ಚಿಕ್ಕಬಳ್ಳಾಪುರ: ಸರ್ಕಾರಿ ಇಲಾಖೆಗಳಿಗೆ ಮಾತೃ ಇಲಾಖೆ ಆಗಿರುವ ಕಂದಾಯ ಇಲಾಖೆಯನ್ನು ಸಂಪೂರ್ಣ ಕಾಗದ ರಹಿತ ಮಾಡುವ ನಿಟ್ಟಿನಲ್ಲಿ ಆರಂಭಿಸಿರುವ ಇ-ಅಫೀಸ್ ಕಡತ ವಿಲೇವಾರಿಗೆ ಜಿಲ್ಲಾದ್ಯಂತ ಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಗಿದೆ.
ಜಿಲ್ಲಾದ್ಯಂತ ಇ- ಅಫೀಸ್ ಮೂಲ ಕವೇ ಸಂಪೂರ್ಣ ಕಡತ ವಿಲೇವಾರಿಗೆ ಜಿಲ್ಲಾಧಿ ಕಾರಿಗಳ ಕಚೇರಿಯಿಂದ ಹಿಡಿದು ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿವರೆಗೂ ಒತ್ತು ಕೊಡಲಾಗಿದ್ದು, ಜಿಲ್ಲೆಯಲ್ಲಿ ಇಲ್ಲಿವರೆಗೂ 9,533 ಕಡತಗಳನ್ನು ಇ- ಅಫೀಸ್ ಮೂಲಕ ವಿಲೇವಾರಿ ಮಾಡಲಾಗಿದೆ.
ಏನಿದು ಇ- ಅಫೀಸ್?: ಸರ್ಕಾರಿ ಕಚೇರಿಗಳಲ್ಲಿ ಕಾಗದ ಬಳಕೆಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿ ನಲ್ಲಿ ಆನ್‌ಲೈನ್ ತಂತ್ರಾಂಶದ ಮೂಲಕ ಕಡತಗಳ ವಿಲೇವಾರಿ ಮಾಡಲು ಕಂದಾಯ ಇಲಾಖೆ ಎನ್‌ಐಸಿ ಸಹಯೋಗದೊಂದಿಗೆ ಇ- ಅಫೀಸ್ ಮೂಲಕ ಕಡತಗಳ ವಿಲೇವಾರಿಗೆ ಮುಂದಾಗಿದ್ದು, ಸಾರ್ವಜನಿ ಕರು ಕಂದಾಯ ಇಲಾಖೆಗೆ ಏನೇ ಅರ್ಜಿ ಸಲ್ಲಿಸಿದರೂ ಅದು ಟಪಾಲ್ ಮೂಲಕ ಒಮ್ಮೆ ಸ್ಪೀಕರಿಸಿ ಅಲ್ಲಿಯೆ ಅರ್ಜಿ ಸಮೇತ ಎಲ್ಲಾ ಮೂಲ ದಾಖಲೆಗಳು ಸ್ಕ್ಯಾನ್ ಆಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಂತ್ರಾಂಶದ ಮೂಲಕವೇ ಅವರ ಲಾಗಿನ್‌ಗೆ ಹೋಗುತ್ತದೆ. ಯಾರು ಕೂಡ ದಾಖಲೆಗಳನ್ನು ಅಥವಾ ಅರ್ಜಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವ ಅಗತ್ಯವೇ ಇರುವುದಿಲ್ಲ. ಜಾತಿ ಪ್ರಮಾಣ, ಆದಾಯ ಪ್ರಮಾಣ ಪತ್ರ, ಜನನ, ಮರಣ ಪ್ರಮಾಣ ಪತ್ರ ಪಡೆಯಲು ಅಥವಾ ಜಮೀನಿಗೆ ಸಂಬಂಧಿಸಿದ ಪಹಣಿ ತಿದ್ದುಪಡಿ, ಪೌತಿ ಖಾತೆ, ಖಾತೆ ಬದಲಾವಣೆ, ಪೋಡಿ ಮತ್ತಿತರ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಇ- ಅಫೀಸ್ ಮೂಲಕವೇ ವಿಲೇವಾರಿ ಮಾಡಲಾಗುತ್ತದೆ. ಇದರಿಂದ ಕಾಗದ ಬಳಕೆ ಅವಶ್ಯಕತೆ ಇರುವುದಿಲ್ಲ.
ಜತೆಗೆ ಇ- ಅಫೀಸ್ ಮೂಲಕ ಕಡತಗಳ ವಿಲೇವಾರಿ ಆಗುವುದರಿಂದ ಎಲ್ಲೂ ಕೂಡ ಸಾರ್ವಜನಿಕರು ಸಲ್ಲಿಸುವ ಕಡತಗಳ ಕಳುವು ಆಗಿರುವ ದೂರುಗಳು ಅಥವಾ ಸಾರ್ವಜನಿಕರು ಅರ್ಜಿ ಜತೆಗೆ ಸಲ್ಲಿಸಿದ ದಾಖಲೆಗಳು ಅಸಮರ್ಪಕ ಎಂಬುದನ್ನು ನೆಪವಾಗಿ ಇಟ್ಟುಕೊಂಡು ಅಧಿಕಾರಿಗಳು ಕಡತ ವಿಲೇವಾರಿಗೆ ವಿಳಂಬ ಮಾಡಲು ಅವಕಾಶ ಇರುವುದಿಲ್ಲ. ಅರ್ಜಿ ಸಲ್ಲಿಸಿದ ಬಳಿಕ ಇ- ಅಫೀಸ್ ಮೂಲಕ ಕಡತ ವಿಲೇವಾರಿ ಆಗುವು ದರಿಂದ ಸಲ್ಲಿಕೆಯಾದ ಅರ್ಜಿ ಯಾರ ಲಾಗಿನ್‌ನಲ್ಲಿ ಉಳಿದಿದೆ. ಪಕ್ರಿಯೆ ಯಾವ ಹಂತದಲ್ಲಿ ಬಾಕಿ ಇದೆ ಎಂಬುದರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.
