Advertisement
ಅಂದು ಬೆಳಗ್ಗೆ 10ರಿಂದ 11 ಗಂಟೆಯ ತನಕ ಎಲ್ಲ ನಾಗರಿಕರು ತಮ್ಮ ಮನೆ ಮತ್ತು ಸುತ್ತಮುತ್ತ ತೆರೆದ ಪ್ರದೇಶ, ವಸ್ತುಗಳಲ್ಲಿ ಸಂಗ್ರಹವಾಗಿ ರುವ ನೀರನ್ನು ಬರಿದು ಮಾಡಿ ಸ್ವಚ್ಛಗೊಳಿಸುವ ಜತೆಗೆ ಸೊಳ್ಳೆ ಲಾರ್ವಾ ಪತ್ತೆ ಹಚ್ಚಿ ನಾಶ ಮಾಡುವ ಕಾರ್ಯಾಚರಣೆ (ಡ್ರೈವ್ ಡೇ) ನಡೆಸಲಾಗುವುದು ಎಂದವರು ತಿಳಿಸಿದ್ದಾರೆ.
Related Articles
ಸದ್ಯ ಮಂಗಳೂರು ನಗರದಲ್ಲಿ ಮುಂದೆ ತಾಲೂಕುಗಳಲ್ಲಿಯೂ ಡ್ರೈವ್ ಡೇ ಅಭಿಯಾನ ನಡೆಸಲಾಗು ವುದು. ಡೆಂಗ್ಯೂ ಸೊಳ್ಳೆಗಳ ನಾಶಕ್ಕೆ ಫಾಗಿಂಗ್ ಪರಿಹಾರವಲ್ಲ ಎಂದು ವೈದ್ಯರೂ ಸಲಹೆ ಮಾಡಿದ್ದಾರೆ. ಸೊಳ್ಳೆಗಳ ಲಾರ್ವಾ ನಾಶವೊಂದೇ ಸದ್ಯದ ಪರಿಹಾರ. ಅದಕ್ಕೆ ಹೆಚ್ಚಿನ ಆದ್ಯತೆ ಮತ್ತು ಗಮನವನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ವಿವರಿಸಿದರು.
Advertisement
ಪರಿಹಾರಕ್ಕೆ ಮನವಿಸಾಂಕ್ರಾಮಿಕ ರೋಗಗಳಿಂದ ಸಾವ ನ್ನಪ್ಪಿದವರಿಗೆ ಸರಕಾರದಿಂದ ಪರಿಹಾರ ಲಭ್ಯವಿಲ್ಲ. ಆದರೆ ಡೆಂಗ್ಯೂನಿಂದ ಸಾವನ್ನಪ್ಪಿದವರಿಗೆ ಪರಿಹಾರ ಒದಗಿಸುವಂತೆ ಮನವಿ ಮಾಡಲಾಗುವುದು ಎಂದರು. ಎಜೆ ಆಸ್ಪತ್ರೆಯ ಡೀನ್ ಡಾ| ಅಶೋಕ್ ಹೆಗ್ಡೆ, ಕಾ.ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಸಂವಾದಕ್ಕೆ ಮುನ್ನ ಪತ್ರಕರ್ತರು ಮತ್ತು ಕುಟುಂಬದವರ ಉಚಿತ ರಕ್ತ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದ.ಕ. 46; ಉಡುಪಿ 97 ಪ್ರಕರಣ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 46 ಡೆಂಗ್ಯೂ ಪ್ರಕರಣ ದಾಖಲಾಗಿದೆ. ಶುಕ್ರವಾರ ದಾಖಲಾಗಿರುವ 46 ಪ್ರಕರಣಗಳ ಪೈಕಿ 40 ಮಂಗಳೂರು ತಾಲೂಕು, 4 ಬಂಟ್ವಾಳ ತಾಲೂಕು ಮತ್ತು 2 ಪ್ರಕರಣ ಇತರ ಜಿಲ್ಲೆಗಳದು. 35 ಸಾವಿರ ರೂ. ದಂಡ
ಸೊಳ್ಳೆ ಉತ್ಪತ್ತಿಗೆ ಪೂರಕ ತಾಣಗಳಿರುವ ಕಟ್ಟಡಗಳಿಗೆ ದಂಡ ಮುಂದುವರಿದಿದ್ದು, ಶುಕ್ರವಾರ 35 ಸಾವಿರ ರೂ. ದಂಡ ಸಂಗ್ರಹವಾಗಿದೆ. ಪಾಂಡೇಶ್ವರ, ಬಂದರು ಪ್ರದೇಶಗಳಲ್ಲಿ ದಂಡ ವಿಧಿಸಲಾಗಿದೆ. ಉಡುಪಿ: 97 ಡೆಂಗ್ಯೂ 50 ಮಲೇರಿಯಾ
ಉಡುಪಿ: ಜಿಲ್ಲೆಯಲ್ಲಿ ಜು.26ರ ವರೆಗೆ ಒಟ್ಟು 97 ಡೆಂಗ್ಯೂ ಮತ್ತು 50 ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ಹೆಚ್ಚು ಡೆಂಗ್ಯೂ ಪತ್ತೆ ಯಾದ ವಾರಂಬಳ್ಳಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಫಾಗಿಂಗ್ ಮಾಡಲಾಗಿದೆ. ಸೊಳ್ಳೆ ಉತ್ಪತ್ತಿ ತಾಣ ನಾಶವೇ ಮುಖ್ಯ ಗುರಿ,ಇದರಲ್ಲಿ ಆಶಾ ಕಾರ್ಯಕರ್ತರು ಕೈ ಜೋಡಿಸುತ್ತಿದ್ದಾರೆಎಂದು ರಾ. ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಪ್ರಶಾಂತ್ ಭಟ್ ತಿಳಿಸಿದ್ದಾರೆ.