Advertisement
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಕ್ರಿಸೆಂಟ್ ರಸ್ತೆಯಲ್ಲಿರುವ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ಸೆ.23ಕ್ಕೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಅಂದೇ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ರಾತ್ರಿ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.
Related Articles
Advertisement
ಉಳಿದಂತೆ ಒಂದು ಖಜಾಂಚಿ ಸ್ಥಾನಕ್ಕೆ ಅಂಚೆಹಳ್ಳಿ ಶಿವಕುಮಾರ್, ಜಯಸಿಂಹ ಮುಸುರಿ ಬಿ.ಕೆ. ಮತ್ತು ದಯಾಳ್ ಪದ್ಮನಾಭನ್ ಸೇರಿದಂತೆ ಮೂವರು ನಾಮಪತ್ರ ಸಲ್ಲಿಸಿದ್ದಾರೆ.
ಕಾರ್ಯಕಾರಿ ಸಮಿತಿಯ 16 ಸ್ಥಾನಕ್ಕೆ 40 ಅಭ್ಯರ್ಥಿಗಳು: ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಸ್ಥಾನದಂತೆ, ಕಾರ್ಯಕಾರಿ ಸಮಿತಿಯ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ತೀವ್ರ ಹಣಾಹಣಿ ನಡೆಯುತ್ತಿದೆ. ಮಂಡಳಿಯ ಕಾರ್ಯಕಾರಿ ಸಮಿತಿಯ 16 ಸ್ಥಾನಕ್ಕೆ ಈಗಾಗಲೇ ಬರೋಬ್ಬರಿ 40 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿ, ಕಣದಲ್ಲಿದ್ದಾರೆ.
ಕನ್ನಡ ಸಿನಿಮಾ ನಿರ್ಮಾಪಕರು ಮತ್ತು ಪ್ರದರ್ಶಕರಿಗೆ ಯುಎಫ್ಒ/ಕ್ಯೂಬ್ ಗಳ ಬದಲಾಗಿ ನಮ್ಮದೇ ಆದ ಒಂದು ಪ್ರದರ್ಶನ ವ್ಯವಸ್ಥೆ ಬೇಕಾಗಿದೆ. ತುಂಬ ದುಬಾರಿಯಾಗಿರುವ ಸಿನಿಮಾಗಳ ಅಪ್ ಲೋಡ್ ಶುಲ್ಕವನ್ನು ಗಣನೀಯವಾಗಿ ಕಡಿಮೆ ಮಾಡಬೇಕಾಗಿದೆ. ಹೀಗಾಗಿ ವಾಣಿಜ್ಯ ಮಂಡಳಿಯಿಂದಲೇ ಇದಕ್ಕಾಗಿ ಒಂದು ಪ್ರತ್ಯೇಕ ಫ್ಲಾರ್ಟ್‌ಫಾರ್ಮ್ ನಿರ್ಮಿಸುವ ಯೋಚನೆಯಿದೆ. ಇದರಿಂದ ಪ್ರತಿವರ್ಷ ನಿರ್ಮಾಪಕರಿಗೆ, ಪ್ರದರ್ಶಕರಿಗೆ ಹತ್ತಾರು ಕೋಟಿ ರೂ. ಉಳಿತಾಯವಾಗುತ್ತದೆ. ಉಳಿದಂತೆ 60 ವರ್ಷ ಮೇಲ್ಪಟ್ಟು ಕಷ್ಟದಲ್ಲಿರುವ ಚಿತ್ರರಂಗದವರಿಗೆ ಪಿಂಚಣಿ ನಿಧಿ ಸೇರಿ ದಂತೆ ಹಲವು ಯೋಜ ನೆ ಗಳನ್ನು ಜಾರಿಗೊಳಿಸುವ ಕನಸಿದೆ. -ಎ. ಗಣೇಶ್, ಅಧ್ಯಕ್ಷ ಸ್ಥಾನದ ಆಕಾಂಕ್ಷಿ
ರ್ನಾಟಕದಲ್ಲೇ ಕನ್ನಡ ಸಿನಿಮಾಗಳಿಗೆ ಪ್ರಚಾರದಲ್ಲಿ ಮಲತಾಯಿ ಧೋರಣೆ ಆಗುತ್ತಿರುವುದನ್ನು ತಡೆಯಬೇಕಾಗಿದೆ. ಮಂಡಳಿ ಸದಸ್ಯರಿಗೆ ರೀ-ಕ್ರಿಯೇಶನ್ಸ್ ಕ್ಲಬ್ ಮಾಡುವ ಯೋಜನೆಯಿದೆ. ಸಹಕಾರ ಸಂಘ ರಚಿಸಿ ಸಿನಿಮಾರಂಗದವರಿಗೆ ಸೈಟ್ ನಿರ್ಮಿಸುವ ಆಲೋಚನೆಯಿದೆ. -ಮಾರ್ ಸುರೇಶ್, ಅಧ್ಯಕ್ಷ ಸ್ಥಾನದ ಆಕಾಂಕ್ಷಿ
ಹೊಸ ನಿರ್ಮಾಪಕರಿಗೆ ಸಿನಿಮಾ ಮೇಕಿಂಗ್ ಬಗ್ಗೆ ತಿಳಿವಳಿಕೆ, ಯುಎಫ್ಓ/ಕ್ಯೂಬ್ ಸೌಲಭ್ಯವನ್ನು ಬೆಂಗಳೂರಿನಲ್ಲೇ ಕಲ್ಪಿಸಬೇಕಾಗಿದೆ. ಮೈಸೂರಿನಲ್ಲಿರುವ ಮಂಡಳಿ ನಿವೇಶನದಲ್ಲಿ ಆ ಭಾಗದ ಸದಸ್ಯರಿಗೆ ಅನುಕೂಲವಾಗುವಂತೆ ಸ್ವಂತ ಕಟ್ಟಡ ಕಟ್ಟುವ ಯೋಚನೆಯಿದೆ. -ಎನ್.ಎಂ.ಸುರೇಶ್, ಅಧ್ಯಕ್ಷ ಸ್ಥಾನದ ಆಕಾಂಕ್ಷಿ
ಇಡೀ ಭಾರತೀಯ ಚಿತ್ರರಂಗ ನಮ್ಮ ಕಡೆಗೆ ತಿರುಗಿ ನೋಡುವಂಥ ಕೆಲಸ ನಮ್ಮ ವಾಣಿಜ್ಯ ಮಂಡಳಿ ಕಡೆಯಿಂದ ಆಗಬೇಕು. ಫಿಲಂ ಸಿಟಿ ಆದಷ್ಟು ಬೇಗ ನಿರ್ಮಾಣವಾಗಬೇಕು, ಹಲವು ವರ್ಷಗಳಿಂದ ಇರುವ ಯುಎಫ್ಒ/ ಕ್ಯೂಬ್ ಸಮಸ್ಯೆಗೆ ಈ ಆರಿಯಾದರೂ ಪರಿಹಾರ ಸಿಗಬೇಕು. -ಶ್ರೀನಿವಾಸ್ ಹೆಚ್. ಸಿ (ಶಿಲ್ಪಾ ಶ್ರೀನಿವಾಸ್), ಅಧ್ಯಕ್ಷ ಸ್ಥಾನದ ಆಕಾಂಕ್ಷಿ