Advertisement

ದಕ್ಷಿಣದ ಭಾಷೆಗಳಿಗೆ ಫೈಲ್ಸ್‌ ಡಬ್ಬಿಂಗ್‌

12:33 AM Mar 21, 2022 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಭಾರೀ ಮೆಚ್ಚುಗೆ ಪಡೆಯುತ್ತಿರುವ “ದಿ ಕಾಶ್ಮೀರ್‌ ಫೈಲ್ಸ್‌’ ಸಿನೆಮಾವನ್ನು ದಕ್ಷಿಣ ಭಾರತದ ನಾಲ್ಕು ಭಾಷೆಗಳಿಗೆ ಡಬ್ಬಿಂಗ್‌ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

Advertisement

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಕ್ಕೆೆ ಡಬ್‌ ಆಗಲಿದೆ. ಆದರೆ ಡಬ್ಬಿಂಗ್‌ ಆಗಿರುವ ಚಿತ್ರ ಯಾವಾಗ ತೆರೆ ಕಾಣಲಿದೆ ಎನ್ನುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಕೊಟ್ಟಿಲ್ಲ.

ಡಬ್‌ ಆದ ಚಿತ್ರ ಬರುವವರೆಗೂ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಸಿನೆಮಾವನ್ನು ಸಬ್‌ಟೈಟಲ್‌ಗ‌ಳೊಂದಿಗೆ ಪ್ರಸಾರ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಸಿನೆಮಾವನ್ನು ಕನ್ನಡಕ್ಕೆ ಡಬ್‌ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಪಾಕಿಸ್ಥಾನ ಕಾರಣ: ಜಮ್ಮು ಕಾಶ್ಮೀರದಲ್ಲಿ ನಡೆದಿದ್ದ ಕಾಶ್ಮೀರಿ ಪಂಡಿತರ ಹತ್ಯೆ ಘಟನೆಗಳಿಗೆ ಪಾಕಿಸ್ಥಾನ ಮತ್ತು ಉಗ್ರಗಾಮಿಗಳೇ ಕಾರಣ. ನಾಗರಿಕ ಸಮಾಜಗಳು ಇವುಗಳ ವಿರುದ್ಧ ನಿಲ್ಲಬೇಕು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.

Advertisement

ಖೇರ್‌ ತಾಯಿಯೂ ಭಾವುಕ
“ದ ಕಾಶ್ಮೀರ್‌ ಫೈಲ್ಸ್‌ ‘ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನುಪಮ್‌ ಖೇರ್‌, ತಮ್ಮ ತಾಯಿ ದುಲಾರಿ ಅವರೊಂದಿಗೆ ಸಿನೆಮಾ ಬಗ್ಗೆ ಮಾತನಾಡಿರುವ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮೂಲತಃ ಕಾಶ್ಮೀರಿ ಪಂಡಿತರೇ ಆಗಿರುವ ದುಲಾರಿ ಅವರು, ಹೊಸ ಮನೆ ಕಟ್ಟಿಕೊಂಡಿದ್ದ ನನ್ನ ತಮ್ಮನಿಗೆ ಇದ್ದಕ್ಕಿದ್ದಂತೆ ಮನೆ ಬಿಟ್ಟು ಓಡಿ ಹೋಗುವಂತೆ ಮಾಡಿದರು. ಅವನು ಎಲ್ಲವನ್ನೂ ಬಿಟ್ಟು ಟೆಂಟ್‌ ಒಂದರಲ್ಲಿ ಬದುಕಿದ. ಅದೇ ಕೊರಗಿನಲ್ಲೇ ಪ್ರಾಣ ಬಿಟ್ಟ. ಇದು ನಿಜಕ್ಕೂ ಸರಿಯಾದ ಸಿನೆಮಾ. ಕಾಶ್ಮೀರದಲ್ಲಿ ಏನಾಯಿತೋ ಅದನ್ನೇ ತೋರಿಸಿದ್ದರಿಂದ ಸಿನೆಮಾ ಗೆದ್ದಿದೆ ಎಂದು ಅವರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next