Advertisement

ಎಫ್ಐಎಚ್‌ ಹಾಕಿ: ಇಂದು ಭಾರತ-ಬೆಲ್ಜಿಯಂ ಮುಖಾಮುಖೀ

10:12 PM Feb 07, 2020 | Sriram |

ಭುವನೇಶ್ವರ: ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಕೂಟದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ ಪುರುಷರ ತಂಡ ಶನಿವಾರ ವಿಶ್ವ ಚಾಂಪಿಯನ್‌ ಖ್ಯಾತಿಯ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

Advertisement

ಮೊದಲ ಸುತ್ತಿನ ಪಂದ್ಯದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಭಾರತ 2-1 ಅಂತರದ ಜಯ ಸಾಧಿಸಿತ್ತು. ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಅಂಕಪಟ್ಟಿಯಲ್ಲಿ ಭಾರತೀಯರು 5 ಅಂಕದೊಂದಿಗೆ 5ನೇ ಸ್ಥಾನದಲ್ಲಿದ್ದಾರೆ. 4 ಪಂದ್ಯವನ್ನಾಡಿರುವ ಬೆಲ್ಜಿಯಂ 3 ಗೆಲುವು, ಒಂದು ಪೆನಾಲ್ಟಿ ಶೂಟೌಟ್‌ ಜಯದೊಂದಿಗೆ 11 ಅಂಕ ಪಡೆದು ಅಗ್ರಸ್ಥಾನಿಯಾದೆ.

ಬೆಲ್ಜಿಯಂ ಬಲಿಷ್ಠ ಎದುರಾಳಿ. ಈಗಾಗಲೇ ಪ್ರಮುಖ ಪಂದ್ಯಗಳನ್ನು ಗೆದ್ದು ಮಿಂಚಿದೆ. ಈ ತಂಡವನ್ನು ಸೋಲಿಸುವುದು ಭಾರತಕ್ಕೆ ದೊಡ್ಡ ಸವಾಲಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next