ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳಾಗಿರುವ ಅಜಾಮ್ ಖಾನ್ ಮತ್ತು ನಹೀದ್ ಹಸನ್ ಗೆದ್ದಿದ್ದಾರೆ. ವಿಶೇಷವೆಂದರೆ, ಅವರಿಬ್ಬರೂ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಅಖಿಲೇಶ್ ಯಾದವ್ ಸಂಪುಟದಲ್ಲಿ ಸಚಿವರಾಗಿದ್ದ ಅಜಾಮ್ ಖಾನ್ ಅವರು ರಾಮ್‌ಪುರ್ ಕ್ಷೇತ್ರದಿಂದ ಸತತ 9ನೇ ಬಾರಿಗೆ ಸ್ಪರ್ಧಿಸಿ ಗೆದ್ದಿದ್ದಾರೆ.
ಹಾಲಿ ಚುನಾವಣೆಯಲ್ಲಿ ಅವರು ಬಿಜೆಪಿಯ ಅಕಾಶ್ ಸಕ್ಸೇನಾ ವಿರುದ್ಧ 1.31 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಹಲವು ಆರೋಪಗಳ ಹಿನ್ನೆಲೆಯಲ್ಲಿ ಸೀತಾಪುರ ಜೈಲಲ್ಲಿದ್ದಾರೆ ಖಾನ್.
ಇದನ್ನೂ ಓದಿ:ಗಾರ್ಮಿನ್ ಇನ್‍ಸ್ಟಿಂಕ್ಟ್ 2 ಸರಣಿ ಸ್ಮಾರ್ಟ್ ವಾಚ್ ಗಳ ಬಿಡುಗಡೆ
ಶಾಮ್ಲಿ ಜಿಲ್ಲೆಯ ಕೈರಾನಾದಲ್ಲಿ ಸಮಾಜವಾದಿ ಪಕ್ಷದ ನಹೀದ್ ಹುಸೇನ್ ಅವರು ಸತತ ಮೂರನೇ ಬಾರಿಗೆ ಗೆದ್ದಿದ್ದಾರೆ.
ಈ ಬಾರಿ ಅವರು ಬಿಜೆಪಿಯ ಮೃಗಾಂಕಾ ಸಿಂಗ್ ವಿರುದ್ಧ 25 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಹಸನ್‌ಗೆ 1.31 ಲಕ್ಷ ಮತಗಳು ಪ್ರಾಪ್ತಿಯಾಗಿವೆ.