ಶಿರಹಟ್ಟಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಪ್ರತಿಯೊಂದು ರಂಗದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆದರು ಅವರ ಮೇಲೆ ನಿತ್ಯ ದೌರ್ಜನ್ಯ ಹಾಗೂ ಶೋಷಣೆಗಳು ನಡೆಯುತ್ತಲೇ ಇವೆ. ಆದ್ದರಿಂದ ಮಹಿಳೆಯರು ಅದನ್ನು ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದು ಪ್ರಭಾರಿ ಪಿಎಸ್‌ಐ ಪಿ.ಎಂ. ಬಡಿಗೇರ ಹೇಳಿದರು.
ಇಲ್ಲಿಯ ಆಸರೆ ಅಂಗವಿಕರ ಕ್ಷೇಮಾಭಿವೃದ್ಧಿ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ನಡೆದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಸ್ತ್ರೀಯರ ಮೇಲೆ ನಡೆಯುತ್ತಿರುವ ಶೋಷಣೆಗಳು ನಿಲ್ಲಬೇಕು. ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಮಾಡಬೇಕು. ವರದಕ್ಷಿಣೆ ಕಿರುಕುಳ, ಲಿಂಗ ತಾರತಮ್ಯಗಳಂತಹ ಅನಿಷ್ಠ ಪದ್ಧತಿ ಹೋಗಲಾಡಿಸಬೇಕು. ಪುರುಷನ ಸರಿಸಮವಾದ ಸ್ಥಾನಮಾನ ಮಹಿಳೆ ಪಡೆದಾಗ ಮಾತ್ರ ಮಹಿಳೆಗೆ ಸ್ವತಂತ್ರ್ಯ ಸಿಕ್ಕಂತೆ. ಆದ್ದರಿಂದ ಮಹಿಳೆಯರು ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ ನಿಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು. ಮಹಿಳೆಯರು ಶೋಷಣೆ ವಿರುದ್ಧ ರಕ್ಷಣೆಯಿಲ್ಲದಿದ್ದರೆ ಸ್ವಾತಂತ್ರ್ಯಕ್ಕೆ ಅರ್ಥವೇ ಇರುವುದಿಲ್ಲ. ಆದ್ದರಿಂದ ಮಹಿಳೆಯರ ವೈಯಕ್ತಿಕ ಸ್ವಾತಂತ್ರ್ಯ, ಘನತೆಯಿಂದ ಬಾಳುವ ಹಕ್ಕು, ಹೆಣ್ಣು ಮಕ್ಕಳ ಮಾರಾಟ, ಬಸ್‌ನಲ್ಲಿ ಚುಡಾಯಿಸುವುದನ್ನು ತಡೆಯಲು ಹಾಗೂ ಶೋಷಣೆಯಿಂದ ಮುಕ್ತವಾಗಿ ಇರಿಸಲು ಶೋಷಣೆ ಹಕ್ಕುನ್ನು ಜಾರಿಗೆ ತರಲಾಗಿದೆ. ಆದ್ದರಿಂದ ಮಹಿಳೆಯರು ತಮ್ಮ ಹಕ್ಕುಗಳನ್ನು ಸಮಯಕ್ಕೆ ಸರಿಯಾಗಿ ಬಳಸಿಕೊಳ್ಳುವುದರ ಮೂಲಕ ಸ್ವಾತಂತ್ರ್ಯವಾಗಿ ಬದುಕಬೇಕು ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಫಕ್ಕೀರೇಶ ಮ್ಯಾಟಣ್ಣವರ, ಶಶಿಧರ ಶಿರಸಂಗಿ, ಮುತ್ತರಾಜ ಬಾವಿಮನಿ. ಪ್ರಕಾಶ ಶಿರಗೂರ, ದೇವಪ್ಪ ಬಾಳ್ಳೋಜಿ, ಪ್ರದೀಪ ಗೊಡಚ್ಚಪ್ಪನವರ, ಸಿದ್ದಪ್ಪ ಹುಗಾರ, ಮಂಜುಳಾ ಜಟ್ಟೆಪ್ಪನವರ, ಎಂ.ಎ. ಮುಲ್ಲಾನವರ, ಅಲ್ಲಮಾ ಅಗಸರ, ಆರ್.ಎಂ. ಗೌಡರ, ಎಸ್.ಸಿ. ಶಿವಶಿಂಪರ, ಎಸ್.ಡಿ. ಭೂತಪ್ಪನವರ, ಕೆ.ಎನ್. ಕೊಬಿಹಾಳ, ಎಫ್.ಎಸ್. ಹುಬ್ಬಳ್ಳಿ, ಹಸನಸಾಬ್ ಕಿಲ್ಲೇದಾರ, ಸುಜಾತ ದೊಡ್ಡುರ, ಯಶೋಧಾ ಬಾಳ್ಳೋಜಿ ಇದ್ದರು.