Advertisement

Fighter trailer; ಸಮಾಜದ ಒಳಿತಿಗಾಗಿ ‘ಫೈಟರ್’ ಹೊಡೆದಾಟ

03:08 PM Oct 02, 2023 | Team Udayavani |

ಸಾಮಾನ್ಯವಾಗಿ “ಫೈಟರ್‌’ ಎಂದರೆ ಅಖಾಡದಲ್ಲಿ ಹೊಡೆದಾಡುವವ ಅಥವಾ ಎದುರಾಳಿಗಳ ಜೊತೆ ಗುದ್ದಾಡುವವನು. ಆದರೆ ವಿನೋದ್‌ ಪ್ರಭಾಕರ್‌ ನಟನೆಯ “ಫೈಟರ್‌’ ಟ್ರೇಲರ್‌ ನೋಡಿದರೆ ಅದಕ್ಕೊಂದು ಬೇರೆ ರೀತಿಯಾದ ಅರ್ಥ ಸಿಗುತ್ತದೆ. ಈ “ಫೈಟರ್‌’ ನ್ಯಾಯಕ್ಕಾಗಿ, ಸಮಾಜದ ಒಳಿತಿಗಾಗಿ, ದುಷ್ಟರನ್ನು ಸದೆ ಬಡಿಯುವ, ಅಬಲರಿಗೆ ದೊಡ್ಡ ಶಕ್ತಿಯಾಗಿ ನಿಲ್ಲುವ, ರೈತರ ಪಾಲಿನ ಆಪ್ತರಕ್ಷಕನಾಗಿರುವ ವ್ಯಕ್ತಿ.

Advertisement

ಹೌದು. ದಿನನಿತ್ಯ ಅನೇಕ ಸಮಸ್ಯೆಗಳು, ಸಂಘರ್ಷಗಳು ಸಮಾಜದಲ್ಲಿ ಘಟಿಸುತ್ತಲೇ ಇರುತ್ತದೆ. ಅದನ್ನೆಲ್ಲಾ ಎದುರಿಸಲು ನಿಮ್ಮೊಳಗೊಬ್ಬ “ಫೈಟರ್‌’ ಇರಬೇಕು ಎಂಬುದೇ ಈ ಚಿತ್ರದ ಸಾರಾಂಶ ಎಂಬ ಒನ್‌ಲೈನ್‌ ಅಂಶ ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕ ನೂತನ್‌ ಉಮೇಶ್‌.

ಪ್ರಸ್ತುತ ಸಮಾಜದಲ್ಲಿ ಅನ್ನದಾತನಿಗೆ ಆಗುತ್ತಿರುವ ಅನ್ಯಾಯ ಅಷ್ಟಿಷ್ಟಲ್ಲ. ಅದನ್ನೆಲ್ಲಾ ಸರಿಯಾದ ಮಾರ್ಗದಲ್ಲಿ ಪರಿಹರಿಸಲು ಒಬ್ಬ ವ್ಯಕ್ತಿಯಾಗಿ, ಒಂದು ಶಕ್ತಿಯಾಗಿ ನಿಲ್ಲಬಲ್ಲವನೇ “ಫೈಟರ್‌’ ಎಂದು ಸಾರುತ್ತದೆ ಚಿತ್ರದ ಟ್ರೇಲರ್‌. ಪಕ್ಕಾ ಮಾಸ್‌, ಜತೆಗೊಂದಿಷ್ಟು ಲವ್‌, ಸೆಂಟಿಮೆಂಟ್‌ ಅಂಶವನ್ನೊಳಗೊಂಡ ಈ ಚಿತ್ರದ ಟ್ರೇಲರ್‌ ಔಟ್‌ ಆ್ಯಂಡ್‌ ಔಟ್‌ ಎಂಟರ್‌ಟೈನ್ಮೆಂಟ್‌ ಕಥಾಹಂದರ ಎಂಬುದು ಗೋಚರ ವಾಗುತ್ತದೆ.

ಟ್ರೇಲರ್‌ನಲ್ಲಿ ನಾಯಕ ವಿನೋದ್‌ ಪ್ರಭಾ ಕರ್‌ ಹಲವು ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡಿದ್ದಾರೆ. ಪಾವನಾ ಹಾಗೂ ಲೇಖಾಚಂದ್ರ ನಾಯಕಿಯರಾಗಿ ಕಾಣಿಸಿಕೊಂಡಿದ್ದಾ. “ಆಕಾಶ್‌ ಎಂಟರ್‌ ಪ್ರೈಸಸ್‌’ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next