Advertisement

ನ.8ಕ್ಕೆ ಟಿಪ್ಪು ಜಯಂತಿ ವಿರುದ್ಧ ಹೋರಾಟ

10:58 AM Nov 01, 2017 | |

ಮೈಸೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುವುದನ್ನು ವಿರೋಧಿಸಿ ನ.8ರಂದು ಮೈಸೂರಿನಲ್ಲಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ವತಿಯಿಂದ ಬೃಹತ್‌ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ವಕೀಲ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ರಾಜ್ಯದಲ್ಲಿ ತೀವ್ರ ವಿರೋಧದ ನಡುವೆಯೂ ಸರ್ಕಾರ ಈ ಬಾರಿಯೂ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದೆ. ಇದನ್ನು ವಿರೋಧಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಹೋರಾಟ ಆರಂಭವಾಗಿದೆ. ಇದರ ನಡುವೆ ನ.8ರಂದು ಮೈಸೂರಿನಲ್ಲಿ ದೊಡ್ಡಮಟ್ಟದ ಹೋರಾಟ ನಡೆಯಲಿದೆ ಎಂದು ಹೇಳಿದರು.

ಬಿಜೆಪಿ ಶಾಸಕ ಸಿ.ಟಿ.ರವಿ ಹೋರಾಟದ ನೇತೃತ್ವ ವಹಿಸಲಿದ್ದಾರೆ. ಅಂದಿನ ಹೋರಾಟ ಕೇವಲ ಪ್ರಾರಂಭವಾಗಿದ್ದು, ಇದರ ನಡುವೆಯೂ ಆಚರಣೆಗೆ ಸರ್ಕಾರ ಮುಂದಾದಲ್ಲಿ, ಇದು ಸಿದ್ದರಾಮಯ್ಯ ಅವರ ಸರ್ಕಾರದ ಹಾಗೂ ಟಿಪ್ಪು ಜಯಂತಿ ಆಚರಣೆ ಕಡೆಯ ವರ್ಷವಾಗಲಿದೆ ಎಂದರು.

ಸಂಘಟನೆಗಳಿಗೆ ಕುಮ್ಮಕ್ಕು: ಟಿಪ್ಪುವಿನ ಇತಿಹಾಸದ ಪ್ರಾಥಮಿಕ ದಾಖಲೆಗಳನ್ನು ಗಮನಿಸಿದರೆ ಆತ ಮತಾಂಧ ಮುಸ್ಲಿಂ ಆಗಿದ್ದು, ಅಸಹಿಷ್ಣತೆ ತೋರಿದ ರಾಜನಾಗಿ, ಕನ್ನಡ ವಿರೋಧಿಯಾಗಿ, ಹಿಂದೂ ಹಾಗೂ ಕ್ರೆ„ಸ್ತ ದೇವಾಲಯಗಳನ್ನು ಧ್ವಂಸಗೊಳಿಸಿರುವುದು ಗೊತ್ತಾಗಲಿದೆ.

ಇಂತಹ ವ್ಯಕ್ತಿಯ ಜಯಂತಿಯನ್ನು ಆಚರಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿರುವ ಕೆಎಫ್ಡಿ, ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳಿಗೆ ಕುಮ್ಮಕ್ಕು ನೀಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಮುಸ್ಲಿಂ ಮೂಲಭೂತವಾದ ಹೆಚ್ಚಾಗಿದೆ ಎಂದರು.

Advertisement

ಒಂದೊಮ್ಮೆ ರಾಜ್ಯ ಸರ್ಕಾರಕ್ಕೆ ಮುಸ್ಲಿಮರನ್ನು ಓಲೈಸಲೇಬೇಕೆಂಬ ಉದ್ದೇಶವಿದ್ದರೆ ಸಂತ ಶಿಶುನಾಳ ಷರೀಫ‌ರ ಜಯಂತಿ ಆಚರಣೆ ಮಾಡಬಹುದಿತ್ತು ಎಂದರು. ಸುದ್ದಿಗೋಷ್ಠಿಯಲ್ಲಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಸಹ ಸಂಚಾಲಕ ರಾಬರ್ಟ್‌ ರೋಸಾರಿಯೋ, ಮೈ.ಕಾ.ಪ್ರೇಮ್‌ಕುಮಾರ್‌, ವಿಎಚ್‌ಪಿ ಮುಖಂಡ ಮುರಳೀಧರ್‌ ಇದ್ದರು.
 
ವೀರಪ್ಪನ್‌ ಜಯಂತಿ..!: ಕನ್ನಡ ಭಾಷೆಯನ್ನು ಅತ್ಯಂತ ಕಟುವಾಗಿ ವಿರೋಧಿಸಿದ್ದ ಟಿಪ್ಪು ಸುಲ್ತಾನ್‌ ಜಯಂತಿಯನ್ನು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದಲೇ ಆಚರಣೆ ಮಾಡುತ್ತಿರುವುದು ಶೋಷನೀಯ. ಈ ಆಚರಣೆ ವಿರೋಧಿಸದಿದ್ದರೆ ಮುಂದಿನ ದಿನಗಳಲ್ಲಿ ಯಾರಧ್ದೋ ವೋಟು ಸಿಗಲಿದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಣ್ಯ ಇಲಾಖೆ ವತಿಯಿಂದ ವೀರಪ್ಪನ್‌ ಜಯಂತಿ ಆಚರಣೆ ಮಾಡಿದರೂ ಯಾವ ಅಚ್ಚರಿ ಇಲ್ಲ ಎಂದು ವಕೀಲ ತೇಜಸ್ವಿ ಸೂರ್ಯ ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next