Advertisement

ಸೇನೆಗೆ ಸೆಲ್ಯೂಟ್‌ ಹೊಡೆದ ಚಿತ್ರರಂಗ

01:02 AM Feb 27, 2019 | |

ಬೆಂಗಳೂರು: ಪುಲ್ವಾಮಾ ಉಗ್ರರ ದಾಳಿ ನಂತರ,ನಂತರ, ನಿನ್ನೆ ನಸುಕಿನ ಜಾವ ಭಾರತೀಯ ವಾಯುಸೇನೆ ಪಾಕಿಸ್ತಾನ  ಉಗ್ರರ ನೆಲೆ ಮೇಲೆ ನಡೆಸಿದ ವೈಮಾನಿಕ ದಾಳಿಗೆ ದೇಶಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಇನ್ನು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿ ಇಡೀ ಭಾರತೀಯ ಚಿತ್ರರಂಗವೇ, ಸೇನೆಯ ಈ ಕಾರ್ಯಚರಣೆಗೆ ಮೆಚ್ಚುಗೆ – ಬೆಂಬಲವನ್ನು ವ್ಯಕ್ತಪಡಿಸಿ, ಮುಕ್ತಕಂಠದಿಂದ ಸೇನೆಯ ಶೌರ್ಯ, ಸಾಹಸವನ್ನು ಕೊಂಡಾಡಿದೆ. ಚಿತ್ರರಂಗದ ಖ್ಯಾತ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಏರ್‌ ಸ್ಟ್ರೈಕ್‌ ಬಗ್ಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಮತ್ತು ಮಾಧ್ಯಮಗಳಿಗೆ ನೀಡಿದ್ದಾರೆ.

Advertisement

ಇವರೊಂದಿಗೆ ಖ್ಯಾತ ಟಾಲಿವುಡ್‌ ನಿರ್ದೇಶಕ ರಾಜಮೌಳಿ, ಬಾಲಿವುಡ್‌ ನಟರಾದ ಸಂಜಯ್‌ ದತ್‌, ಸೋನು ಸೂದ್‌, ಸುನೀಲ್‌ ಶೆಟ್ಟಿ, ನಟಿ ರವೀನಾ ಟಂಡನ್‌, ಸಂಗೀತ ನಿರ್ದೇಶಕ ಗುರುಕಿರಣ್‌, ನಟಿ ತಮನ್ನಾ ಭಾಟಿಯಾ, ಚಿರಂಜೀವಿ ಸರ್ಜಾ, ಸಮಂತಾ ಅಕ್ಕಿನೇನಿ ಸೇರಿದಂತೆ ಸಾಕಷ್ಟು ಚಿತ್ರರಂಗದ ಕಲಾವಿದರು ಭಾರತೀಯ ವಾಯುಪಡೆಯ ಕಾರ್ಯಕ್ಕೆ ಸೆಲ್ಯೂಟ್‌ ಹೊಡೆದಿದ್ದಾರೆ.

ನಮ್ಮ ಭಾರತದ ವಾಯುಪಡೆ ಉಗ್ರರನ್ನು ನಾಶ ಮಾಡಲು ದಾಳಿ ಮಾಡಿದೆ. ಜೈ ಹಿಂದ್‌. ನಮ್ಮ ವಾಯುಪಡೆ ಬಗ್ಗೆ ಹೆಮ್ಮೆ ಇದೆ.
● ಗಣೇಶ್‌, ನಟ

ಇಂಡಿಯನ್ಸ್‌ ಮೈಯಾಗ್‌ ಎಷ್ಟ್ ಪೊಗರು ಐತೆ ಅಂತ ಚೆಕ್‌ ಮಾಡಾಕ್‌ ಬರಬೇಡಾ… ಮಾಕ್ಳಾ ಬ್ಲಾಸ್ಟ್‌
ಆಗೋಯ್ತಿರಾ. ಬೋಲೋ ಭಾರತ್‌ ಮಾತಾ ಕಿ ಜೈ… ಜೈ ಆಂಜನೇಯ.
● ಧ್ರುವ ಸರ್ಜಾ, ನಟ

Advertisement

Udayavani is now on Telegram. Click here to join our channel and stay updated with the latest news.