Advertisement
ಮಂಗಳವಾರ ವಿಶ್ವ ದಾದಿಯರ ದಿನಾಚರಣೆಯ ಅಂಗವಾಗಿ ಎಲ್ಲ ದಾದಿಯರಿಗೆ ಶುಭಾಶಯ ಕೋರಿದ ಅವರು, ಮಾನವೀಯತೆಯ ಕಲ್ಯಾಣದಲ್ಲಿ ರೋಗಿಗಳ ಸೇವೆ ಅತ್ಯುನ್ನತವಾಗಿದೆ. ಕೋವಿಡ್ ಮಹಾಮಾರಿಯ ಆತಂಕದ ಸಂದರ್ಭದಲ್ಲಿ ವಿಶ್ವಾದ್ಯಂತ ದಾದಿಯರು ತಮ್ಮ ವತಿಯಿಂದ ಅಚಲ ಸೇವೆಯನ್ನು ನೀಡುತ್ತಿದ್ದಾರೆ. ಮಾನವೀಯತೆಯ ನಿಜರೂಪವನ್ನು ಅವರಲ್ಲಿ ನಾವಿಂದು ಕಾಣಬಹುದು. ನಿಸ್ವಾರ್ಥ ಸೇವೆಯಿಂದ ಈ ಸಹೋದರಿಯರು ಸಮಾಜದಲ್ಲಿ ಪ್ರೀತಿ ಮತ್ತು ಗೌರವದ ಸ್ಥಾನಗಳನ್ನೂಹೊಂದಿದ್ದಾರೆ. ಇಂದು, ಪ್ರಪಂಚವು ಆತಂಕದಲ್ಲಿರುವಾಗ ಅನೇಕ ದಾದಿಯರು ದೇವದೂತರಂತೆ ರೋಗಿಗಳ ಪ್ರಾಣ ಉಳಿಸಲು ನಿರಂತರ ಹೋರಾಟವನ್ನು ಮಾಡುತ್ತಿದ್ದಾರೆ. ರೋಗಿಗಳ ಚಿಕಿತ್ಸೆಯ ಜತೆಗೆ, ಅವರು ರೋಗಿಗಳಿಗೆ ತಾಳ್ಮೆ, ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯನ್ನು ನೀಡುತ್ತಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ದಾದಿಯರ ಪಾತ್ರ ಮುಖ್ಯವಾಗಿದೆ. ತಮ್ಮ ಜೀವನವನ್ನು ಅಪಾಯದಲ್ಲಿ ಇರಿಸಿ ಮತ್ತು ಕುಟುಂಬದ ಎಲ್ಲ ಕಲ್ಪನೆಯನ್ನು ಬದಿಗಿಟ್ಟು, ಅನೇಕ ದಾದಿಯರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ವಿಶ್ವದ, ದೇಶ, ರಾಜ್ಯ , ನಗರ, ಗ್ರಾಮೀಣ, ದೂರದ ಪ್ರದೇಶಗಳಲ್ಲಿ ಇವರು ಇಂದು ಹಗಲು -ರಾತ್ರಿಯೆನ್ನದೆ ಕರ್ತವ್ಯದಲ್ಲಿದ್ದಾರೆ. ಅವರ ಸೇವೆಗೆ ಕೃತಜ್ಞತೆ ಸಲ್ಲಿಸಲು ಪದಗಳು ಸಾಲವು ಎಂದು ಅಜಿತ್ ಪವಾರ್ ಹೇಳಿದರು.
Advertisement
ಕೋವಿಡ್ ವಿರುದ್ಧ ಹೋರಾಟ ದಾದಿಯರ ಸೇವೆ ಶ್ಲಾಘನೀಯ: ಅಜಿತ್
11:12 AM May 14, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.