Advertisement

ಜರ್ಕ್‌ನಲ್ಲಿ ನಿಂತ ಜೀವನ‌

07:44 PM Jul 25, 2019 | mahesh |

ಸಿನಿಮಾ ಆರಂಭವಾದ ವೇಗವನ್ನು ನೋಡಿದರೆ “ಜರ್ಕ್‌’ ಎಂಬ ಚಿತ್ರ ಯಾವಾಗಲೋ ಬಿಡುಗಡೆಯಾಗಬೇಕಿತ್ತು. ಆದರೆ ಬಹುತೇಕ ಎಲ್ಲಾ ಹೊಸಬರಿಗೂ ಎದುರಾಗುವಂತಹ ಸಮಸ್ಯೆ ಈ ಚಿತ್ರಕ್ಕೂ ತಲೆದೋರಿದ್ದರಿಂದ ಚಿತ್ರ ನಿಧಾನವಾಗಿದೆ. ಈಗ ಎಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ ಚಿತ್ರ, ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು ಬಿಡುಗಡೆಯಾಗುತ್ತಿದೆ. ಈ ಮೂಲಕ ಒಂದಷ್ಟು ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಪರಿಚಯವಾಗುತ್ತವೆ.

Advertisement

ಸಾಮಾನ್ಯವಾಗಿ ಜರ್ಕ್‌ ಎಂಬ ಪದವನ್ನು ವಾಹನಗಳ ವಿಷಯದಲ್ಲಿ ಬಳಸುತ್ತಾರೆ. “ಜರ್ಕ್‌ ತಗೋತ್ತಿದೆ’ ಎಂಬುದು ಸಾಮಾನ್ಯ. ಇದೇ ವಿಷಯವನ್ನು ಜೀವನಕ್ಕೆ ಅನ್ವಯಿಸಿ ನಿರ್ದೇಶಕರು ಸಿನಿಮಾ ಮಾಡಿದ್ದಾರೆ. ಮಹಾಂತೇಶ್‌ ಮದಕರಿ ಈ ಚಿತ್ರದ ನಿರ್ದೇಶಕರು. ಬೆಂಗಳೂರು ಮೆಟ್ರೋ ಸಂಚಾರ ವ್ಯವಸ್ಥೆಯ ಉದ್ಯೋಗಿಯಾಗಿರುವ ಇವರಿಗೆ ಸಿನಿಮಾ, ಬರವಣಿಗೆಯ ಮೇಲೆ ಆಸಕ್ತಿ. ಅದು ಇವತ್ತು ಅವರನ್ನು ನಿರ್ದೇಶಕರನ್ನಾಗಿಸಿದೆ. ಜೀವನದಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ “ಜರ್ಕ್‌’ ಇದ್ದೇ ಇರುತ್ತದೆ. ಅದು ಹೇಗೆ, ಯಾಕೆ, ಏನು ಎಂಬ ಅಂಶವನ್ನೇ ಇಟ್ಟುಕೊಂಡು “ಜರ್ಕ್‌’ ಚಿತ್ರ ಮಾಡಿದ್ದಾರಂತೆ. ಕನಸುಗಳನ್ನು ಕಟ್ಟಿಕೊಂಡು ಬೆಂಗಳೂರಿಗೆ ಬರುವ ನಾಯಕ, ಮುಂದೆ ಏನೇನು ಸಮಸ್ಯೆಗಳನ್ನು ಎದುರಿಸುತ್ತಾನೆ ಮತ್ತು ಅದರಿಂದ ಹೇಗೆ ಹೊರಬರುತ್ತಾನೆ ಎಂಬ ಅಂಶವೂ ಚಿತ್ರದಲ್ಲಿ ಪ್ರಮುಖವಾಗಿದೆ. ಚಿತ್ರದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ನಿರ್ದೇಶಕರ ಪ್ರತಿಭೆ ಬಗ್ಗೆ ಮೆಚ್ಚುಗೆ ಸೂಚಿಸಿದರು ಅವರು.

ಚಿತ್ರವನ್ನು ಕಂಪಲಿ ಚಾರಿ ಹಾಗೂ ರವಿಕುಮಾರ್‌ ಸೇರಿ ನಿರ್ಮಿಸಿದ್ದಾರೆ. “ತಿಥಿ’ ಖ್ಯಾತಿಯ ನಟ ಗಡ್ಡಪ್ಪ, ಕೃಷ್ಣ ರಾಜ್‌, ನಿತ್ಯಾರಾಜ್‌, ಆಶಾ ಭಂಡಾರಿ, ಸಚಿನ್‌, ಬುಲೆಟ್‌ ಪ್ರಕಾಶ್‌, ಪವನ್‌, ಬಿರಾದರ್‌, ಎಂ.ಎಸ್‌ ಉಮೇಶ್‌, ಕುರಿ ರಂಗ, ಅರಸು, ಮನು ಪಾಂಡು ಮೊದಲಾದವರು “ಜರ್ಕ್‌’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಎಡ್ವರ್ಡ್‌ ಷಾ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಚಂದ್ರು ಸೊಂಡೆಕೊಪ್ಪ ಛಾಯಾಗ್ರಹಣ, ಮಂಜುನಾಥ್‌ ಕಾಲಮನೆ ಸಂಕಲನ, ಥ್ರಿಲ್ಲರ್‌ ಮಂಜು ಸಾಹಸ ಚಿತ್ರದಲ್ಲಿದೆ. “ಜರ್ಕ್‌’ ರಾಜ್ಯಾದ್ಯಂತ ಸುಮಾರು ಐವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next