ಗುರುಮಠಕಲ್: ಸಂಕ್ರಾಂತಿಯಂದು ಸರಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಸರಕಾರ ಸಿಹಿ ಸುದ್ದಿ ನೀಡುತ್ತೇನೆ ಎಂದು ಕಹಿ ನೀಡಿದೆ ಮತ್ತು ಸೇವಾ ಭದ್ರತೆ ಕಲ್ಪಿಸುವರೆಗೆ ನಮ್ಮ ಮುಷ್ಕಾರ ಮುಂದುವರಿಯುವುದು ಎಂದು ತಾಲೂಕು ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ| ಮಾಣಿಕ್ಯಪ್ಪ ಹೇಳಿದರು.
ಪಟ್ಟಣದ ಪ್ರವಾಸ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವೇತನ ಹೆಚ್ಚು ಮಾಡುವ ಮೂಲಕ ರಾಜ್ಯದಲ್ಲಿ 7500 ಅತಿಥಿ ಉಪನ್ಯಾಸಕರ ವೃತ್ತಿ ಬಿಡುವಂತೆ ಆಗುತ್ತಿದೆ. ಕಮಿಟಿ ವರದಿಯನ್ನು ಮುಚ್ಚಿಟ್ಟು ಉನ್ನತ ಶಿಕ್ಷಣ ಸಚಿವರು ನಮಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಸಿಎಂ ಬಸವರಾಜ ಬೊಮ್ಮಯಿ ಮಧ್ಯವಹಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು. ಪೋರ್ಟಲ್‌ನಲ್ಲಿರುವ ಸುದ್ದಿಯನ್ನು ರದ್ದುಪಡಿಸಬೇಕು. ಪದವಿ ತರಗತಿಗಳು ನಡೆಸುವ ಹೊಣೆ ಸರಕಾರದ ಮೇಲಿದೆ ಎಂದು ಅವರು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಅಂಜಪ್ಪ, ಕೋಶಾಧ್ಯಕ್ಷ ವೆಂಕಟೇಶ ಕೊಲ್ಲಿ, ಪ್ರಧಾನ ಕಾರ್ಯದರ್ಶಿಗಳಾದ ಡಾ| ಬಾಲಪ್ಪ, ಪದಾಧಿಕಾರಿಗಳಾದ ಬಸಪ್ಪ, ಚಂದ್ರಶೇಖರ, ವೀರೇಶ, ಡಾ| ಪ್ರಸನ್ನಕುಮಾರ, ರಾಜೇಶಕುಮಾರ, ಡಾ| ಸಂಗೀತಾ, ಡಾ| ರಾಮುಲು ಮೇದಕ್, ಅಮರನಾಥ ಗೌಡ, ಹುಸೇನಪ್ಪ, ಡಾ| ಮಲ್ಲಪ್ಪ, ಮನ್ಸೂರ್ ಅಹ್ಮದ್, ಮಹೇಶ, ಪ್ರೇಮಲತಾ, ಲಕ್ಷ್ಮೀದೇವಿ ಇದ್ದರು.