ಭುವನೇಶ್ವರ: ಮತ್ತೊಂದು ಶೂಟೌಟ್ ಫಲಿತಾಂಶ ಕಂಡ ವನಿತಾ ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ಭಾರತ ತಂಡ ಜರ್ಮನಿ ವಿರುದ್ಧ 3-0 ಗೆಲುವು ಸಾಧಿಸಿದೆ.
ಶನಿವಾರದ 1-2 ಶೂಟೌಟ್ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಮೊದಲ ಪಂದ್ಯದಂತೆ ರವಿವಾರದ ಮುಖಾಮುಖಿಯೂ ನಿಗದಿತ ಅವಧಿಯಲ್ಲಿ 1-1ರಿಂದ ಸಮನಾಗಿತ್ತು. ಶೂಟೌಟ್‌ನಲ್ಲಿ ಭಾರತ ತನ್ನ ಮೊದಲ ಮೂರೂ ಅವಕಾಶಗಳಲ್ಲಿ ಗೋಲು ಸಿಡಿಸಿದರೆ, ಜರ್ಮನಿಯ ಅವಕಾಶಗಳನ್ನೆಲ್ಲ ಗೋಲ್ ಕೀಪರ್ ಸವಿತಾ ತಡೆದರು.
ಪಂದ್ಯದ 29ನೇ ನಿಮಿಷದಲ್ಲಿ ಫೆಲಿಶಿಯಾ ವೀಡರ್ಮನ್ ಖಾತೆ ತೆರೆದು ಜರ್ಮನಿಗೆ ಮುನ್ನಡೆ ಕೊಡಿಸಿದ್ದರು. 40ನೇ ನಿಮಿಷದಲ್ಲಿ ನಿಶಾ ಪೆನಾಲ್ಟಿ ಕಾರ್ನರ್ ಮೂಲಕ ಪಂದ್ಯವನ್ನು ಸಮಬಲಕ್ಕೆ ತಂದರು.
ಭಾರತ ತನ್ನ ಮುಂದಿನ ಪಂದ್ಯಗಳನ್ನು ಇಂಗ್ಲೆಂಡ್ ವಿರುದ್ಧ ಎ. 2-3ರಂದು ಭುವನೇಶ್ವರದಲ್ಲೇ ಆಡಲಿದೆ.