Advertisement

ಎಫ್ಐಎಚ್‌ ಸೀರಿಸ್‌: ಭಾರತ ಚಾಂಪಿಯನ್‌

12:26 AM Jun 16, 2019 | Team Udayavani |

ಭುವನೇಶ್ವರ: ಒಲಿಂಪಿಕ್‌ ಅರ್ಹತೆಯ ಹುರುಪಿನಲ್ಲಿದ್ದ ಭಾರತೀಯ ಹಾಕಿ ತಂಡ ಎಫ್ಐಎಚ್‌ ಸೀರಿಸ್‌ ಫೈನಲ್ಸ್‌ ಹಾಕಿ ಪಂದ್ಯಾವಳಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶನಿವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಆತಿಥೇಯ ತಂಡ ದಕ್ಷಿಣ ಆಫ್ರಿಕಾವನ್ನು 5-1 ಗೋಲುಗಳಿಂದ ಕೆಡವಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.


Advertisement

ವಿಶ್ವದ 5ನೇ ರ್‍ಯಾಂಕಿಂಗ್‌ ತಂಡವಾಗಿರುವ ಭಾರತ ಕೂಟದುದ್ದಕ್ಕೂ ಅಜೇಯವಾಗಿ ಉಳಿದು ಚಾಂಪಿಯನ್ನರ ಆಟವನ್ನಾಡಿತು. ಪ್ರಶಸ್ತಿ ಕಾಳಗದಲ್ಲಿ ಡ್ರ್ಯಾಗ್‌ಫ್ಲಿಕರ್‌ಗಳಾದ ವರುಣ್‌ ಕುಮಾರ್‌ (2ನೇ, 49ನೇ ನಿಮಿಷ) ಮತ್ತು ಹರ್ಮನ್‌ಪ್ರೀತ್‌ ಸಿಂಗ್‌ (11ನೇ, 25ನೇ ನಿಮಿಷ) ತಲಾ 2 ಗೋಲು ಹೊಡೆದರು. ಇನ್ನೊಂದು ಗೋಲು ವಿವೇಕ್‌ ಸಾಗರ್‌ ಪ್ರಸಾದ್‌ ಅವರಿಂದ 35ನೇ ನಿಮಿಷದಲ್ಲಿ ದಾಖಲಾಯಿತು. ದಕ್ಷಿಣ ಆಫ್ರಿಕಾದ ಏಕೈಕ ಗೋಲನ್ನು 53ನೇ ನಿಮಿಷದಲ್ಲಿ ರಿಚರ್ಡ್‌ ಪೌಟ್ಜ್ ಹೊಡೆದರು.

3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಏಶ್ಯನ್‌ ಗೇಮ್ಸ್‌ ಚಾಂಪಿಯನ್‌ ಜಪಾನ್‌ 4-2 ಗೋಲುಗಳಿಂದ ಅಮೆರಿಕವನ್ನು ಕೆಡವಿತು.

ಈ ಕೂಟದಲ್ಲಿ ಮೊದಲೆರಡು ಸ್ಥಾನ ಸಂಪಾದಿಸಿದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಒಲಿಂಪಿಕ್‌ ಅರ್ಹತಾ ಕೂಟದ ಅಂತಿಮ ಸುತ್ತು ಪ್ರವೇಶಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next