Advertisement

ಹಾಕಿ: ಆಸೀಸ್‌ ವಿರುದ್ಧ ಎಡವಿದ ಭಾರತ

10:03 AM Feb 22, 2020 | Sriram |

ಭುವನೇಶ್ವರ: ಎಫ್ಐಎಚ್‌ ಪ್ರೊ ಹಾಕಿ ಲೀಗ್‌ ಕೂಟದ ಶುಕ್ರವಾರದ ರೋಚಕ ಸೆಣಸಾಟದಲ್ಲಿ ಆತಿಥೇಯ ಭಾರತ ದಿಟ್ಟ ಹೋರಾಟ ನಡೆಸಿಯೂ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯುಕ್ಕೆ 3-4 ಗೋಲುಗಳಿಂದ ಶರಣಾಯಿತು.

Advertisement

ಡೈಲಾನ್‌ ವೊದರ್‌ಸ್ಪೂನ್‌ (6ನೇ ನಿಮಿಷ), ಟಾಮ್‌ ವಿಕ್‌ಹ್ಯಾಮ್‌ (18ನೇ ನಿಮಿಷ), ಲಾಕ್ಲಾನ್‌ ಶಾರ್ಪ್‌ (41ನೇ ನಿಮಿಷ) ಹಾಗೂ ಜೇಕಬ್‌ ಆ್ಯಂಡರ್ಸನ್‌ (42ನೇ ನಿಮಿಷ) ಆಸ್ಟ್ರೇಲಿಯದ ಗೋಲುವೀರರೆನಿಸಿದರು.

ಭಾರತದ ಪರ ರಾಜ್‌ಕುಮಾರ್‌ ಪಾಲ್‌ ಅವಳಿ ಗೋಲು ಹೊಡೆದರು (36ನೇ ಹಾಗೂ 47ನೇ ನಿಮಿಷ). 52ನೇ ನಿಮಿಷದಲ್ಲಿ ರೂಪಿಂದರ್‌ ಪಾಲ್‌ ಅವರಿಂದ ಗೋಲು ಸಿಡಿಯಿತು. ಉಳಿದ 8 ನಿಮಿಷಗಳಲ್ಲಿ ಪಂದ್ಯವನ್ನು ಸಮ ಬಲಕ್ಕೆ ತರಲು ಭಾರತ ಪ್ರಯತ್ನಿಸಿತಾದರೂ ಇದರಲ್ಲಿ ಯಶಸ್ಸು ಕಾಣಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next