Advertisement

ಅಪೌಷ್ಟಿಕತೆ ವಿರುದ್ಧ ಸಮರ ಸಾರಿದ ಮೋದಿ

04:12 PM Sep 26, 2022 | Team Udayavani |

ಮಹಾಲಿಂಗಪುರ: ಪ್ರಧಾನಿ ಮೋದಿಯವರು ಪೋಷಣ್‌ ಅಭಿಯಾನದಂತಹ ಕಾರ್ಯಕ್ರಮ ಜಾರಿಗೊಳಿಸುವ ಮೂಲಕ ಅಪೌಷ್ಟಿಕತೆಯ ವಿರುದ್ಧ ಸಮರ ಸಾರಿದ್ದಾರೆ. ದೇಶದಿಂದ ಅಪೌಷ್ಟಿಕತೆ ಹೋಗಲಾಡಿಸಲು ಯೋಜನೆ ರೂಪಿಸಿದ್ದಾರೆ. ಮಹಿಳಾ ಸ್ವಾವಲಂಬನೆ ಮತ್ತು ಸಬಲೀಕರಣಕ್ಕಾಗಿ ಸ್ತ್ರೀಶಕ್ತಿ ಸಂಘಗಳಿಗೆ ಹಲವಾರು ಯೋಜನೆ ಜಾರಿಗೊಳಿಸಿದ್ದು, ಮಹಿಳೆಯರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.

Advertisement

ಪಟ್ಟಣದ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಖೆಯಿಂದ ಹಮ್ಮಿಕೊಂಡಿದ್ದ ಪೋಷಣ ಮಾಸಾಚರಣೆ ಹಾಗೂ ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆಯಡಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಬೀಜಧನ ಚೆಕ್‌ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾಹಿತಿ ಕೊರತೆಯಿಂದ ಸರ್ಕಾರದ ಯಾವುದೇ ಯೋಜನೆಗಳು ವಿಫಲವಾಗಬಾರದು. ಸಮಾಜದ ತಳಮಟ್ಟದಲ್ಲಿನ ಜನರಿಗೆ ಯೋಜನೆಗಳ ಅರಿವು ಮೂಡಿಸುವುದು ಅಗತ್ಯ, ಅಂತಹ ಕೆಲಸವನ್ನು ಮಾಡುತ್ತಿರುವ ಇಲಾಖೆ ಹಾಗೂ ಅಧಿಕಾರಿಗಳ ಶ್ರಮ ಶ್ಲಾಘನೀಯ ಎಂದರು.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಆರೋಗ್ಯ ಸಿಬ್ಬಂದಿ ಮತ್ತು ಗಣ್ಯರ ಸಮ್ಮುಖದಲ್ಲಿ ಸ್ಥಳೀಯ ಬನಶಂಕರಿ ದೇವಿ ಸಾಂಸ್ಕೃತಿಕ ಭವನದಲ್ಲಿ ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಗರ್ಭಿಣಿಯರಿಗೆ ಉಡಿತುಂಬಿ, ಆರತಿ ಎತ್ತಿ ಸೀಮಂತ ಮಾಡಿ ಪೋಷಣ್‌ ಮಸಾಚರಣೆ ಆಚರಿಸಲಾಯಿತು. ಶಾಸಕ ಸಿದ್ದು ಸವದಿ ಅವರ ಪತ್ನಿ ಮೀನಾಕ್ಷಿಯವರೇ ಸ್ವತಃ ಸೀಮಂತ ಕಾರ್ಯಕ್ರಮ ನೆರವೇರಿಸಿದರು.

ಶಾಸಕರು ಗರ್ಭಿಣಿಯರಿಗೆ ಸಹಾಯಧನ ನೀಡಿದರು. ಸಿಡಿಪಿಓ ಅನ್ನಪೂರ್ಣ ಹುರಕಡ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ರಕ್ತಹೀನತೆ, ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ, ಮಗು ಮತ್ತು ಗರ್ಭಿಣಿಯರ ಮರಣ ಮುಂತಾದ ಸಮಸ್ಯೆಗಳಿಗೆ ಪ್ರತಿ ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ಪೋಷಣ್‌ ಅಭಿಯಾನ ಯೋಜನೆಯಡಿಯಲ್ಲಿ ಮಹಿಳೆ ಮತ್ತು ಸ್ವಾಸ್ಥ್ಯ, ಮಗು ಮತ್ತು ಶಿಕ್ಷಣ, ಆಟಿಕೆಗಳ ಮೂಲಕ ಬೆಳವಣಿಗೆ, ಪೋಷಣ ಅರಿವು ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

Advertisement

ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ತಾಪಂ ಇಒ ಸಂಜೀವ ಹಿಪ್ಪರಗಿ, ಡಾ| ಸಂಜೀವಕುಮಾರ ತೇಲಿ, ಡಾ| ಲಲಿತ ಹೊಂಗಲ, ಶೇಖರ ಅಂಗಡಿ, ಮಹಾಲಿಂಗ ಮುದ್ದಾಪುರ, ಸ್ನೇಹಲ್‌ ಅಂಗಡಿ, ಬಸವರಾಜ ಬುರುಡ, ಡಾ|ಸವಿತಾ ಕೋಳಿಗುಡ್ಡ, ಸರಸ್ವತಿ ರಾಮೋಜಿ, ಲಕ್ಷ್ಮಿಮುದ್ದಾಪುರ, ಶಾಂತಾ ಸೋರಗಾಂವಿ, ಸವಿತಾ ಹೊಸೂರ, ಸುವರ್ಣ ಆಸಂಗಿ, ಶಕುಂತಲಾ ಗೊಂಬಿ, ಸುಲೋಚನಾ ಬಾಡಿಗಿ, ಸುವರ್ಣ ಕೊಪ್ಪದ, ವೈಷ್ಣವಿ ಬಾಗೇವಾಡಿ, ಸುವರ್ಣ ಪತ್ತಾರ ಸೇರಿದಂತೆ ಹಲವರು ಇದ್ದರು. ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್‌.ಗೊಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾಹೇಬಗೌಡ ಝುಂಜರವಾಡ ಸ್ವಾಗತಿಸಿದರು. ನಿವೃತ್ತ ಆರೋಗ್ಯ ನಿರೀಕ್ಷಕ ಡಿ.ಬಿ.ನಾಗನೂರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next