Advertisement
ರೈತ ಸಂಘ ಹಾಗೂ ಹಸಿರುಸೇನೆಯಿಂದನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, 1980 ರಲ್ಲಿ ಎಂಪಿಎಂಗೆ 20005.42 ಹೆಕ್ಟೇರ್ ಅರಣ್ಯ ಭೂಮಿಯನ್ನು 40ವರ್ಷಗಳ ಸೀಮಿತ ಅವ ಧಿಗೆ ಲೀಸ್ ಗೆ ನೀಡಲಾಗಿತ್ತು. ಈ ವರ್ಷಕ್ಕೆ ಈ ಒಪ್ಪಂದ ಮುಗಿದಿದೆ ಎಂದು ತಿಳಿಸಿದರು.
Related Articles
Advertisement
ಪತ್ರಕರ್ತ ಶಶಿ ಸಂಪಳ್ಳಿ ಮಾತನಾಡಿ,ಈಗಾಗಲೇ ಎಲ್ಲವನ್ನು ಒಂದೊಂದಾಗಿ ಖಾಸಗೀಕರಣಗೊಳಿಸುತ್ತಿರುವ ರಾಜ್ಯ ಸರ್ಕಾರ ಎಂ.ಪಿ.ಎಂ.ಕಾರ್ಖಾನೆಗೆ ಕೊಟ್ಟ ಅರಣ್ಯಭೂಮಿಅವ ಧಿ ಮುಗಿದಿದ್ದರೂ ಮತ್ತೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಸಂಚು ಹೂಡುತ್ತಿದೆ. ಇದರಿಂದ ಇಡೀ ಪರಿಸರ ನಾಶವಾಗಲಿದೆ. ಭೂಮಿ ನಂಬಿಕೊಂಡಿರುವ ರೈತ, ಅಲ್ಲಿನ ಸಕಲ ಜೀವರಾಶಿಗಳಿಗೆ ಕುತ್ತು ಬರಲಿದೆ. ಇನ್ನಾದರೂ ಸಂಘಟನೆಗಳು, ಹೋರಾಟಗಾರರು, ರೈತರು ಬೀದಿಗಿಳಿದು ದೊಡ್ಡ ಮಟ್ಟದ ಹೋರಾಟ ಮಾಡಬೇಕಿದೆ ಎಂದರು.
ಡಿ.ಎಸ್.ಎಸ್. ರಾಜ್ಯ ಸಂಚಾಲಕ ಶಿವಮೊಗ್ಗದಗುರುಮೂರ್ತಿ ಮಾಡನಾಡಿ, ಎಂ.ಪಿ.ಎಂ.ಗೆ ನೀಡಿದ್ದ 82 ಸಾವಿರ ಎಕರೆ ಅರಣ್ಯಭೂಮಿಯ ನಲವತ್ತು ವರ್ಷದಗುತ್ತಿಗೆ ಅವಧಿ ಪೂರ್ಣಗೊಂಡಿದ್ದರು ಮತ್ತೆ ನಲವತ್ತು ವರ್ಷ ಮುಂದುವರೆಸಿ ಖಾಸಗೀಕರಣಗೊಳಿಸಲು ಬಿಡಬಾರದು. ಆದಿತ್ಯ ಬಿರ್ಲಾ ಸಂಸ್ಥೆಗೆ ಕೊಡುವುದಾಗಿಹೇಳಿದಾಗ ನಾವುಗಳು ವಿರೋ ಧಿಸಿದ್ದೆವು. ಹಾಗಾಗಿ ಈಗ ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯ ಜನರು, ರೈತರು, ಹೋರಾಟಗಾರರಲ್ಲಿ ಜಾಗ್ರತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಇದೊಂದು ಜನಾಂದೋಲನವಾಗಬೇಕು ಎನ್ನುವುದು ಉದ್ದೇಶ ಎಂದು ಹೇಳಿದರು.
ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ, ಪಶ್ಚಿಮಘಟ್ಟಗಳ ಕಾಡು ನಾಶವಾದರೆ ಮನುಷ್ಯನ ಬದುಕಿಗೆ ಕೊಳ್ಳಿಯಿಟ್ಟಂತಾಗುತ್ತದೆ. ಅಲ್ಲಿ ನೀಲಗಿರಿ, ಅಕೇಷಿಯಾ ಬೆಳೆಸುವುದು ಬೇಡ. ಇದರಿಂದ ಪರಿಸರ ನಾಶವಾಗುತ್ತದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್ ಬಾಬು ಮಾತನಾಡಿ, ರೈತರು ಜಾಗ್ರತರಾಗುವವರೆಗೆ ಸರ್ಕಾರ ತನ್ನ ಹಠಮಾರಿ ಧೋರಣೆಯಿಂದಹಿಂದೆ ಸರಿಯುವುದಿಲ್ಲ. ನೆಲ, ಜಲ, ಅರಣ್ಯವನ್ನು ಉಳಿಸಿಕೊಳ್ಳಬೇಕಿದೆ. ಎಲ್ಲಾ ಸರ್ಕಾರಗಳು ಲಾಭಕ್ಕೆ ನಿಂತಿವೆ. ಸುಗ್ರೀವಾಜ್ಞೆ ಮೂಲಕ ಭೂಸುಧಾರಣೆ ಕಾಯಿದೆ ಜಾರಿಗೆ ತಂದಿರುವ ರಾಜ್ಯ ಸರ್ಕಾರ ವಿದ್ಯುತ್ ದರ ಹೆಚ್ಚಿಸಿ ಜನಸಾಮಾನ್ಯರ ಮೇಲೆ ಹೊರೆ ಹೇರಿದೆ. ದೇಶದ ಸಂಪತ್ತನ್ನು ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕ್ರಪ್ಪ, ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಹೊರಕೇರಪ್ಪ,ಕಮ್ಯುನಿಸ್ಟ್ ಪಕ್ಷದ ಜಿ.ಸಿ.ಸುರೇಶ್‌ಬಾಬು, ರವಿಕುಮಾರ್ ಮಾತನಾಡಿದರು.