲು ಬಂದಿರುವ ಚಿತ್ರಗಳನ್ನೂ ಕೂಡ ಡಿಜಿಟಲ್‌ಗೆ ಕೊಡಲು ಮುಂದಾಗುತ್ತಿದ್ದಾರೆ.
Related Articles
Advertisement
ಅಂದಹಾಗೆ, ಓಟಿಟಿ ಫ್ಲಾಟ್‌ಫಾರಂ ನಂಬಿಕೊಂಡೇ ಇಂದು ಅದೆಷ್ಟೋ ಹೊಸಬರು ಸಸ್ಪೆನ್ಸ್,ಥ್ರಿಲ್ಲರ್, ಹಾರರ್ ಮತ್ತು ಆ್ಯಕ್ಷನ್ ಕಂಟೆಂಟ್‌ಗೆ ಹೆಚ್ಚು ಒತ್ತು ಕೊಡುವ ಮೂಲಕ ಸಿನಿಮಾಮಾಡುವಲ್ಲಿ ನಿರತರಾಗಿದ್ದಾರೆ. ಅತೀ ಕಡಿಮೆ ಬಜೆಟ್‌ನಲ್ಲೂ ಒಳ್ಳೆಯ ಸಿನಿಮಾ ಮಾಡಿ ಸೈ ಎನಿಸಿಕೊಂಡವರ ಸಂಖ್ಯೆ ಬಹಳವೇ ಇದೆ. ಹಾಗಾಗಿ, ಅದೇ ದಾರಿಯಲ್ಲಿ ನಾವೂ ಹೋಗಬೇಕು ಎಂಬ ಉದ್ದೇಶದಿಂದಲೇ ಈಗ ಓಟಿಟಿಗಾಗಿಯೇ ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಓಟಿಟಿ ನಂಬಿಕೊಂಡೇ ಸಿನಿಮಾ ಮಾಡುವವರಿಗೆ ಅಂಥದ್ದೊಂದು ನಂಬಿಕೆ ಬಂದಿದ್ದಾರೂ ಯಾಕೆ? ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲವಾದರೂ, ಸದ್ಯದ ಪರಿಸ್ಥಿತಿಯಲ್ಲಂತೂ ಚಿತ್ರಮಂದಿರಗಳು ತೆರೆಯಲು ಸಾಧ್ಯವಿಲ್ಲ ಎಂಬ ಅರಿವು ಸಿನಿಮಾ ಮಂದಿಗಿದೆ. ಚಿತ್ರಮಂದಿರಗಳು ಆರಂಭಗೊಂಡರೂ, ಜನರು ಸಿನಿಮಾ ನೋಡಲು ಬರುತ್ತಾರೆ ಎಂಬ ಯಾವ ವಿಶ್ವಾಸವೂ ಇಲ್ಲ. ಬಂದರೂ ಸ್ಟಾರ್ ಸಿನಿಮಾಗಳಿಗೆ ಫ್ಯಾನ್ಸ್ ಮಾತ್ರ ಬರಬಹುದು ಎಂಬ ಲೆಕ್ಕಾಚಾರವೂ ಇದೆ. ಫ್ಯಾಮಿಲಿ ಆಡಿಯನ್ಸ್ ಕರೆತರುವುದು ಸದ್ಯಕ್ಕೆ ಸುಲಭವಿಲ್ಲ. ಹಾಗಾಗಿಯೇ, ಸಿನಿಮಾ ನಂಬಿಕೊಂಡೇ ಬದುಕು ಸವೆಸುತ್ತಿರುವ ಜನರೀಗ ಓಟಿಟಿಗಾಗಿಯೇ ಸಿನಿಮಾ ತಯಾರು ಮಾಡಲು ತುದಿಗಾಲ ಮೇಲೆ ನಿಂತಿರುವುದಂತೂ ಸುಳ್ಳಲ್ಲ. ಹಾಗೊಮ್ಮೆ ಓಟಿಟಿಗಾಗಿಯೇ ಸಿನಿಮಾ ಮಾಡುವವರ ಸಂಖ್ಯೆ ಲೆಕ್ಕ ಹಾಕಿದರೆ, ನೂರರ ಗಡಿಯತ್ತ ಬಂದು ನಿಲ್ಲುತ್ತದೆ. ಸದ್ದಿಲ್ಲದೆಯೇ, ಈ ರೀತಿಯ ಪ್ರಯತ್ನ ವೊಂದು ಸಾಗಿದೆ. ಮುಂದಿನ ದಿನಗಳಲ್ಲಿ ಇದು ಎಲ್ಲಿಗೆ ಬಂದು ನಿಲ್ಲುತ್ತೆ ಎಂಬುದೇ ಸದ್ಯಕ್ಕಿರುವ ಯಕ್ಷ ಪ್ರಶ್ನೆ. ವಿಜಯ್ ಭರಮಸಾಗರ