Advertisement

FIFA World Cup Qualifiers: ಭಾರತ-ಆಫ್ಘಾನ್‌ ಸೆಣಸಾಟ

12:01 AM Mar 26, 2024 | Team Udayavani |

ಗುವಾಹಟಿ: 2026ರ ಫಿಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆತಿಥೇಯ ಭಾರತ, ಮಂಗಳವಾರ ಅಫ್ಘಾನಿಸ್ಥಾನ ತಂಡವನ್ನು ಎದುರಿಸಲಿದೆ. ಇದು ಭಾರತ ತಂಡದ ನಾಯಕ ಸುನೀಲ್‌ ಚೆಟ್ರಿ ಅವರ 150ನೇ ಅಂತಾರಾಷ್ಟ್ರೀಯ ಪಂದ್ಯ. ಈ ಮೈಲುಗಲ್ಲು ನೆಟ್ಟ ಭಾರತದ ಮೊದಲಿಗ ಎಂಬ ಹೆಗ್ಗಳಿಕೆ ಅವರದ್ದು.

Advertisement

ಇತ್ತೀಚೆಗಷ್ಟೇ ಅಫ್ಘಾನಿಸ್ಥಾನದ ವಿರುದ್ಧ ಸೌದಿ ಅರೇಬಿಯಾದಲ್ಲಿ ನಡೆದ ಪಂದ್ಯದಲ್ಲಿ ಭಾರತ ಗೋಲುರಹಿತ ಡ್ರಾ ಸಾಧಿಸಿತ್ತು. ಇದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು. ಮಂಗಳವಾರ ಭಾರತ ಗೆದ್ದರೆ, ವಿಶ್ವಕಪ್‌ ಅರ್ಹತಾ ಸುತ್ತಿನ 3ನೇ ಘಟ್ಟಕ್ಕೇರಲು ಅನುಕೂಲವಾಗಲಿದೆ. ಇದರಿಂದ ಏಷ್ಯಾ ಕಪ್‌ಗೂ ಅರ್ಹತೆ ಸಾಧಿಸುವ ಅವಕಾಶವಿದೆ.

ತಂಡದ ಸ್ಥಿತಿ ಹೇಗಿದೆ?
ಸದ್ಯ ವಿಶ್ವಕಪ್‌ ಅರ್ಹತಾ ಸುತ್ತಿನ “ಎ’ ಗುಂಪಿನಲ್ಲಿ 4 ಅಂಕ ಗಳಿ ಸಿರುವ ಭಾರತ 2ನೇ ಸ್ಥಾನದಲ್ಲಿದೆ. ತಂಡಕ್ಕೆ ಇನ್ನೂ 3 ಪಂದ್ಯ ಬಾಕಿ ಯಿದೆ. ಅಫ್ಘಾನಿಸ್ಥಾನ, ಕುವೈತ್‌ (ಜೂ. 6), ಕತಾರ್‌ (ಜೂ. 11) ವಿರುದ್ಧ ಉತ್ತಮ ಪ್ರದರ್ಶನ ನೀಡಿ 4 ಅಂಕ ಸಂಪಾದಿಸಿದರೆ, ವಿಶ್ವಕಪ್‌ ಅರ್ಹತಾ ಸುತ್ತಿನ 3ನೇ ಘಟ್ಟಕ್ಕೇರಬಹುದು. ಇದು ಸಾಧ್ಯವಾಗ ಬೇಕಾದರೆ ಅಫ್ಘಾನ್‌ ವಿರುದ್ಧ ಗೆಲ್ಲಲೇಬೇಕು. ಏಕೆಂದರೆ ಮುಂದೆ ಭಾರತ ಎದುರಿಸಲಿರುವ ಎರಡೂ ತಂಡಗಳು ಬಹಳ ಬಲಿಷ್ಠವಾಗಿವೆ.

 

Advertisement

Udayavani is now on Telegram. Click here to join our channel and stay updated with the latest news.

Next