Advertisement
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಕೂರು ವನ್ಯಜೀವಿ ವಲಯದ ಚೆನ್ನಂಗಿ ಶಾಖೆಯ ಅಟ್ಟೂರು ಉಪ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದ ವೇಳೆ ಹುಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.
Related Articles
Advertisement
ಅಂದಾಜು ಏಳರಿಂದ ಎಂಟು ವರ್ಷದ ಗಂಡು ಹುಲಿಯಾಗಿದ್ದು, ತನ್ನ ಆವಾಸ ಸ್ಥಾನದ ಅಧಿಪತ್ಯಕ್ಕಾಗಿ ಬೇರೊಂದು ಹುಲಿಯೊಂದಿಗೆ ಕಾದಾಟದಲ್ಲಿ ಉಂಟಾದ ಗಾಯದಿಂದ ಮೃತಪಟ್ಟಿದೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಹೆಚ್ಚಿನ ಪರೀಕ್ಷೆಗಾಗಿ ಮೃತ ಹುಲಿಯ ಕಳೇಬರದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವರದಿ ಬಂದ ನಂತರವಷ್ಟೆ ನಿಖರ ಮಾಹಿತಿ ತಿಳಿಯಲಿದೆ. ಮೃತ ಹುಲಿಯ ಕಳೇಬರವನ್ನು ಪಂಚಾಯಿತಿದಾರರ ಸಮಕ್ಷಮ ಸುಡಲಾಯಿತೆಂದು ಹುಲಿ ಯೋಜನೆ ನಿರ್ದೇಶಕ ಹರೀಶ್ ಕುಮಾರ್ ನರಗುಂದ ರವರು ಉದಯವಾಣಿಗೆ ಮಾಹಿತಿ ನೀಡಿದರು.