Advertisement

ಬಾಲ್ಯವಿವಾಹ ನಡೆಸಿದ್ರೆ ಗ್ರಾಮದ ವಿರುದ್ಧವೇ ಎಫ್ಐಆರ್‌ ದಾಖಲು

12:55 PM Apr 16, 2017 | Team Udayavani |

ಭೋಪಾಲ್‌: ಬಾಲ್ಯ ವಿವಾಹ ಮಾಡಿದರೆ, ಪೋಷಕರ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತದೆ. 

Advertisement

ಆದರೆ ಮಧ್ಯಪ್ರದೇಶದಲ್ಲಿ ಮಾತ್ರ ಬಾಲ್ಯ ವಿವಾಹ ನಡೆಸಿದರೆ  ಗ್ರಾಮದ ವಿರುದ್ಧವೇ ಎಫ್ಐಆರ್‌ ದಾಖಲಿಸುವ ಎಚ್ಚರಿಕೆಯನ್ನು ಮಧ್ಯಪ್ರದೇಶ ಸರಕಾರ ನೀಡಿದೆ. ಇಂಥದ್ದೊಂದು ಅಪರೂಪದ ಪ್ರಕರಣ ವರದಿಯಾಗಿದೆ. ಗುಣಾ ಜಿಲ್ಲೆಯ ತಾರಾಪುರ ಗ್ರಾಮದಲ್ಲಿ 5 ವರ್ಷದ ಬಾಲಕಿಗೆ 8 ವರ್ಷದ ಬಾಲಕನ ಜತೆ ವಿವಾಹ ಮಾಡಲು ಗ್ರಾಮ ಪಂಚಾಯಿತಿ ಆದೇಶ ನೀಡಿತ್ತು.

3 ವರ್ಷಗಳ ಹಿಂದೆ ಬಾಲಕಿಯ ತಂದೆ ಜಗದೀಶ್‌ ಎಂಬುವರು ಕರು ಕೊಂದಿದ್ದರು. ಇದರಿಂದ ಗ್ರಾಮ ದೇವತೆ  ಕೋಪಗೊಂಡಿದ್ದಾಳೆ. ಹೀಗಾಗಿ ಗ್ರಾಮದಲ್ಲಿ ಯಾರಿಗೂ ಮದುವೆಯಾಗುವುದಿಲ್ಲ. ದೇವತೆ ಕೋಪ ಶಮನಕ್ಕೆ ಜಗದೀಶ್‌ ತಮ್ಮ ಮಗಳನ್ನು ಸಮ ವಯಸ್ಸಲ್ಲದ ಹುಡುಗನಿಗೆ ಕೊಟ್ಟು ಮದುವೆ ಮಾಡಬೇಕು ಎಂದು ಪಂಚಾಯಿತಿ ಫ‌ರ್ಮಾನು ಹೊರಡಿಸಿತ್ತು. ಆದರೆ  ತೀರ್ಮಾನಕ್ಕೆ ಬಾಲಕಿ ತಾಯಿ ಆಕ್ಷೇಪಿಸಿದ್ದಲ್ಲದೆ ಸ್ಥಳೀಯ ಆಡಳಿತಕ್ಕೆ ದೂರು ನೀಡಿದ್ದರು. ಅದರಂತೆ ಧಾವಿಸಿ ಬಂದ ಜಿಲ್ಲಾಡಳಿತ ಬಾಲಕಿಯ ತಂದೆ ಸೇರಿ ನಾಲ್ವರ ವಿರುದ್ಧ ಕೇಸು ಹಾಕುವುದಾಗಿ ಎಚ್ಚರಿಕೆ ನೀಡಿತು. ಇಷ್ಟು ಮಾತ್ರವಲ್ಲ ಗ್ರಾಮದ ವಿರುದ್ಧವೇ ಕೇಸು ಹಾಕುವ ಎಚ್ಚರಿಕೆಯನ್ನೂ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next