Advertisement

ಎಲ್ಲ ಜಿಲ್ಲೆಗಳಲ್ಲೂ ಚಿತ್ರೋತ್ಸವ 

04:51 PM Jul 23, 2018 | Team Udayavani |

ಧಾರವಾಡ: ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸದಭಿರುಚಿಯ ಚಿತ್ರಗಳನ್ನು ಆಧರಿಸಿ ಚಲನಚಿತ್ರೋತ್ಸವ ಆಯೋಜಿಸುವ ಯೋಜನೆ ಇದೆ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ಹೇಳಿದರು.

Advertisement

ನಗರದ ಸೃಜನಾ ರಂಗಮಂದಿರದಲ್ಲಿ ಕರ್ನಾಟಕ ಮಹಾವಿದ್ಯಾಲಯವು ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕೆಸಿಡಿ ಸಿನಿಸಪ್ತಕ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಚಲನಚಿತ್ರೋತ್ಸವದ ಮೂಲಕ ಸದಭಿರುಚಿ ಚಿತ್ರಗಳಿಗೆ ಪ್ರೋತ್ಸಾಹ ಹಾಗೂ ಪ್ರೇಕ್ಷಕರತ್ತ ಚಿತ್ರಗಳನ್ನು ಒಯ್ಯುವ ಕೆಲಸ ಮಾಡುವ ಚಿಂತನೆ ಇದೆ ಎಂದರು.

ಸಾಮಾಜಿಕ ಜಾಲತಾಣಗಳು ಸಮಾಜದ ಸಾಮರಸ್ಯ ಹಾಳು ಮಾಡುತ್ತಿವೆ. ಸಾಮಾಜಿಕ ತಾಣಗಳು ಅಣು ಬಾಂಬ್‌ ತರಹ ಇಡೀ ಸಮಾಜವನ್ನು ನಿಷ್ಕ್ರಿಯಗೊಳಿಸುವ ಸುಳ್ಳು ಸುದ್ದಿ ಮತ್ತು ನಕಾರಾತ್ಮಕ ಸಂಗತಿಗಳನ್ನು ಹಬ್ಬಿಸುವ ಮೂಲಕ ಸಮಾಜದಲ್ಲಿ ಕೋಮು ಸೌಹಾರ್ದತೆ ಕೆಡಿಸುತ್ತಿವೆ ಎಂದು ಹೇಳಿದರು.

ವಿದ್ಯಾರ್ಥಿಗಳು ತಂತ್ರಜ್ಞಾನ ಆಧಾರಿತ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಜ್ಞಾನ ವಿಷಯಗಳನ್ನು ಅರಿಯಲು ಬಳಸಿಕೊಳ್ಳಬೇಕು ಮತ್ತು ಓದಿನ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದು ಸಲಹೆ ನೀಡಿದರು. ಬೆಳಗಾವಿ ಸಂಸದ ಸುರೇಶ ಅಂಗಡಿ ಮಾತನಾಡಿ, ವಿದ್ಯಾರ್ಥಿ ಸಮುದಾಯ ದೇಶದ ಇತಿಹಾಸ ಅರಿಯಬೇಕು. ಮುಂದಿನ ದಿನಗಳಲ್ಲಿ ಕೃಷಿ ವಲಯಕ್ಕೆ ಹೆಚ್ಚು ಪ್ರಾಧ್ಯಾನತೆ ಸಿಗಲಿದೆ ಎಂದರು. ಕವಿವಿ ಕುಲಪತಿ ಪ್ರೊ| ಪ್ರಮೋದ ಗಾಯಿ ಮಾತನಾಡಿದರು. ಕರ್ನಾಟಕ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಸಂಗೀತಾ ಕಟ್ಟಿ ಗಾಯನ ನಡೆಯಿತು. ಮಾಜಿ ಶಾಸಕ ಚಂದರಕಾಂತ ಬೆಲ್ಲದ, ರಂಗಕರ್ಮಿ ಯಶವಂತ ಸರದೇಶಪಾಂಡೆ, ಚಿತ್ರ ನಿರ್ಮಾಪಕ ಕೆ.ಎಂ. ನಂಜೇಗೌಡ ಮತ್ತು ಸತೀಶ, ಪ್ರಾಚಾರ್ಯರಾದ ಡಾ|ರಾಜೇಶ್ವರಿ ಮಹೇಶ್ವರಯ್ಯ, ಡಾ|ಸಿ. ಎಫ್‌. ಮೂಲಿಮನಿ, ಡಾ|ನಂದಾ ಪಾಟೀಲ, ಡಾ|ಎಸ್‌.ಆರ್‌ ಗಣಿ, ಡಾ| ಅರುಣಾ ಹಳ್ಳಿಕೇರಿ ಇದ್ದರು. ಸಮಾರೋಪ ಕಾರ್ಯಕ್ರಮದ ನಂತರ 22 ಜುಲೈ 1947 ಎಂಬ ಚಲನಚಿತ್ರ ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next