Advertisement

ಸ್ಪೇನ್‌ ಫೈನಲಿಗೆ

10:14 AM Oct 26, 2017 | Team Udayavani |

ನವಿ ಮುಂಬಯಿ: ಯುರೋಪಿಯನ್‌ ಚಾಂಪಿಯನ್‌ ಸ್ಪೇನ್‌ ತಂಡವು ಮಾಲಿ ತಂಡವನ್ನು 3-1 ಗೋಲುಗಳಿಂದ ಸೋಲಿಸಿ ಫಿಫಾ ಅಂಡರ್‌ 17 ವಿಶ್ವಕಪ್‌ ಫ‌ುಟ್ಬಾಲ್‌ ಕೂಟದ ಫೈನಲ್‌ ಹಂತಕ್ಕೇರಿತು. 

Advertisement

ಮೊದಲ ಅವಧಿಯ ಆಟದಲ್ಲಿ ಸ್ಪೇನ್‌ ಎರಡು ಗೋಲು ಹೊಡೆದು ಮುನ್ನಡೆ ಸಾಧಿಸಿತು. ಎರಡು ಗೋಲನ್ನು ಅಬೆಲ್‌ ರುಯಿಜ್‌ ಹೊಡೆದಿದ್ದರು. ಫೆರಾನ್‌ ಟೊರೆಸ್‌ ಇನ್ನೊಂದು ಗೋಲು ಹೊಡೆದು ಮುನ್ನಡೆಯನ್ನು 3-0ಕ್ಕೇರಿಸಿದ್ದರು. ಪಂದ್ಯದ 74ನೇ ನಿಮಿಷದಲ್ಲಿ ಮಾಲಿ ತನ್ನ ಏಕೈಕ ಗೋಲನ್ನು ಲಸ್ಸಾನ ನಿಡಿಯೆ ಮೂಲಕ ಹೊಡೆಯಿತು. ಈ ಗೆಲುವಿನ ಮೂಲಕ ಸ್ಪೇನ್‌ ನಾಲ್ಕನೇ ಬಾರಿ ಫೈನಲಿಗೇರಿದ ಸಾಧನೆ ಮಾಡಿತು. 2007ರ ಬಳಿಕ ಮೊದಲ ಬಾರಿ ಸ್ಪೇನ್‌ ಫೈನಲಿಗೇರಿದೆ. 

ಫೈನಲ್‌ನಲ್ಲಿ ಸ್ಪೇನ್‌ ಇಂಗ್ಲೆಂಡ್‌ ತಂಡದ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಅ. 28ರಂದು ಕೋಲ್ಕತಾದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next