ಒಮ್ಮೆ ಟಪಾಲ್‌ನಲ್ಲಿ ಸ್ವೀಕರಿಸುವ ಅರ್ಜಿ ಕಚೇರಿ ಗುಮಾಸ್ತನಿಂದ ಹಿಡಿದು ಕಚೇರಿ ಅಧೀಕ್ಷಕ, ಬಳಿಕ ಕಳೆ ಹಂತದ ಅಧಿಕಾರಿಗಳ ಪರಿಶೀಲನೆ ಬಳಿಕ ತಹಶೀಲ್ದಾರ್‌ಗೆ ಹೋಗುತ್ತದೆ. ಅವಶ್ಯಕತೆ ಇದ್ದರೆ ಎಸಿ ಅಥವ ಡೀಸಿ ಕಚೇರಿಗೆ ಇ- ಅಫೀಸ್ ಮೂಲಕವೇ ಕಡತ ರವಾನೆ ಆಗುತ್ತದೆ.
ಇ- ಅಫೀಸ್ ಸ್‌ಗೆ ಎಲ್ಲಲ್ಲಿ ಎಷ್ಟು ಉಪಕರಣಗಳು ಇವೆ?: ಇ- ಅಫೀಸ್ ಮೂಲಕ ಕಡತ ವಿಲೇವಾರಿ ಮಾಡಲು ಅಗತ್ಯವಾದ ಉಪಕರಣಗಳನ್ನು ಡೀಸಿ, ಎಸಿ ಹಾಗೂ ತಾಲೂಕು ಕಚೇರಿಗಳಿಗೆ ಒದಗಿಸಲಾಗಿದೆ. ಡೀಸಿ ಕಚೇರಿಯಲ್ಲಿ ಇ- ಅಫೀಸ್ ಗೆ 22 ಕಂಪ್ಯೂಟರ್, 5 ಸ್ಕ್ಯಾನರ್, 15 ಪ್ರಿಂಟರ್‌ಗಳನ್ನು ಅಳವಡಿಸಲಾಗಿದೆ. 5 ಸ್ಕ್ಯಾನರ್ ಬೇಕಿದೆ. ಎಸಿ ಕಚೇರಿಯಲ್ಲಿ 9 ಕಂಪ್ಯೂಟರ್, 1 ಸ್ಕ್ಯಾನರ್, 5 ಪ್ರಿಂಟರ್‌ಗಳನ್ನು ಅಳವಡಿಸಲಾಗಿದೆ.
ಇನ್ನೂ 4 ಕಂಪ್ಯೂಟರ್, 4 ಸ್ಕ್ಯಾನರ್, 3 ಪ್ರಿಂಟರ್ ಬೇಕಿದೆ. ಚಿಕ್ಕಬಳ್ಳಾಪುರ ತಾಲೂಕು ಕಚೇರಿಯಲ್ಲಿ 19 ಕಂಪ್ಯೂಟರ್, 10 ಸ್ಕ್ಯಾನರ್, 1 ಪ್ರಿಂಟರ್ ಇದ್ದರೆ ಶಿಡ್ಲಘಟ್ಟ ತಾಲೂಕು ಕಚೇರಿಯಲ್ಲಿ 16 ಕಂಪ್ಯೂಟರ್ ಮಾತ್ರ ಇದೆ. ಇನ್ನೂ 17 ಕಂಪ್ಯೂಟರ್, 5 ಸ್ಕ್ಯಾನರ್, 6 ಪ್ರಿಂಟರ್ ಬೇಕಿದೆ. ಚಿಂತಾಮಣಿಯಲ್ಲಿ ಕೇವಲ 6 ಕಂಪ್ಯೂಟರ್ ಮಾತ್ರ ಇದ್ದು ಇನ್ನೂ 36 ಕಂಪ್ಯೂಟರ್ ಅವಶ್ಯಕತೆ ಇದೆ. 40 ಸ್ಕ್ಯಾನರ್ ಬೇಕಿದೆ. ಬಾಗೇಪಲ್ಲಿಯಲ್ಲಿ 16 ಕಂಪ್ಯೂಟರ್ ಇದ್ದು ಇನ್ನೂ 16 ಬೇಕಿದೆ. 21 ಸ್ಕ್ಯಾನರ್ ಬೇಕಿದೆ. ಗುಡಿಬಂಡೆಯಲ್ಲಿ 10 ಕಂಪ್ಯೂಟರ್ ಇದ್ದು, ಇನ್ನೂ 7 ಕಂಪ್ಯೂಟರ್ ಬೇಕಿದೆ. ಗೌರಿಬಿದನೂರಲ್ಲಿ 10 ಕಂಪ್ಯೂಟರ್ ಇದ್ದು ಇನ್ನೂ 22 ಕಂಪ್ಯೂಟರ್‌ಗಳು ಅವಶ್ಯಕತೆ ಇವೆ. 35 ಸ್ಕ್ಯಾನರ್‌ಗಳು ಬೇಕಿದೆ.
– ಕಾಗತಿ ನಾಗರಾಜಪ್ಪ