Advertisement

FIH ಒಲಿಂಪಿಕ್‌ ಅರ್ಹತಾ ಹಾಕಿ ಕೂಟ: ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತಕ್ಕೆ ಸೋಲು

11:23 PM Jan 18, 2024 | Team Udayavani |

ರಾಂಚಿ: ಭಾರತೀಯ ವನಿತಾ ಹಾಕಿ ತಂಡವು ಎಫ್ಐಎಚ್‌ ಒಲಿಂಪಿಕ್‌ ಅರ್ಹತಾ ಹಾಕಿ ಕೂಟದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಜರ್ಮನಿ ವಿರುದ್ಧ ಕಠಿನವಾಗಿ ಹೋರಾಡಿದರೂ ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ 3-4 ಅಂತರದಿಂದ ಸೋಲನ್ನು ಕಂಡಿತು.

Advertisement

ನಿಗದಿತ ಆಟದ ಸಮಯದ ವೇಳೆ ಭಾರತ ಮತ್ತು ಜರ್ಮನಿ 2-2 ಸಮಬಲ ಸಾಧಿಸಿದ್ದರಿಂದ ಫ‌ಲಿತಾಂಶ ನಿರ್ಣಯಿಸಲು ಪೆನಾಲ್ಟಿ ಶೂಟೌಟ್‌ ಅಳವಡಿಸಲಾಯಿತು. ಶೂಟೌಟ್‌ನಲ್ಲಿ ಗೆಲುವು ಸಾಧಿಸಿದ ಜರ್ಮನಿ ತಂಡವು ಫೈನಲಿಗೇರಿತಲ್ಲದೇ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆಡುವ ಅರ್ಹತೆ ಗಳಿಸಿತು.

ಭಾರತಕ್ಕೂ ಅವಕಾಶ

ಭಾರತ ತಂಡವು ಶುಕ್ರವಾರ 3 ಮತ್ತು 4ನೇ ಸ್ಥಾನಕ್ಕಾಗಿ ನಡೆ ಯುವ ಪಂದ್ಯದಲ್ಲಿ ಜಪಾನ್‌ ತಂಡ ವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆಗಳಿಸಲಿದೆ. ಈ ಕೂಟದ ಅಗ್ರ 3 ತಂಡಗಳು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲಿವೆ. ಈ ಕೂಟದ ಪ್ರಶಸ್ತಿಗಾಗಿ 5ನೇ ರ್‍ಯಾಂಕಿನ ಜರ್ಮನಿ ತಂಡವು ಅಮೆರಿಕವನ್ನು ಎದುರಿಸಲಿದೆ.

ದ್ವಿತೀಯ ಸೆಮಿಫೈನಲ್‌ನಲ್ಲಿ ಭಾರತದ ದೀಪಿಕಾ 15ನೇ ಮತ್ತು ಇಶಿಕಾ ಚೌಧರಿ 59ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದರೆ ಜರ್ಮನಿ ಪರ ಚಾರ್ಲೊಟ್‌ ಸ್ಟಪೆನ್‌ಹಾರ್ಸ್ಡ್ 27 ಮತ್ತು 57ನೇ ನಿಮಿಷದಲ್ಲಿ ಗೋಲು ಹೊಡೆದಿದ್ದರು.

Advertisement

ಅಮೆರಿಕ ಫೈನಲಿಗೆ
ದಿನದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಅಮೆರಿಕ ತಂಡವು ಮಾಜಿ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಜಪಾನ್‌ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಫೈನಲಿಗೇರಿತಲ್ಲದೇ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿಕೊಂಡಿತು.
ಜಪಾನ್‌ ತಂಡವು 38ನೇ ನಿಮಿಷದಲ್ಲಿ ಅಮಿರು ಶಿಮಡ ಮೂಲಕ ಗೋಲು ಹೊಡೆದು ಮುನ್ನಡೆ ಸಾಧಿಸಿದ್ದರೂ ಅಮರಿಕ ಕೊನೆ ಹಂತದಲ್ಲಿ ಎರಡು ಗೋಲು ಹೊಡೆದು ಗೆಲುವು ಒಲಿಸಿಕೊಂಡಿತು. ಆ್ಯಶೆÉ ಹಾಫ್ಮನ್‌ 52ನೇ ಮತ್ತು ಅಬಿಗೈಲ್‌ ತಮೆರ್‌ 55ನೇ ನಿಮಿಷದಲ್ಲಿ ಗೋಲು ಹೊಡೆದು ಸಂಭ್ರಮಿಸಿದರು. ಇಬ್ಬರೂ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲನ್ನು ಹೊಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next