Advertisement

ಫ‌ಲಿತಾಂಶಕ್ಕೂ ಮೊದಲೇ ಮಾರಾಮಾರಿ

06:00 AM Sep 03, 2018 | Team Udayavani |

ಚನ್ನರಾಯಪಟ್ಟಣ: ಪುರಸಭಾ ಚುನಾವಣೆ ಫ‌ಲಿತಾಂಶ ಹೊರಬೀಳುವ ಮುನ್ನವೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು, ಆಸ್ಪತ್ರೆ ಸೇರಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ವಾರ್ಡ್‌ ನಂ.17ರಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಎದುರಾಗಿದೆ. ಆದರೆ, ಮತದಾನ ಮುಗಿದ ಎರಡು ದಿನ ಕಳೆದರೂ ಕಾವು ಕಡಿಮೆಯಾಗಿರಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಅವರ ಬೆಂಬಲಿಗರು ಶನಿವಾರ ರಾತ್ರಿ 10.30ರ ಸಮಯದಲ್ಲಿ ಮತ ಎಣಿಕೆಗೆ ಒಂದು ದಿನದ ಮುಂಚಿತವಾಗಿಯೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಇದಕ್ಕೆ ಜೆಡಿಎಸ್‌ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಬಳಿಕ ಎರಡೂ ಪಕ್ಷದ ಕಾರ್ಯಕರ್ತರು ಬಡಿದಾಡಿಕೊಂಡಿದ್ದು, ಎರಡೂ ಗುಂಪಿನವರು ಗಾಯಗೊಂಡಿದ್ದಾರೆ.

Advertisement

ರಾತ್ರಿ ನಡೆದ ಘಟನೆಯಲ್ಲಿ ಜೆಡಿಎಸ್‌ ಕಾರ್ಯಕರ್ತ ಸಫಿರ್‌, ಯೂನಸ್‌, ಸೈಫ್ ಎಂಬ ಒಂದೇ ಕುಟುಂಬದ ಮೂರು ಮಂದಿ ಹಾಗೂ ಕಾಂಗ್ರೆಸ್‌ ಪಕ್ಷದ ಮುಬಾರಕ್‌, ನಕೃತ್‌, ತಾಸಿಂ ಎಂಬುವರ ನಡುವೆ ಮಾತಿನ ಚಕಮಕಿ ನಡೆದು ಇಬ್ಬರೂ ಪರಸ್ಪರ ಬಡಿದಾಡಿಕೊಂಡರು. ಜೆಡಿಎಸ್‌ ಕಾರ್ಯಕರ್ತರು ಬ್ಲೇಡ್‌ನಿಂದ ಕಾಂಗ್ರೆಸ್‌ ಕಾರ್ಯಕರ್ತರ ಕುತ್ತಿಗೆ, ಎದೆ, ಕೈಕಾಲುಗಳಿಗೆ ಹಲ್ಲೆ ಮಾಡಿದ್ದಾರೆಂದು ಹಲ್ಲೆಗೊಳಗಾದ ಕಾಂಗ್ರೆಸ್‌ ಕಾರ್ಯಕರ್ತ ಖಾಸಿಂ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ ದ್ದಾರೆ. ಪಟ್ಟಣದ ಬಾಗೂರು ರಸ್ತೆಯ ವಾರ್ಡ್‌ ನಂ17ರಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. 

ಜೆಡಿಎಸ್‌ ಕಾರ್ಯಕರ್ತರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಎರಡೂ ಗುಂಪಿನ ದೂರಿನನ್ವಯ ಕೇಸು ದಾಖಲಿಸಲಾಗಿದೆ. ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಇದ್ದರೂ ಸ್ಥಳೀಯ ಕಾರ್ಯಕರ್ತರು ತಮ್ಮದು ಬೇರೆ ಬೇರೆ ಪಕ್ಷ ಘರ್ಷಣೆಯಲ್ಲಿ ತೊಡಗಿರುವುದು ಸಾರ್ವಜನಿಕ ವಲಯದಲ್ಲಿ ನಗೆ ಪಾಟಲಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next