ಅಲ್ ತುಮಾಮ: ಇರಾನ್‌ಗೆ ಮರ್ಮಾ ಘಾತವಿಕ್ಕಿದ ಕ್ರಿಸ್ಟಿಯನ್ ಪುಲಿಸಿಕ್, ತಮ್ಮ ಏಕೈಕ ಗೋಲ್ ಸಾಹಸದಿಂದ ಅಮೆರಿಕವನ್ನು ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ನಾಕೌಟ್‌ಗೆ ಕೊಂಡೊಯ್ದಿದ್ದಾರೆ.
38ನೇ ನಿಮಿಷದಲ್ಲಿ ದಾಖ ಲಾದ ಈ ಗೋಲು ಪಂದ್ಯದ ಫಲಿತಾಂಶವನ್ನು ನಿರ್ಧರಿಸಿತು. ಹೊರಗಡೆ ಪ್ರತಿಭಟಿಸುತ್ತಿದ್ದ ಇರಾನಿ ಗರು ತಮ್ಮ ತಂಡದ ಸೋಲನ್ನು ಸಂಭ್ರಮಿಸುತ್ತಿದ್ದ ದೃಶ್ಯ ಕಂಡುಬಂತು!
ಆರಂಭದಲ್ಲಿ ಇರಾನ್ ತೀವ್ರ ಪೈಪೋಟಿ ನೀಡಿತು. ಇರಾನ್ ಆಟವನ್ನು ಕಂಡಾಗ 6 ಟೂರ್ನಿ ಗಳಲ್ಲಿ ಇದೇ ಮೊದಲ ಸಲ ನಾಕೌಟ್ ಪ್ರವೇಶಿಸಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಪುಲಿಸಿಕ್ ಇದಕ್ಕೆ ಅವಕಾಶ ಕೊಡ ಲಿಲ್ಲ. ಅವರ ಗೋಲಿನ ಬಳಿಕ ಅಮೆರಿಕ ಮೇಲುಗೈ ಸಾಧಿಸುತ್ತ ಹೋಯಿತು.
ಗೋಲು ಬಾರಿಸುವ ವೇಳೆ ಗಾಯಾಳಾದ ಕ್ರಿಸ್ಟಿಯನ್ ಪುಲಿಸಿಕ್ ಶನಿವಾರ ನಡೆಯಲಿರುವ ನೆದರ್ಲೆಂಡ್ಸ್ ಎದುರಿನ ಪಂದ್ಯಕ್ಕೆ ಲಭ್ಯರಿದ್ದಾರೆ ಎಂಬುದು ಕೋಚ್ ಗ್ರೆಗ್ ಬೆರಾಲ್ಟರ್ ವಿಶ್ವಾಸ.