Advertisement

Producer: ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಕುಸಿದು ಬಿದ್ದು ಖ್ಯಾತ ನಿರ್ಮಾಪಕ ಮೃ*ತ್ಯು

03:54 PM Dec 02, 2024 | |

ತಿರುವನಂತಪುರಂ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿನಿಮಾ ನಿರ್ಮಾಪಕ (Film Producer) ರೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ (ಡಿ.1ರಂದು) ನಡೆದಿದೆ.

Advertisement

ಮಲಯಾಳಂ ಚಲನಚಿತ್ರ ನಿರ್ಮಾಪಕ ಮನು ಪದ್ಮನಾಭನ್ ನಾಯರ್ (Producer Manu Padmanabhan Nair) ಮೃತ ನಿರ್ಮಾಪಕ.

ಮನು ಪದ್ಮನಾಭನ್ ನಾಯರ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಕೊಯಮತ್ತೂರಿನಿಂದ ಪಾಲಕ್ಕಾಡ್‌ಗೆ ಹೋಗುತ್ತಿದ್ದ ವೇಳೆ ಅವರು ಇದ್ದಕ್ಕಿದ್ದಂತೆ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಮನು ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Tollywood: ಓಯೋ ರೂಮಲ್ಲಿ ಡ್ರಗ್ಸ್‌ ಪಾರ್ಟಿ; ಖ್ಯಾತ ನೃತ್ಯ ಸಂಯೋಜಕ ಸೇರಿ ನಾಲ್ವರ ಬಂಧನ

ಯಾರು ಈ ಮನು ಪದ್ಮನಾಭನ್ ನಾಯರ್:  ಮಾಲಿವುಡ್‌ ಸಿನಿಮಾರಂಗದಲ್ಲಿ ಮನು ಚಿರಪರಿಚಿತ ಹೆಸರು. ಹಲವು ಸಿನಿಮಾಗಳಿಗೆ ತಮ್ಮ ಬ್ಯಾನರ್‌ ಅಡಿಯಲ್ಲಿ ಬಂಡವಾಳ ಹಾಕಿ ಗೆದ್ದಿದ್ದಾರೆ.

Advertisement

ಮೀರಾ ಜಾಸ್ಮಿನ್ ಪ್ರಧಾನ ಭೂಮಿಕೆಯಲ್ಲಿದ್ದ ’10 ಕಲ್ಪನಾಕಲ್’ ಎನ್ನುವ ಸಿನಿಮಾಕ್ಕೆ ಬಂಡವಾಳ ಹಾಕುವ ಮೂಲಕ ಅವರು ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಇದಾದ ಬಳಿಕ ಅವರು ಜಯಸೂರ್ಯ ಅವರ ‘ವೆಲ್ಲಾಂʼ ಸಿನಿಮಾಕ್ಕೆ ಬಂಡವಾಳ ಹಾಕಿದ್ದರು. ಈ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಗಳಿಸಿತು. ಇದಾದ ನಂತ ಅವರು ಆಸಿಫ್ ಅಲಿ ಅಭಿನಯದ ತನಿಖಾ ಥ್ರಿಲ್ಲರ್ ‘ಕೂಮನ್ʼ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇದು ಆಸಿಫ್‌ ಅಲಿ ಅವರಿಗೆ ಕಂಬ್ಯಾಕ್‌ ಮಾಡಿಕೊಟ್ಟ ಸಿನಿಮಾವಾಗಿತ್ತು.

ಸದ್ಯ ಅವರು ʼವೀನೆʼ ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next