ಗ್ರೂಪ್ ಅಡ್ಮಿನ್: ಶ್ರೀನಿಧಿ, ನಮ್ರತಾ, ನಟರಾಜ್, ಶ್ರೀಕೇತ್, ಸುಧೀಕ್ಸ್, ಮಂದಾರ, ಸಂಪತ್, ವಿನಯ್
Advertisement
ದೇಶಭಕ್ತಿ, ಸಾಹಿತ್ಯ, ಸಿನಿಮಾ, ಕಲೆಯಲ್ಲಿ ಆಸಕ್ತಿಯುಳ್ಳ ನಾವೊಂದಿಷ್ಟು ಗೆಳೆಯರು ವಾಟ್ಸಾಪ್ ಗ್ರೂಪ್ ಕಟ್ಟಿಕೊಂಡಿದ್ದೇವೆ. ರಾಷ್ಟ್ರೀಯ ಹಬ್ಬ, ರಾಷ್ಟ್ರನಾಯಕರ ಜನ್ಮದಿನಗಳಂದು ಗ್ರೂಪ್‌ನ ಹೆಸರನ್ನು ಬದಲಿಸಿ, ಆ ದಿನದ ಮಹತ್ವವನ್ನು ಗ್ರೂಪ್‌ನಲ್ಲಿ ಶೇರ್ ಮಾಡಿ, ನಮ್ಮದೇ ರೀತಿಯಲ್ಲಿ ಹಬ್ಬ ಆಚರಿಸುತ್ತೇವೆ. ಸಿನಿಮಾ, ಪುಸ್ತಕ, ನಾಟಕ, ರಾಜಕೀಯ ಹೀಗೆ ಹತ್ತು ಹಲವು ವಿಷಯಗಳ ಚರ್ಚೆಯೂ ನಡೆಯುತ್ತದೆ. ಅಡ್ಮಿನ್‌ಗಳಲ್ಲಿ ಒಬ್ಬರಾದ ಸಂಪತಣ್ಣ, ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ, ಯಾವ ಸಿನಿಮಾ ನೋಡಬಹುದು, ಯಾವುದು ಚೆನ್ನಾಗಿಲ್ಲ, ಯಾವ ಸಿನಿಮಾವನ್ನು ನೋಡಲೇಬೇಕು ಎಂಬ ಮಾಹಿತಿ ಪ್ರತಿ ವಾರವೂ ನಮಗೆ ಸಿಗುತ್ತದೆ. ಇತ್ತೀಚೆಗೆ ಒಂದು ಆ್ಯಕ್ಷನ್ ಸಿನಿಮಾ ಬಿಡುಗಡೆಯಾಯ್ತು. ಕಲಾತ್ಮಕ ಸಿನಿಮಾಗಳನ್ನು ಇಷ್ಟಪಡುವ ಬಹುತೇಕ ಸದಸ್ಯರಿಗೆ ಆ ಸಿನಿಮಾದ ಟ್ರೇಲರ್ ಕೂಡಾ ಇಷ್ಟವಾಗಿರಲಿಲ್ಲ. ಆ್ಯಕ್ಷನ್ ಸಿನಿಮಾಗಳನ್ನು ಇಷ್ಟಪಡುವ ಶ್ರೀಕೇತ್ ಅವರು, ಆ ಸಿನಿಮಾ ನೋಡೋಕೆ ಹೋಗ್ತಿದೀನಿ ಕಣೊ ಅಂತೊಂದು ಮೆಸೇಜ್ ಹರಿಬಿಟ್ಟರು. ಆ ಮೆಸೇಜ್ ಗ್ರೂಪ್‌ನಲ್ಲಿ ಸಂಚಲನವನ್ನೇ ಸೃಷ್ಟಿಸಿಬಿಟ್ಟಿತು.