Advertisement

ಹುಡುಗಾಟದ ಕಥೆ ಹುಡುಕಾಟದಲ್ಲಿ ಕೊನೆ

02:41 PM Dec 20, 2020 | Suhan S |

ಅದೊಂದು ಕಾಲೇಜಿನಲ್ಲಿ ಯುವ ಉತ್ಸಾಹಿ ಹುಡುಗರ ತಂಡ. ಕ್ಯಾಂಪಸ್‌ನಲ್ಲಿ ಹುಡುಕಾಟ ಮಾಡಿಕೊಂಡು ಆರಾಮಾಗಿದ್ದ ಈ ಹುಡುಗರ ಗುಂಪು ಇದ್ದಕ್ಕಿದ್ದಂತೆ ರಿಸ್ಕ್ಒಂದನ್ನು ಮೈಮೇಲೆ ಎಳೆದುಕೊಳ್ಳುತ್ತದೆ. ಪ್ರೊಫೆಸರ್‌ ಒಬ್ಬರು ಹೇಳಿದ ಮಾತನ್ನು ಸವಾಲಾಗಿ ಸ್ವಿಕರಿಸಿ, ಯಾರೂ ವಾಪಾಸ್‌ ಬರದಂತಹ, ನಿಗೂಢತೆ-ರಹಸ್ಯಗಳನ್ನು ಹೊತ್ತ ದಟ್ಟಕಾಡಿಗೆ ಅಡಿಯಿಡುತ್ತದೆ. ಅಲ್ಲಿಯವರೆಗೂ ಕಾಲೇಜ್‌ ಕ್ಯಾಂಪಸ್‌ನಲ್ಲಿ ಸುತ್ತಾಡುತ್ತಿದ್ದ ನಾಲ್ಕು ಮಂದಿ ಹುಡುಗರು, ಇಬ್ಬರು ಹುಡುಗಿಯರು ನೋಡು ನೋಡುತ್ತಿದ್ದಂತೆ ಕಾಡುಪಾಲಾಗುತ್ತಾರೆ.ಹೀಗೆ ವಿಶೇಷವಾದ ಶಕ್ತಿಯೊಂದರ ರಹಸ್ಯ ಭೇದಿಸುವ ಸಲುವಾಗಿ ಕಾಡಿಗೆ ಹೋದ ಈ ಆರು ಮಂದಿ ಮತ್ತೆ ವಾಪಾಸ್‌ ಬರುತ್ತಾರಾ? ಕಾಡಿನ ನಿಗೂಢ ಶಕ್ತಿಯ ರಹಸ್ಯ ಭೇದಿಸುತ್ತಾರಾ? ಅನ್ನೋದು ಚಿತ್ರದ ಕ್ಲೈಮ್ಯಾಕ್ಸ್‌ ವೇಳೆಗೆ ಗೊತ್ತಾಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಆರ್‌.ಹೆಚ್‌ 100′ ಚಿತ್ರದ ಕಥೆಯ ಸಣ್ಣ ಎಳೆ.

Advertisement

ಆರಂಭದಲ್ಲಿ ಹುಡುಗಾಟದ ಮೂಲಕ ತೆರೆದುಕೊಳ್ಳುವ ಕಥೆ ನಂತರ ಹುಡುಕಾಟ ದವರೆಗೆ ಬಂದು ನಿಲ್ಲುತ್ತದೆ. ಚಿತ್ರದ ಮೊದಲಾರ್ಧ ಕೊಂಚ ಸ್ವಲ್ಪ ನಿಧಾನವಾದರೂ, ದ್ವಿತೀಯಾರ್ಧ ಚಿತ್ರಕಥೆ ಸ್ವಲ್ಪ ವೇಗ ಪಡೆದುಕೊಳ್ಳುತ್ತದೆ. ಮೆಡಿಕಲ್‌ ಮಾಫಿಯಾಕ್ಕೆ ಸಂಬಂಧಿಸಿದ ಕಥೆಯನ್ನು ಇಟ್ಟುಕೊಂಡು ಅದರಲ್ಲಿ ಸ್ನೇಹ, ಪ್ರೀತಿ, ಭಯ, ಛಲ, ತಮಾಷೆ, ಮತ್ಸರ, ಹಠ ಹೀಗೆ ಹಲವು ಅಂಶಗಳನ್ನು ಸೇರಿಸಿ ನಿರ್ದೇಶಕರು ತೆರೆಮೇಲೆ ಹೇಳುವ ಪ್ರಯತ್ನ ಮಾಡಿದ್ದಾರೆ. ಕಥೆಯ ಎಳೆ ಚೆನ್ನಾಗಿದ್ದರೂ, ಚಿತ್ರಕಥೆಯ ಕೆಲ ಸನ್ನಿವೇಶಗಳು ಕಥೆಯ ಓಟಕ್ಕೆ ಅಲ್ಲಲ್ಲಿ ಬ್ರೇಕ್‌ ಹಾಕುತ್ತದೆ. ನಿ

ರೂಪಣೆ, ಸಂಭಾಷಣೆಯ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನ ನೀಡಿದ್ದರೆ, ಚಿತ್ರ ಪ್ರೇಕ್ಷಕರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಮುಟ್ಟುವ ಸಾಧ್ಯತೆಗಳಿದ್ದವು. ಉಳಿದಂತೆ ಚಿತ್ರದ ಬಹುತೇಕ ಹೊಸ ಕಲಾವಿದರದ್ದು ಪರವಾಗಿಲ್ಲ ಎನ್ನಬಹುದಾದ ಅಭಿನಯ. ಚಿತ್ರದ ಛಾಯಾಗ್ರಹಣ ಮತ್ತು ಸಂಗೀತ ಗಮನಸೆ ಳೆಯುತ್ತದೆ. ಸಂಕಲನ ಕಾರ್ಯ ಸ್ವಲ್ಪ ಮೊನಚಾಗಿದ್ದರೆ, ಚಿತ್ರದ ಓಟ ಇನ್ನಷ್ಟು ಹೆಚ್ಚುತ್ತಿತ್ತು. ಒಟ್ಟಾರೆ ಕೆಲ ಲೋಪಗಳನ್ನುಬದಿಗಿಟ್ಟು ನೋಡುವುದಾದರೆ, ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಆರ್‌.ಹೆಚ್‌ 100′ ಚಿತ್ರ ಹಾರರ್‌ ಸಿನಿಪ್ರಿಯರಿಗೆ ಇಷ್ಟವಾಗಬಹುದು.

 

ಚಿತ್ರ:ಆರ್‌.ಹೆಚ್‌ 100

Advertisement

ನಿರ್ದೇಶನ: ಮಹೇಶ್‌ ಎಂ.ಸಿ

ನಿರ್ಮಾಣ: ಎಸ್‌ಎಲ್‌ಎಸ್‌ ಪ್ರೊಡಕ್ಷನ್ಸ್‌

 ತಾರಾಗಣ: ಹರೀಶ್‌ ಕುಮಾರ್‌, ಗಣೇಶ್‌, ಚಿತ್ರಾ, ಸೋಮಶೇಖರ್‌, ಕಾವ್ಯಾ ಮತ್ತಿತರರು

 

 

– ಜಿ.ಎಸ್‌.ಕೆ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next